ಕಾರವಾರ : ತಾಯಿಯನ್ನು ಕೊಂದ ಮಗನಿಗೆ ಜೀವಾವಧಿ

Posted By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ಡಿಸೆಂಬರ್ 22: ಕ್ಷುಲ್ಲಕ ಕಾರಣಕ್ಕೆ ತಾಯಿಯ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಕೊಲೆಗೈದಿದ್ದ ಪಾಪಿ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಹೊಳೆನರಸೀಪುರ ಪುರಸಭೆ ಮಾಜಿ ಅಧ್ಯಕ್ಷನಿಗೆ ಜೀವಾವಧಿ ಶಿಕ್ಷೆ

ಶಿರಸಿಯ ಹಂದಿಮನೆಯ ವಿಶ್ವನಾಥ ವೆಂಕಟರಮಣ ಭಟ್ಟ ತಾಯಿಯನ್ನು ಕೊಲೆಗೈದ ಮಗ. 2012ರ ಅಕ್ಟೋಬರ್‌ 13ರಂದು ಸ್ನಾನಕ್ಕೆ ಬಿಸಿ ನೀರು ಮಾಡಿಕೊಡಲಿಲ್ಲವೆಂದು ಹೆತ್ತ ತಾಯಿಯ ಮೇಲೆ ಅಡಿಕೆ ದಬ್ಬೆಯಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದ.

Life imprisonment to son who killed her mother

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಶಿರಸಿಯ ಅಂದಿನ ಸಿಪಿಐ ಟಿ.ನಾಗೇಶ ಶೆಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಶಿರಸಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ವಕೀಲೆ ತನುಜಾ ಹೊಸಪಟ್ಟಣ ವಾದಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Court ordered life imprisonment to Karavara's Vishwanath Venkataramana Bhat who killed his mother for silly reason. Vishweshwar killed is mother just to not giving hot water to bath. Murder was happened in Karavara's Handimane in 2012.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ