ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದ ಕದಂಬ ನೌಕಾನೆಲೆಯಲ್ಲಿ ‘ಮೆರಿಟೈಮ್ ಥಿಯೇಟರ್ ಕಮಾಂಡ್’

|
Google Oneindia Kannada News

ಕಾರವಾರ, ನವೆಂಬರ್ 29: ಪೂರ್ವ ಮತ್ತು ಪಶ್ಚಿಮ ನೌಕಾಪಡೆಗಳನ್ನು ವಿಲೀನಗೊಳಿಸಿ, ಭೂಸೇನೆ, ವಾಯುಸೇನೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ನ ಸ್ವತ್ತುಗಳನ್ನು ಹಾಗೂ ಕಾರ್ಯಾಚರಣೆಯನ್ನು ಒಂದೇ ವೇದಿಕೆಯಡಿ ನಿಯಂತ್ರಣಕ್ಕೆ ತರುವ ಮೆರಿಟೈಮ್ ಥಿಯೇಟರ್ ಕಮಾಂಡ್ (ಎಂಟಿಸಿ) ಅನ್ನು ಕಾರವಾರದ ಕದಂಬ ನೌಕಾನೆಲೆಯಲ್ಲಿ ಸ್ಥಾಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಇಲ್ಲಿನ ನೌಕಾನೆಲೆಗೆ ಇನ್ನಷ್ಟು ಬಲ ಬರಲಿದ್ದು, ಕಾರವಾರ ನಗರ ರಕ್ಷಣಾ ವ್ಯವಸ್ಥೆಯ ದೃಷ್ಟಿಯಿಂದ ಇನ್ನಷ್ಟು ಮಹತ್ವ ಪಡೆದುಕೊಳ್ಳಲಿದೆ.

ರಕ್ಷಣಾ ಮತ್ತು ಭದ್ರತಾ ಸಚಿವಾಲಯದ ಮೂಲಗಳ ಪ್ರಕಾರ, ನೌಕಾಪಡೆಯು ನಡೆಸಿದ ಅಧ್ಯಯನದಿಂದ ಮೆರಿಟೈಮ್ ಥಿಯೇಟರ್ ಕಮಾಂಡ್ ರಚನೆಯ ಕುರಿತು ಯೋಜನೆಗಳನ್ನು ರೂಪಿಸಲಾಗಿದೆ. ಈ ಕುರಿತು 2022ರ ವೇಳೆಗೆ ಆದೇಶವಾಗುವ ಸಾಧ್ಯತೆ ಇದ್ದು, ಅನುಮೋದನೆಯ ದಿನಾಂಕದಿಂದ ಒಂಬತ್ತು ತಿಂಗಳಲ್ಲಿ ಎಂಟಿಸಿ ತನ್ನ ನೌಕಾ ಚಟುವಟಿಕೆಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಇನ್ನು, ಸರ್ಕಾರದಿಂದ ಅನುಮೋದನೆಗಳನ್ನು ತೆಗೆದುಕೊಳ್ಳುವ ಮೊದಲು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (ಸಿಡಿಎಸ್) ಅಧ್ಯಯನ ಹಾಗೂ ಪರಿಶೀಲನೆ ನಡೆಸಲಿದ್ದಾರೆ.

ಮೆರಿಟೈಮ್ ಥಿಯೇಟರ್ ಕಮಾಂಡ್‌ನಿಂದ ನಿರ್ವಹಣೆ

ಮೆರಿಟೈಮ್ ಥಿಯೇಟರ್ ಕಮಾಂಡ್‌ನಿಂದ ನಿರ್ವಹಣೆ

ಕೋಸ್ಟ್ ಗಾರ್ಡ್ ಇಷ್ಟು ದಿನಗಳ ಕಾಲ ರಕ್ಷಣಾ ಸಚಿವಾಲಯಕ್ಕೆ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ವರದಿ ಮಾಡಿಕೊಳ್ಳುತ್ತಿತ್ತು. ಮೆರಿಟೈಮ್ ಥಿಯೇಟರ್ ಕಮಾಂಡ್ ಸ್ಥಾಪನೆಯಾದ ಬಳಿಕ ಇದು ಮುಂದುವರಿಸಲಿದೆಯಾದರೂ, ಕೋಸ್ಟ್ ಗಾರ್ಡ್ ನ ಹಡಗುಗಳು ಸೇರಿದಂತೆ ಅದರ ಸ್ವತ್ತುಗಳನ್ನು ಮೆರಿಟೈಮ್ ಥಿಯೇಟರ್ ಕಮಾಂಡ್‌ನಿಂದ ನಿರ್ವಹಿಸಲ್ಪಡಲಿದೆ. ಆದರೆ, ಮೆರಿಟೈಮ್ ಥಿಯೇಟರ್ ಕಮಾಂಡ್ ಯಾರಿಗೆ ವರದಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದೆಯಾದರೂ, ಸಿಡಿಎಸ್ ನೇತೃತ್ವದ ಜಂಟಿ ಮುಖ್ಯಸ್ಥರ ಸಿಬ್ಬಂದಿ ಸಮಿತಿಗೆ ಇದರ ಮೇಲುಸ್ತುವಾರಿ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಿಗ್ 29ಕೆ ವಿಮಾನ ಪತನ; ಪೈಲಟ್ ಗಾಗಿ ತೀವ್ರ ಶೋಧ ಕಾರ್ಯಮಿಗ್ 29ಕೆ ವಿಮಾನ ಪತನ; ಪೈಲಟ್ ಗಾಗಿ ತೀವ್ರ ಶೋಧ ಕಾರ್ಯ

ನೌಕಾಪಡೆ ಮತ್ತು ವಾಯುಪಡೆಯಿಂದ ಸಿಬ್ಬಂದಿ

ನೌಕಾಪಡೆ ಮತ್ತು ವಾಯುಪಡೆಯಿಂದ ಸಿಬ್ಬಂದಿ

ಇನ್ನು, ದೇಶದ ಏಕೈಕ ತ್ರಿ- ಸರ್ವಿಸ್ ಕಮಾಂಡಿಂಗ್ ಆಗಿರುವ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (ಎಎನ್‌ಸಿ) ಕೂಡ ಮೆರಿಟೈಮ್ ಥಿಯೇಟರ್ ಕಮಾಂಡ್‌ನ ಅಡಿಯಲ್ಲಿ ಬರುವ ಸಾಧ್ಯತೆಯಿದೆ. ಇದು ಹೊರ ಠಾಣೆಗಳಂತೆ ಕಾರ್ಯನಿರ್ವಹಿಸಲಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಂದ ನಿರ್ದಿಷ್ಟವಾದ ಸಿಬ್ಬಂದಿ ಮತ್ತು ಸಲಕರಣೆಗಳನ್ನು ಒಗ್ಗೂಡಿಸುವ ಹಾಗೂ ಮೆರಿಟೈಮ್ ಥಿಯೇಟರ್ ಕಮಾಂಡ್ ಎಂಬ ಸಾಮಾನ್ಯ ನಾಯಕತ್ವದ ಅಡಿಯಲ್ಲಿ ತರುವ ಬಗ್ಗೆ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಸಹಕಾರಿಯಾಗಲಿದೆ.

ವಿಲೀನ ಪ್ರಕ್ರಿಯೆಯ ಹಿಂದಿನ ಉದ್ದೇಶ

ವಿಲೀನ ಪ್ರಕ್ರಿಯೆಯ ಹಿಂದಿನ ಉದ್ದೇಶ

ಕೇರಳ ಮತ್ತು ಪೋರ್ಟ್ ಬ್ಲೇರ್ ಮೂಲದ ಸೇನೆಯ ಎರಡು ಬ್ರಿಗೇಡ್‌ಗಳು, ಗುಜರಾತ್‌ನ ಜಮ್ನಾನಗರ (ಜಾಗ್ವಾರ್) ಮತ್ತು ತಮಿಳುನಾಡಿನ ತಂಜಾವೂರು (ಸು30ಎಂಕೆಐ) ವಾಯುಸೇನೆಯ ಸ್ವತ್ತುಗಳು ಮೆರಿಟೈಮ್ ಥಿಯೇಟರ್ ಕಮಾಂಡ್‌ನ ವ್ಯಾಪ್ತಿಗೆ ಬರಲಿದೆ ಎನ್ನಲಾಗಿದೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪಶ್ಚಿಮ ಮತ್ತು ಪೂರ್ವ ಕಮಾಂಡ್ ಅನ್ನು 'ಪೆನಿನ್ಸುಲರ್ ಕಮಾಂಡ್' ಎಂದು ಕರೆಯುವ ಮೂಲಕ ವಿಲೀನ ಪ್ರಕ್ರಿಯೆಯ ಹಿಂದಿನ ಉದ್ದೇಶವನ್ನು ಈ ವರ್ಷದ ಫೆಬ್ರವರಿಯಲ್ಲಿ ವಿವರಿಸಿದ್ದರು. ಅಂದಿನಿಂದ ಈ ಹೆಸರು "ಮೆರಿಟೈಮ್ ಥಿಯೇಟರ್ ಕಮಾಂಡ್' ಆಗಿ ಬದಲಾಗಿದೆ. ಅಮೆರಿಕಾ ಮತ್ತು ಚೀನಾ ಈಗಾಗಲೇ ಥಿಯೇಟರ್ ಕಮಾಂಡ್ ವಿಧಾನವನ್ನು ಅನುಸರಿಸುತ್ತಿವೆ.

ಗಸ್ತು ತಿರುಗಲೂ ಬಳಸಬಹುದು

ಗಸ್ತು ತಿರುಗಲೂ ಬಳಸಬಹುದು

ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನಲ್ಲಿನ ಕೋಸ್ಟ್ ಗಾರ್ಡ್ ನ ಸ್ವತ್ತುಗಳು ಮೆರಿಟೈಮ್ ಥಿಯೇಟರ್ ಕಮಾಂಡ್‌ನ ಕಾರ್ಯಾಚರಣೆಯ ನಿಯಂತ್ರಣಕ್ಕೆ ಬರಲಿದೆ. ಕೋಸ್ಟ್ ಗಾರ್ಡ್ ನ ಡೈರೆಕ್ಟರ್ ಜನರಲ್ ಇದರಲ್ಲಿ ಇರಲಿದ್ದು, ಅವರು ತರಬೇತಿ ಮತ್ತು ಚಟುವಟಿಕೆಗಳನ್ನು ನೋಡಿಕೊಳ್ಳಲಿದ್ದಾರೆ. ಅಗತ್ಯವಿದ್ದಲ್ಲಿ ಕೋಸ್ಟ್ ಗಾರ್ಡ್ ಹಡಗುಗಳನ್ನು ಅಂತರಾಷ್ಟ್ರೀಯ ನೀರಿನಲ್ಲಿ ಗಸ್ತು ತಿರುಗಲೂ ಬಳಸಬಹುದು.

English summary
The Maritime Theater Command (MTC), which controls the assets and operations of the Indian Coast Guard under one platform, is said to be set up in the Kadamba shipyard In Karwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X