ಕಾಲ್ ಗರ್ಲ್ ಮೋಹಕ್ಕೆ ಬಿದ್ದು 86 ಸಾವಿರ ರೂ ಕಳೆದುಕೊಂಡ ಕಂಡಕ್ಟರ್!

ಕಾರವಾರ, ಅಕ್ಟೋಬರ್ 4: ಕಾಲ್ ಗರ್ಲ್ ಮೋಹಕ್ಕೆ ಬಿದ್ದ ಸಾರಿಗೆ ಸಂಸ್ಥೆಯ ಕಂಡಕ್ಟರ್ ವೊಬ್ಬರು 86 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಶಿಕಾರಿಪುರದ ಲಿಂಗರಾಜ್ ನಾಯ್ಕ ಹಣ ಕಳೆದುಕೊಂಡ ಕಂಡಕ್ಟರ್. ಕೆಎಸ್ ‌ಆರ್ ಟಿಸಿ ಶಿರಸಿ ಡಿಪೋದಲ್ಲಿ ಕಂಡಕ್ಟರ್ ಆಗಿರುವ ಅವರು, ಸೆ.28ರಂದು "ಕಾಲ್ ಗರ್ಲ್" ಎಂದು ಆನ್ ಲೈನ್ ನಲ್ಲಿ ಹುಡುಕಾಟ ನಡೆಸಿದ್ದರು. ಅಲ್ಲಿ ಕಾಣಿಸಿದ್ದ 'ಇಂಡಿಪೆಂಡೆಂಟ್ ಕಾಲ್ ಗರ್ಲ್ಸ್' ಎಂಬ ವೆಬ್‌ಸೈಟ್‌ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಅವರು ಕರೆ ಮಾಡಿದ್ದರು.

ಕರೆ ಸ್ವೀಕರಿಸಿದವರು ಶಿರಸಿಯ ಮಾರಿಕಾಂಬಾ ದೇವಸ್ಥಾನದ ಬಳಿ ಇರುವುದಾಗಿ ತಿಳಿಸಿದ್ದು, 3 ಸಾವಿರ ರೂ. ಹಣ ಪಾವತಿಸಿದರೆ ಸರ್ವಿಸ್ ನೀಡುವುದಾಗಿ ಕಂಡಕ್ಟರ್ ಗೆ ತಿಳಿಸಿದ್ದಾರೆ. ಇದಕ್ಕೆ ಒಪ್ಪಿದ ಕಂಡಕ್ಟರ್, ಫೋನ್ ಪೇ ಖಾತೆಗೆ ಮೂರು ಸಾವಿರ ರೂ. ಹಣ ಜಮೆ ಮಾಡಿದ್ದಾರೆ. ಬಳಿಕ ಆರೋಪಿತ ಮೊಬೈಲ್ ಸಂಖ್ಯೆ ಬಳಕೆದಾರರು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಂತ ಹಂತವಾಗಿ 26 ಸಾವಿರ ರೂಪಾಯಿಯನ್ನು ಅದೇ ನಂಬರಿನ ಫೋನ್ ಪೇ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ.

Karwar Conductor Lost Rs 86 Thousand In The Name Of Call Girl

ಬಳಿಕ ಆರೋಪಿ ಕಂಡಕ್ಟರ್ ನಿಂದ ಎಟಿಎಂ ಕಾರ್ಡ್ ಸಂಖ್ಯೆ ಪಡೆದು ಮೊಬೈಲ್ ಗೆ ಬಂದ ಒಟಿಪಿ ಸಹ ಪಡೆದುಕೊಂಡಿದ್ದಾನೆ. ಅದಾದ ತಕ್ಷಣ 50 ಸಾವಿರ ರೂ. ನಿರ್ವಹಣಾ ಖಾತೆಯಿಂದ ವರ್ಗಾವಣೆಯಾಗಿದೆ. ಹೀಗೆ ಸುಮಾರು 80 ಸಾವಿರ ರೂಪಾಯಿವರೆಗೂ ನಿರ್ವಾಹಕನಿಗೆ ಪಂಗನಾಮ ಹಾಕಲಾಗಿದೆ. ಈ ಬಗ್ಗೆ ಕಂಡಕ್ಟರ್ ಉತ್ತರ ಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು 420 ಐಪಿಸಿ 66 (ಸಿ)(ಡಿ) ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+