ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೇಶಿ ಅರಣ್ಯದ ಕೆನೋಪಿ ವಾಕ್ ನವೆಂಬರ್‌ನಲ್ಲಿ ಪ್ರವಾಸಿಗರಿಗೆ ಮುಕ್ತ

|
Google Oneindia Kannada News

ಕಾರವಾರ, ಅಕ್ಟೋಬರ್ 28 : ಪಶ್ಚಿಮ ಘಟ್ಟದ ಕುವೇಶಿ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೆನೋಪಿ ವಾಕ್ ನವೆಂಬರ್‌ನಲ್ಲಿ ಪ್ರವಾಸಿಗರಿಗೆ ಮುಕ್ತವಾಗಲಿದೆ. ಫೆಬ್ರವರಿಯಲ್ಲಿ ಕೆನೋಪಿ ಉದ್ಘಾಟನೆಗೊಂಡಿದ್ದರೂ ಮಳೆಗಾಲದ ಕಾರಣ ಪ್ರವಾಸಿಗರ ಸಂಚಾರ ನಿರ್ಬಂಧಿಸಲಾಗಿತ್ತು.

ದೇಶದ ಮೊದಲ ಕೆನೋಪಿವಾಕ್ (ಮರಗಳ ಮೇಲಿನ ನಡಿಗೆ) ಯನ್ನು ಕಾಳಿ ಹುಳಿ ಅರಣ್ಯಧಾಮದ ವ್ಯಾಪ್ತಿಯಲ್ಲಿ ಬರುವ ಕುವೇಶಿ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 240 ಮೀಟರ್ ಉದ್ದದ ಕೆನೋಪಿ ವಾಕ್‌ ಅನ್ನು ಭೂಮಿಯಿಂದ 30 ಮೀಟರ್ ಎತ್ತರಲ್ಲಿ ನಿರ್ಮಿಸಲಾಗಿದೆ.

ಕರ್ನಾಟಕದಲ್ಲಿ ಮೊದಲ ಗಣತಿ, 2,500 ಚಿರತೆ ಪತ್ತೆಕರ್ನಾಟಕದಲ್ಲಿ ಮೊದಲ ಗಣತಿ, 2,500 ಚಿರತೆ ಪತ್ತೆ

ದಕ್ಷಿಣ ಅಮೆರಿಕಾ, ಆಫ್ರಿಕಾ, ಯುರೋಪ್ ಸೇರಿದಂತೆ ವಿವಿಧ ದೇಶಗಳಲ್ಲಿ ಕೆನೋಪಿವಾಕ್ ಪ್ರಸಿದ್ಧಿ ಪಡೆದಿದೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಇದನ್ನು ನಿರ್ಮಿಸಲಾಗಿದೆ. ನವೆಂಬರ್ 15ರ ಬಳಿಕ ಇದನ್ನು ಪ್ರವಾಸಿಗರ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.

12 ವರ್ಷಗಳ ನಂತರ ಕುಮಾರಪರ್ವತಕ್ಕೆ ಮರಳಿ ಬಂದಳು ನೀಲಿಕುರುಂಜಿ12 ವರ್ಷಗಳ ನಂತರ ಕುಮಾರಪರ್ವತಕ್ಕೆ ಮರಳಿ ಬಂದಳು ನೀಲಿಕುರುಂಜಿ

ಕೆನೋಪಿವಾಕ್ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಪರಿಸರ ಪ್ರೇಮಿಗಳ ವಿರೋಧ ವಿಲ್ಲದಿದ್ದರೆ ಆಗಸ್ಟ್‌ನಲ್ಲಿ ಇದನ್ನು ಪ್ರವಾಸಿಗರ ಸಂಚಾರಕ್ಕೆ ಮುಕ್ತಗೊಳಿಸಬೇಕಿತ್ತು. ಆದರೆ, ಈಗ ನವೆಂಬರ್‌ನಲ್ಲಿ ಮುಕ್ತಗೊಳ್ಳುತ್ತಿದೆ.

ಮಲೆಮಹದೇಶ್ವರ ವನ್ಯಧಾಮದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಮಲೆಮಹದೇಶ್ವರ ವನ್ಯಧಾಮದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

ಕರ್ನಾಟಕ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ 84 ಲಕ್ಷ ವೆಚ್ಚದಲ್ಲಿ ಕೆನೋಪಿವಾಕ್ ನಿರ್ಮಿಸಿವೆ. ಮೂರು ವರ್ಷಗಳ ಹಿಂದೆ ಪೂರ್ಣಗೊಳ್ಳಬೇಕಿದ್ದ ಯೋಜನೆ ಪರಿಸರ ಪ್ರಿಯರ ವಿರೋಧದ ಕಾರಣ ಈ ವರ್ಷದಲ್ಲಿ ಪೂರ್ಣಗೊಂಡಿತ್ತು.

ಎಲ್ಲಿದೆ ಕೆನೋಪಿ ವಾಕ್?

ಎಲ್ಲಿದೆ ಕೆನೋಪಿ ವಾಕ್?

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರ ಹತ್ತಿರ ಕ್ಯಾಸಲ್ ರಾಕ್ ಪ್ರವಾಸಿ ತಾಣವಿದೆ. ದಾಂಡೇಲಿ ವೈಲ್ಡ್‌ ಲೈಫ್ ಮತ್ತು ಕ್ಯಾಸಲ್ ರಾಕ್ ವೈಲ್ಡ್ ಲೈಫ್ ವ್ಯಾಪ್ತಿಯಲ್ಲಿ ಜಂಗಲ್ ಲಾಡ್ಜ್‌ ಅಂಡ್ ರೆಸಾರ್ಟ್‌ನವರು ನಡೆಸುತ್ತಿರುವ ಅರಣ್ಯ ಧಾಮದ ಬಳಿ ಕುವೇಶಿ ಗ್ರಾಮವಿದೆ. ದಟ್ಟ ಅರಣ್ಯ ಮತ್ತು 30 ಅಡಿ ಎತ್ತರದ ಮರಗಳಿರುವ ಪ್ರದೇಶವನ್ನು ಕೆನೋಪಿವಾಕ್‌ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮರಗಳ ಮೇಲಿನ ನಡಿಗೆ ಎಂಬ ಹೆಸರಿನಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗಿದೆ.

ಫೆಬ್ರವರಿಯಲ್ಲಿ ಉದ್ಘಾಟನೆ

ಫೆಬ್ರವರಿಯಲ್ಲಿ ಉದ್ಘಾಟನೆ

ಕರ್ನಾಟಕ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ 84 ಲಕ್ಷ ವೆಚ್ಚದಲ್ಲಿ ಕೆನೋಪಿವಾಕ್ ನಿರ್ಮಿಸಿವೆ. ಮೂರು ವರ್ಷಗಳ ಹಿಂದೆ ಪೂರ್ಣಗೊಳ್ಳಬೇಕಿದ್ದ ಯೋಜನೆ ಪರಿಸರ ಪ್ರಿಯರ ವಿರೋಧದ ಕಾರಣ ಈ ವರ್ಷದಲ್ಲಿ ಪೂರ್ಣಗೊಂಡಿತ್ತು. ಫೆಬ್ರವರಿಯಲ್ಲಿ ಇದನ್ನು ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟನೆ ಮಾಡಿದ್ದರು. ಈಗ ಪ್ರವಾಸಿಗರಿಗೆ ಮುಕ್ತವಾಗುತ್ತಿದೆ.

ಪ್ರವೇಶ ಶುಲ್ಕ ಎಷ್ಟು?

ಪ್ರವೇಶ ಶುಲ್ಕ ಎಷ್ಟು?

ಕೆನೋಪಿ ವಾಕ್‌ನಲ್ಲಿ ಸಂಚಾರ ನಡೆಸಲು ವಯಸ್ಕರಿಗೆ 50 ರೂ. ಮತ್ತು 13 ವರ್ಷ ಮೇಲ್ಪಟ್ಟ ಮಕ್ಕಳಿಗೆ 25 ರೂ. ದರ ನಿಗದಿ ಮಾಡಲಾಗಿದೆ. ಮರಗಳ ಮೇಲಿನ ನಡಿಗೆಗೆ 30 ಜನರ ತಂಡ ರಚನೆ ಮಾಡಲಾಗುತ್ತದೆ. 45 ನಿಮಿಷಗಳ ಕಾಲ ಸಂಚಾರ ನಡೆಸಬಹುದು. ಒಂದು ತಂಡ ಮರಳಿದ ಮೇಲೆ ಮತ್ತೊಂದು ತಂಡಕ್ಕೆ ಅವಕಾಶ ನೀಡಲಾಗುತ್ತದೆ.

ಕೆನೋಪಿ ವಾಕ್‌ನಲ್ಲಿ ಸಂಚಾರ

ಕೆನೋಪಿ ವಾಕ್‌ನಲ್ಲಿ ಸಂಚಾರ

ಕೆನೋಪಿ ವಾಕ್‌ನಲ್ಲಿ ಸಂಚಾರ ನಡೆಸುವ ಮೂಲಕ ಪ್ರವಾಸಿರು ಅರಣ್ಯದ ಅಂದವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇದರಲ್ಲಿ ಎರಡು ಹಂತದ ಫ್ಲಾಟ್‌ ಫಾರಂಗಳಿವೆ. ಅದರ ಮೇಲೆ ನಿಂತು ಮರ, ಕಾಡಿನ ಸೌಂದರ್ಯ ನೋಡಬಹುದು. ಯುರೋಪಿನ್ ತಂತ್ರಜ್ಞರ ನೆರವು ಪಡೆದು ಕೆನೋಪಿ ವಾಕ್‌ ನಿರ್ಮಾಣ ಮಾಡಲಾಗಿದೆ.

English summary
India's first canopy walk in Kuveshi Western Ghats of Uttara Kannada district all set to open for tourists in November 2018. It was inaugurated in February, But entry of tourists was banned because of monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X