Get Updates
Get notified of breaking news, exclusive insights, and must-see stories!

‘ಸ್ವರ್ಣ ಖಡ್ಗಂ’ ಧಾರಾವಾಹಿಯಲ್ಲಿ ಹೊನ್ನಾವರದ ಹುಡುಗ ಲಕ್ಷ್ಮೀಶ್ ಭಟ್

ಕಾರವಾರ, ಜುಲೈ 06 : ಬಹುಭಾಷೆಯಲ್ಲಿ ತಯಾರಾಗುತ್ತಿರುವ 'ಸ್ವರ್ಣ ಖಡ್ಗಂ' ಧಾರಾವಾಹಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಲಕ್ಷ್ಮೀಶ್ ಭಟ್‌ ಕಾಣಿಸಿಕೊಂಡಿದ್ದಾರೆ. ಬಹುತೇಕ ಕನ್ನಡದ ಕಲಾವಿದರೇ ಇರುವ ಈ‌ ಧಾರಾವಾಹಿ ಸದ್ಯ ಈ ಟಿವಿ ತೆಲುಗಿನಲ್ಲಿ ಇಂದಿನಿಂದ ಪ್ರಸಾರವಾಗಲಿದೆ.

ಬಳಿಕ ನಾಲ್ಕೈದು ಭಾಷೆಗಳಿಗೆ ಭಾಷಾಂತರಗೊಂಡು ಪ್ರಸಾರಗೊಳ್ಳಲಿದೆ. ಬಾಹುಬಲಿಯಲ್ಲಿ ಪ್ರಭಾಸ್ ಮಾಡಿದ್ದ, ಮಹೇಂದ್ರ ಬಾಹುಬಲಿಯಂತಹ ಪಾತ್ರದಲ್ಲಿ ಲಕ್ಷ್ಮೀಶ್ ಭಟ್‌ ಕಾಣಿಸಿಕೊಂಡಿದ್ದಾರೆ.

ಈ ಧಾರಾವಾಹಿ ಪಾತ್ರಧಾರಿಗಳಿಗೆ 'ಬಾಹುಬಲಿ' ಸಿನಿಮಾ ಪಾತ್ರಧಾರಿಗಳಿಗೆ ಕೊಟ್ಟಂತೆ ಭರ್ಜರಿ ತರಬೇತಿ ಕೊಡಲಾಗಿದೆ. ಪ್ರಮುಖ ಪಾತ್ರ ನಿಭಾಯಿಸಿರೋ ಲಕ್ಷ್ಮೀಶ್ ಭಟ್‌ ಕುದುರೆ ಏರಿ, ಕತ್ತಿ ಹಿಡಿದು ಮಹಾರಾಜ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Lakshmisha Bhat has appeared in Swarna Khadgam Serial

ಸಿಕ್ಕಾಪಟ್ಟೆ ತರಬೇತಿ ಪಡೆದು ಸಾಹಸಗಳನ್ನು ಮಾಡಿರುವ ಲಕ್ಷ್ಮೀಶ್ ಭಟ್‌ ಗೆ ನಾಯಕಿಯಾಗಿ ಸಂಜನಾ ಗಲ್ರಾಣಿ ಕಾಣಿಸಿಕೊಂಡಿದ್ದಾರೆ. ಇವರ ಜತೆಗೆ ಮೇಘನಾ, ಸುರೇಶ್‌ ರೈ, ರಾಜಶ್ರೀ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಬಾಲಿವುಡ್‌ನ ಪೂನಂ ಕೌರ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+