ಮೋದಿ ಕೋರಿಕೆ: ಬೆಳಗಾವಿ ಅಧಿವೇಶನದಿಂದ ಕಾರವಾರದ 'ಕದಂಬ'ದತ್ತ ಶಾಸಕರು
ಕಾರವಾರ, ನವೆಂಬರ್ 18: ಕದಂಬ ನೌಕಾ ನೆಲೆಯ ವೀಕ್ಷಣೆಗೆ ಒಟ್ಟೂ 157 ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಇಂದು(ನ.18) 12 ಗಂಟೆಗೆ ಐರಾವತ ಬಸ್ ನಲ್ಲಿ ಒಳ ಪ್ರವೇಶಿಸಿದ್ದಾರೆ.
ಕಾರವಾರದ ಅರಗಾ ಸೀಬರ್ಡ್ ಪ್ರವೇಶದ್ವಾರದಲ್ಲಿ ಪ್ರವೇಶಿಸುವ ವೇಳೆ ಬಸ್ಸಿನಲ್ಲಿ ಕುಳಿತ ಜನಪ್ರತಿನಿಧಿಗಳು ಮಾಧ್ಯಮದವರ ಕ್ಯಾಮೆರಾಗಳತ್ತ ಕೈಬೀಸಿ ಪೋಸು ನೀಡಿದರು.


ಬೆಳಗಾವಿಯ ಅಧಿವೇಶನದಲ್ಲಿ ಭಾಗವಹಿಸಿದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿನ ಕದಂಬ ನೌಕಾನೆಲೆಯ ವೀಕ್ಷೆಣೆಗೆ ತೆರಳುವಂತೆ ನೀಡಿದ್ದ ಆಮಂತ್ರಣದ ಮೇರೆಗೆ ಎಲ್ಲರನ್ನು ಇಲ್ಲಿಗೆ ಕರೆತರಲಾಗಿದೆ. ಈ ವೇಳೆ ಅನೇಕರು ಇದೇ ಮೊದಲ ಬಾರಿಗೆ ನೌಕಾನೆಲೆ ಪ್ರವೇಶಿಸುತ್ತಿರುವ ಕುರಿತು ಅಭಿಪ್ರಾಯ ಹಂಚಿಕೊಂಡರು.












Click it and Unblock the Notifications