ಬಾಯಲ್ಲಿ ನೀರೂರಿಸುವ ಕಾರವಾರ ಆಹಾರ ಮೇಳ ಡಿ. 26ರಿಂದ ಬನ್ನಿ

Posted By:
Subscribe to Oneindia Kannada
   ಕಾರವಾರದಲ್ಲಿ ಡಿಸೆಂಬರ್ 26ರಿಂದ ಡಿಸೆಂಬರ್ 30ರವೆರೆಗೆ ಆಹಾರ ಮೇಳ | Oneindia Kannada

   ಕಾರವಾರ, ಡಿಸೆಂಬರ್ 22: ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸದಾ ಒಂದಿಲ್ಲೊಂದು ಚಟುವಟಿಕೆಗಳನ್ನು ಆಯೋಜಿಸುತ್ತಿರುವ ಉತ್ತರಕನ್ನಡ ಜಿಲ್ಲಾಡಳಿತ ಈ ಬಾರಿ ಪ್ರಥಮ ಬಾರಿಗೆ 'ಕಾರವಾರ ಆಹಾರ ಮೇಳ' ಆಯೋಜಿಸಲು ಸಜ್ಜಾಗಿದೆ.

   ಉಡುಪಿಯಲ್ಲಿ 60 ಲಕ್ಷ ವೆಚ್ಚದಲ್ಲಿ 'ಅಡ್ವೆಂಚರ್ ಫೆಸ್ಟ್'

   ಕಾರವಾರದ ಕಾಳಿ ನದಿ ದಂಡೆಯ ಮೇಲಿರುವ ಕಾಳಿ ರಿವರ್ ಗಾರ್ಡನ್ ನಲ್ಲಿ ಡಿಸೆಂಬರ್ 26 ರಿಂದ ಡಿ. 30ರ ವರೆಗೆ ಈ ಮೇಳವನ್ನು ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ರಾಜ್ಯದ ಕರಾವಳಿ ಭಾಗದ ಆಹಾರಗಳು ಹೆಚ್ಚಿನ ಆಕರ್ಷಣೆಯಾಗಲಿದ್ದು, ಮಂಗಳೂರು, ಕಾರವಾರದ ಸಮುದ್ರ ಆಹಾರ ಸೇರಿದಂತೆ 70 ಬಗೆ-ಬಗೆಯ ತರಹೇವಾರಿ ಆಹಾರ ಜನರ ಬಾಯಲ್ಲಿ ನೀರೂರಿಸಲಿದೆ.

   ಕೌಲಾಲಂಪುರ್ ನಲ್ಲಿ ಮಾವಳ್ಳಿ ಟಿಫಿನ್ಸ್ ರೂಂ ಹೋಟೆಲ್ ಆರಂಭ !

   ಅಷ್ಟೇ ಅಲ್ಲದೇ ಸಂಗೀತ ಪ್ರಿಯರಿಗಾಗಿ ಈ ಆಹಾರ ಮೇಳದಲ್ಲಿ ವಿಶೇಷವಾಗಿ ಸಂಜೆ 7ರಿಂದ ರಾತ್ರಿ 9.30 ರವರೆಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೆಲ್ಲ ಇದೆ ಇನ್ನೇನು ಬೇಕು ಈ ಮೇಳದಲ್ಲಿ ಬಾಗವಹಿಸಿ ಊಟ ರುಚಿ ಸವಿಯಿರಿ. ಮೇಳದಲ್ಲಿ ರುಚಿ ಸವಿಯಲು ಇಚ್ಛಿಸುವವರಿಗೆ ಕೇವಲ 20 ರು. ಪ್ರವೇಶ ಶುಲ್ಕ ಇರಲಿದೆ.

   70 ವಿಧದ ಆಹಾರಗಳು ಲಭ್ಯ

   70 ವಿಧದ ಆಹಾರಗಳು ಲಭ್ಯ

   ಚಾಟ್ಸ್, ಸಾವಯವ ಆಹಾರಗಳು, ಚೈನೀಸ್‌ ಆಹಾರಗಳು ಇಲ್ಲಿ ದೊರೆಯಲಿದ್ದು, ಮಂಗಳೂರಿನ ಕೋರಿ ರೋಟಿ, ನೀರ್ ದೋಸೆ ಜತೆ ಚಿಕ್ಕನ್ ಸುಕ್ಕಾ, ಚಿಕನ್ ಘೀ ರೋಸ್ಟ್, ಕಾರವಾರದ ಮೀನು ಊಟ, ಸಮುದ್ರ ಆಹಾರಗಳಾದ ಸೀಗಡಿ, ಪಾಪ್ಲೇಟ್, ಏಡಿ, ಕಿಂಗ್‌ಫಿಶ್, ಸಾಲ್ಮನ್‌ಗಳನ್ನು ಬಳಸಿ ತಯಾರಿಸಿದ ವಿವಿಧ ಬಗೆಯ ಖಾದ್ಯಗಳು, ಮೀನಿನ ಕಟ್‌ಲೆಟ್, ಮೀನಿನ ಕಬಾಬ್, ಲಾಬ್ ಸ್ಟರ್ ಬೈಟ್‌ಗಳು, ಫಿಶ್ ಪಪ್ ಕಾರ್ನ್ ವಿಶೇಷವಾಗಿ ಇಲ್ಲಿ ಸವಿಯಲು ದೊರೆಯಲಿದ್ದು, ಒಟ್ಟು 70ಕ್ಕಿಂತ ಹೆಚ್ಚು ವಿಧದ ಆಹಾರಗಳು ಇಲ್ಲಿ ಲಭ್ಯವಿರಲಿದೆ.

   20 ಆಹಾರ ಮಳಿಗೆಗಳು

   20 ಆಹಾರ ಮಳಿಗೆಗಳು

   ರತ್ನಾಸ್ ಕೆಎ 30, ಕೆಎಫ್ ಡಿಸಿಯ ಮತ್ಸ್ಯದರ್ಶಿನಿ, ಶಾಖಾಹಾರದಲ್ಲಿ ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿರಿ ಧಾನ್ಯ ಆಹಾರ ಮಳಿಗೆ ಹಾಗೂ ರತ್ನಾ ಸಾಗರ್‌ ಮಳಿಗೆಗಳು ಪ್ರಮುಖವಾಗಿದ್ದು, ಒಟ್ಟೂ 20 ಆಹಾರ ಮಳಿಗೆಗಳು ಈ ಆಹಾರ ಮೇಳದಲ್ಲಿ ಇರಲಿದೆ.

   ಐದು ದಿನವೂ ಸಂಗೀತ ಸಂಜೆ

   ಐದು ದಿನವೂ ಸಂಗೀತ ಸಂಜೆ

   ಡಿ. 26ರ ಸಂಜೆ ರಿಧಂ ಆಫ್‌ ಲವ್, ಡಿ.27ಕ್ಕೆ ಸಿಲ್ವಿಯಾ ಬೀಟ್‌ರೂಟ್‌ ಜ್ಯಾಮ್, ಡಿ.28ಕ್ಕೆ ಕಾರವಾರ ಕರೋಕೆ ಕ್ಲಬ್‌, ಡಿ.29ರಂದು ವೈಲ್ಡ್‌ ಬೀಟ್‌ ಬ್ಯಾಂಡ್ ಹಾಗೂ ಡಿ.30ರಂದು ಸ್ವರ ಸಂಗೀತ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಗಾಗಿ ವಿಶೇಷ ಆಟಿಕೆಗಳನ್ನು ಮೇಳದಲ್ಲಿ ಇಡಲಾಗುತ್ತಿದೆ.

   ಕೋರೋವರ್ ಆಪ್ ನಲ್ಲಿ ಮಾಹಿತಿ

   ಕೋರೋವರ್ ಆಪ್ ನಲ್ಲಿ ಮಾಹಿತಿ

   ಆಹಾರ ಮೇಳದಲ್ಲಿ ನಡೆಯುವ ಪ್ರತಿ ದಿನದ ಕಾರ್ಯಕ್ರಮಗಳ ಮಾಹಿತಿಗಳನ್ನು ‘ಕೋ ರೋವರ್ ಕನೆಕ್ಟ್' ಆಪ್ ನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವುದರ ಮೂಲಕ ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ಲೀಸರ್ ರೂಟ್ಸ್‌ ಸಂಸ್ಥೆಯ ಮಾಲೀಕ ಹಾಗೂ ಆಹಾರ ಮೇಳದ ಆಯೋಜಕ ರೋಶನ್ ಪಿಂಟೋ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   'Karwar Food Fest" will begin from December 26 to 30 in Kali River Garden at Karwar, organized by Uttara Kannada district administration

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ