ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ; ಅಂಕೋಲಾ 'ಲೋಕಲ್ ಎಂಎಲ್‌ಎ'ಗೆ ಸೋಲು!

By ಕಾರವಾರ ಪ್ರತಿನಿಧಿ
|
Google Oneindia Kannada News

ಅಂಕೋಲಾ, ಡಿಸೆಂಬರ್ 31: ಬರೋಬ್ಬರಿ ಐದು ಬಾರಿ ಗ್ರಾಮ ಪಂಚಾಯತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಮಹಿಳೆಗೆ ಈ ಬಾರಿ ಸೋಲು ಕಂಡಿದ್ದಾರೆ. 6ನೇ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದ ಅಂಕೋಲಾ ತಾಲೂಕಿನ 'ಲೋಕಲ್ ಎಂಎಲ್ಎ' ಈ ಬಾರಿ ಸೋತಿದ್ದಾರೆ.

ಅಂಕೋಲಾ ತಾಲೂಕಿನ ಮಂಜುಗುಣಿ ಗ್ರಾಮದ ವೃದ್ಧೆ ಲೀಲಾವತಿ ನಾಯ್ಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆರನೇಯ ಬಾರಿ ಸೋಲು ಕಂಡಿದ್ದಾರೆ. 1993ರಲ್ಲಿ ಮೊದಲ ಬಾರಿಗೆ ಮಂಜುಗುಣಿ ಪಂಚಾಯಿತಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಇವರು, ಇದಾದ ಬಳಿಕ ಇದುವರೆಗೆ ಸತತ ಐದು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಆರನೇ ಬಾರಿ ಚುನಾವಣಾ ಅಖಾಡಕ್ಕೆ ಇಳಿದ 'ಲೋಕಲ್ ಎಂಎಲ್‌ಎ ಲೀಲಾವತಿ'ಆರನೇ ಬಾರಿ ಚುನಾವಣಾ ಅಖಾಡಕ್ಕೆ ಇಳಿದ 'ಲೋಕಲ್ ಎಂಎಲ್‌ಎ ಲೀಲಾವತಿ'

ಒಮ್ಮೆ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿ ಲೀಲಾವತಿ ನಾಯ್ಕ ಸೈ ಎನಿಸಿಕೊಂಡಿದ್ದರು. ಪಂಚಾಯತಿ ಸದಸ್ಯೆಯಾಗಿ ತಮ್ಮ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿಕೊಂಡು ಬಂದಿದ್ದ ಇವರು, ಗ್ರಾಮದಲ್ಲಿ ಸಾಕಷ್ಟು ಪ್ರಸಿದ್ಧಿ ಗಳಿಸಿಕೊಂಡು 'ಲೋಕಲ್ ಎಂಎಲ್‌ಎ' ಎನಿಸಿಕೊಂಡಿದ್ದರು. ಆದರೆ, ಈ ಬಾರಿ ಲೀಲಾವತಿ 94 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.

ಸತತ 9ನೇ ಬಾರಿಗೆ ಗೆದ್ದ ಸಚಿವ ಶಿವರಾಮ್ ಹೆಬ್ಬಾರ್ ಅವರ ರಾಜಕೀಯ ಗುರುಸತತ 9ನೇ ಬಾರಿಗೆ ಗೆದ್ದ ಸಚಿವ ಶಿವರಾಮ್ ಹೆಬ್ಬಾರ್ ಅವರ ರಾಜಕೀಯ ಗುರು

Lilavathi Naik Lost Gram Panchayat Elections

ಹೆಚ್ಚಿನ ಅಕ್ಷರಾಭ್ಯಾಸ ಪಡೆಯದ ಲೀಲಾವತಿ ಮೂರನೇ ತರಗತಿವರೆಗೆ ಓದಿದ್ದಾರೆ. ಈ ಹಿಂದೆ ಬೆಳಂಬಾರ ಗ್ರಾಮ ಪಂಚಾಯತಿ ಇದ್ದಾಗ 1993ರಲ್ಲಿ ಮಂಜುಗುಣಿ ಭಾಗದ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2015ರಲ್ಲಿ ಊರ ಹತ್ತಿರವೇ ಹೊನ್ನೆಬೈಲ್ ಗ್ರಾಮ ಪಂಚಾಯತಿ ಆಗುವಲ್ಲಿ ಈಕೆಯ ಶ್ರಮ ಕೂಡ ಇದೆ.

ಉತ್ತರ ಕನ್ನಡ: ಗ್ರಾ.ಪಂ ಚುನಾವಣೆಯಲ್ಲಿ ಜಯ ಗಳಿಸಿದ ಅಣ್ಣ-ತಮ್ಮಉತ್ತರ ಕನ್ನಡ: ಗ್ರಾ.ಪಂ ಚುನಾವಣೆಯಲ್ಲಿ ಜಯ ಗಳಿಸಿದ ಅಣ್ಣ-ತಮ್ಮ

ಗ್ರಾಮಕ್ಕೆ ಬೇಕಾಗುವ ರಸ್ತೆ, ವಿದ್ಯುತ್, ಬಸ್ ವ್ಯವಸ್ಥೆ ಸೇರಿದಂತೆ ಊರ ನಾಗರೀಕರ ಬೇಡಿಕೆಗಳಿಗೆ ಈಕೆ ಸ್ಪಂದಿಸಿದ ಕಾರಣಕ್ಕೆ ಊರಲ್ಲಿಯೇ ಲೀಲಾವತಿ ಅಚ್ಚು ಮೆಚ್ಚಿನವರಾಗಿದ್ದರು. ಆದರೆ, ಈ ಬಾರಿ ಮತದಾರ ಲೀಲಾವತಿಯ ಪ್ರತಿಸ್ಪರ್ಧಿ ಬೇಬಿ ತಾಂಡೇಲ ಎನ್ನುವವರ ಕೈಹಿಡಿದಿದ್ದಾರೆ.

ಬುಧವಾರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಲೀಲಾವತಿ 299 ಮತಗಳನ್ನು ಪಡೆದು ಪರಾಭವಗೊಂಡರೆ, ಬೇಬಿ ತಾಂಡೇಲ 395 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

Recommended Video

ಮಕ್ಕಳನ್ನು ಶಾಲೆಗೆ ಕಳುಹಿಸೋದು ಎಷ್ಟರ ಮಟ್ಟಿಗೆ ಸುರಕ್ಷಿತ | Oneindia Kannada

English summary
Lilavathi Naik who won gram panchayat elections 5 times. This time Lilavathi Naik lost in elections in Manjuguni panchayat of Ankola taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X