• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೌಕ್ತೆ; ಭಟ್ಕಳ, ಅಂಕೋಲಾದಲ್ಲಿ ಹಾನಿ ಪರಿಶೀಲಿಸಿದ ಸಚಿವರು

|

ಕಾರವಾರ, ಮೇ 19; ತೌಕ್ತೆ ಚಂಡಮಾರುತದ ಅಬ್ಬರ ಕರ್ನಾಟಕದಲ್ಲಿ ಕಡಿಮೆಯಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದಲ್ಲಿ ಚಂಡಮಾರುತ ಭಾರೀ ಹಾನಿಯನ್ನು ಮಾಡಿದೆ.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭಟ್ಕಳ, ಅಂಕೋಲಾ ಮತ್ತು ಕುಮಟಾ ತಾಲೂಕಿನಲ್ಲಿ ತೌಕ್ತೆ ಅಬ್ಬರದಿಂದ ಆಗಿರುವ ಹಾನಿಯ ಪರಿಶೀಲನೆಯನ್ನು ನಡೆಸಿದರು.

ವಿಡಿಯೋ; ತೌಕ್ತೆ ಅಬ್ಬರ, ಸಾವಿನಿಂದ ಕ್ಷಣದಲ್ಲಿ ಬಚಾವಾದ ಮಹಿಳೆ ವಿಡಿಯೋ; ತೌಕ್ತೆ ಅಬ್ಬರ, ಸಾವಿನಿಂದ ಕ್ಷಣದಲ್ಲಿ ಬಚಾವಾದ ಮಹಿಳೆ

ಭಟ್ಕಳ ತಾಲೂಕಿನಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಆಶೋಕ ಅವರ ಜೊತೆ ಸಚಿವರು ಭೇಟಿ ನೀಡಿದರು. ಹಾನಿಗೊಳಗಾದವರ ಪಟ್ಟಿಯನ್ನು ಶೀಘ್ರವಾಗಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೌಕ್ತೆ ಅಬ್ಬರ; ಕರ್ನಾಟಕದಲ್ಲಿ 6 ಸಾವು, 121 ಗ್ರಾಮಗಳಲ್ಲಿ ಹಾನಿ ತೌಕ್ತೆ ಅಬ್ಬರ; ಕರ್ನಾಟಕದಲ್ಲಿ 6 ಸಾವು, 121 ಗ್ರಾಮಗಳಲ್ಲಿ ಹಾನಿ

ಚಂಡಮಾರುತದ ಪ್ರಭಾವದಿಂದ ಮೃತಪಟ್ಟ ಭಟ್ಕಳ ತಾಲೂಕಿನ ಲಕ್ಷ್ಮಣ ಈರಪ್ಪ ನಾಯ್ಕ ಅವರ ಕುಟುಂಬದವರಿಗೆ ಸುಮಾರು 5 ಲಕ್ಷ ರೂಪಾಯಿ ಮೊತ್ತದ ಪರಿಹಾರವನ್ನು ಸಚಿವರು ವಿತರಣೆ ಮಾಡಿದರು.

 ತೌಕ್ತೆ ಚಂಡಮಾರುತ; ಕರ್ನಾಟಕದಲ್ಲಿ ಪ್ರಭಾವ ತಗ್ಗುವುದು ಯಾವಾಗ? ಆಗಿರುವ ಹಾನಿಯೆಷ್ಟು? ತೌಕ್ತೆ ಚಂಡಮಾರುತ; ಕರ್ನಾಟಕದಲ್ಲಿ ಪ್ರಭಾವ ತಗ್ಗುವುದು ಯಾವಾಗ? ಆಗಿರುವ ಹಾನಿಯೆಷ್ಟು?

ಭಟ್ಕಳ ತಾಲೂಕಿನಲ್ಲಿ ಚಂಡಮಾರುತದ ಅಬ್ಬರಕ್ಕೆ ಹಲವಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವಾರು ಕಿಲೋಮೀಟರ್ ರಸ್ತೆಗಳಿಗೆ ಹಾನಿಯಾಗಿದೆ. ಒಟ್ಟಾರೆ ನಷ್ಟದ ಅಂದಾಜು ಇನ್ನೂ ಸಿಗಬೇಕಿದೆ.

ಅಂಕೋಲಾ ಹಾಗೂ ಕುಮಟಾ ತಾಲೂಕಿನಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದರು. ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಹಾನಿಗೊಳಗಾದವರ ಪಟ್ಟಿಯನ್ನು ತಯಾರಿಸುವಂತೆ ನಿರ್ದೇಶನ ನೀಡಿದರು.

ಕರ್ನಾಟಕದಲ್ಲಿ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಆದರೆ ಎರಡು ದಿನಗಳ ಕಾಲ ಸುರಿದ ಮಳೆ, ಭಾರೀ ಗಾಳಿಗೆ 121 ಗ್ರಾಮಗಳಲ್ಲಿ ಅಪಾರವಾದ ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ 48 ಗ್ರಾಮಗಳಲ್ಲಿ ಹಾನಿಯಾಗಿದೆ.

ಮಂಗಳವಾರದ ತನಕ ರಾಜ್ಯದಲ್ಲಿ ಚಂಡಮಾರುತದ ಅಬ್ಬರದಿಂದ 8 ಜನರು ಬಲಿಯಾಗಿದ್ದಾರೆ. ಒಟ್ಟು 387 ಮನೆಗಳಿಗೆ ಹಾನಿಯಾಗಿದೆ. 57 ಮನೆಗಳು ಸಂಪೂರ್ಣ ಜಖಂಗೊಂಡಿವೆ. ಉತ್ತರ ಕನ್ನಡದಲ್ಲಿ 97 ಮೀನುಗಾರಿಕೆ ಬೋಟ್‌ಗಳಿಗೆ ಹಾನಿಯಾಗಿದೆ.

ಕಂದಾಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ 48, ಉಡುಪಿ ಜಿಲ್ಲೆಯ 32 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 28, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಗ್ರಾಮಗಲ್ಲಿ ಅಪಾರವಾದ ಹಾನಿಯಾಗಿದೆ. ಆಗಿರುವ ನಷ್ಟದ ಅಂದಾಜನ್ನು ಜಿಲ್ಲಾಡಳಿತಗಳು ಇನ್ನೂ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕಿದೆ.

   Israeli ಸೇನೆಯ ಆರ್ಭಟಕ್ಕೆ ಉಗ್ರರ ಲೀಡರ್ ಮಟಾಶ್ | Oneindia Kannada
   English summary
   Uttara Kannada district in-charge minister Shivaram Hebbar inspected the place which are damaged due to cyclone Tauktae.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X