ಸಚಿವ ದೇಶಪಾಂಡೆಗಿಂತ ಅವರ 'ಹೋಮ್ ಮಿನಿಸ್ಟರ್' ಶ್ರೀಮಂತರು

ಕಾರವಾರ, ಏಪ್ರಿಲ್ 21: ಹಳಿಯಾಳ- ಜೋಯಿಡಾ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಚಿವ ಆರ್.ವಿ.ದೇಶಪಾಂಡೆ, ತಮ್ಮ ಆಸ್ತಿ ಹಾಗೂ ಜವಾಬ್ದಾರಿಗಳ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಆ ಪ್ರಕಾರ ಸಚಿವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರಾಗಿದ್ದಾರೆ.

ದೇಶಪಾಂಡೆ ಹೆಸರಿನಲ್ಲಿ ಚರಾಸ್ತಿಯು ಒಟ್ಟು ರು.22,69,96,666 ಇದ್ದರೆ, ದೇಶಪಾಂಡೆ ಅವರ ಪತ್ನಿ ರಾಧಾ ಹೆಸರಿನಲ್ಲಿ ರು. 112,26,97,153 ಇದೆ. ದೇಶಪಾಂಡೆ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ 18,30,514 ರುಪಾಯಿ ಠೇವಣಿ ಇದ್ದರೆ, ರಾಧಾ ಅವರ ಹೆಸರಿನಲ್ಲಿ 7 ಕೋಟಿ 45 ಲಕ್ಷ 76 ಸಾವಿರ ರುಪಾಯಿ ಇದೆ.

ದೇಶಪಾಂಡೆ ಅವರ ಬಳಿ 3 ಲಕ್ಷ 56 ಸಾವಿರ ನಗದು ಇದ್ದರೆ, ಪತ್ನಿ ರಾಧಾ ಕೈಯಲ್ಲಿ 2 ಲಕ್ಷ 69 ಸಾವಿರ ರುಪಾಯಿ ಇದೆ. ದೇಶಪಾಂಡೆ ಹೆಸರಿನಲ್ಲಿ ಒಟ್ಟು 21ಕೋಟಿ 74 ಲಕ್ಷ 61 ಸಾವಿರ ರುಪಾಯಿ ಮೌಲ್ಯದ ಭೂಮಿ ಇದ್ದರೆ, ರಾಧಾ ಹೆಸರಿನಲ್ಲಿ 8,40,52,506 ರುಪಾಯಿ ಬೆಲೆಯ ಭೂಮಿ ಇದೆ.

Minister RV Deshpande wife richer than him

ದೇಶಪಾಂಡೆಗೆ ಒಟ್ಟು 6,01,124 ರುಪಾಯಿ ಸಾಲ ಇದ್ದರೆ, ರಾಧಾ ಹೆಸರಿನಲ್ಲಿ 2,17,05,413 ರುಪಾಯಿ ಸಾಲ ಇದೆ. ವಿವಿಧ ಖಾಸಗಿ ಕಂಪೆನಿಗಳಲ್ಲಿ ರಾಧಾ ಅವರ ಹೆಸರಿನಲ್ಲಿ 1 ಕೋಟಿ 35 ಲಕ್ಷ 20 ಸಾವಿರದಷ್ಟು ಷೇರುಗಳು ಇವೆ. ಇದರ ಹೊರತಾಗಿ ಇಬ್ಬರ ಹೆಸರಿನಲ್ಲಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಕೃಷಿ ಭೂಮಿ, ಕೃಷಿಯೇತರ ಭೂಮಿ ಕೂಡ ಇವೆ ಎಂದು ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+