ಮತದಾನಕ್ಕೆ ಉತ್ತರ ಕನ್ನಡ ಸಜ್ಜು: ಇವಿಎಂನೊಂದಿಗೆ ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ!
ಕಾರವಾರ, ಮೇ 09: ಶಾಂತಿಯುತ ಮತದಾನಕ್ಕೆ ಜಿಲ್ಲೆಯ ಆರು ವಿಧಾನಸಭಾ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಪೂರ್ಣಗೊಳಿಸಿದೆ. ಮಂಗಳವಾರ ಆಯಾ ವಿಧಾನಸಭಾ ವ್ಯಾಪ್ತಿಯ ಮಸ್ಟರಿಂಗ್ ಕೇಂದ್ರಗಳಿಂದ ಇವಿಎಂ ಹಾಗೂ ವಿವಿಪ್ಯಾಟ್ ಮಷಿನ್‌ಗಳನ್ನು ಬಸ್ಸಿನ ಮೂಲಕ ಚುನಾವಣಾಧಿಕಾರಿಗಳು ಬಿಗಿ ಭದ್ರತೆಯಲ್ಲಿ ಕೊಂಡೊಯ್ದಿದ್ದು, ಬುಧವಾರ ಮುಂಜಾನೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
ಜಿಲ್ಲೆಯ ಹಳಿಯಾಳದಲ್ಲಿ ಹಾವಗಿ ಸರಕಾರಿ ಪದವಿ ಕಾಲೇಜು, ಕಾರವಾರದಲ್ಲಿ ಸೈಂಟ್ ಮೈಕೆಲ್ ಕಾನ್ವೆಂಟ್ ಸ್ಕೂಲ್, ಕುಮಟಾದಲ್ಲಿ ಡಾ. ಎ.ವಿ.ಬಾಳಿಗಾ ಕಾಮರ್ಸ್ ಕಾಲೇಜು, ಭಟ್ಕಳದಲ್ಲಿ ಶ್ರೀ ಗುರುಸುಧೀಂದ್ರ ಕಾಲೇಜು, ಶಿರಸಿಯಲ್ಲಿ ಮಾರಿಕಾಂಬಾ ಪಿಯು ಕಾಲೇಜು, ಯಲ್ಲಾಪುರದಲ್ಲಿ ವೈಟಿಎಸ್‌ಎಸ್ ಎಜ್ಯೂಕೇಶನ್ ಸೊಸೈಟಿ ಯಲ್ಲಿ ಮಸ್ಟರಿಂಗ್-ಡಿ ಮಸ್ಟರಿಂಗ್ ಸೆಂಟರ್‌ಗಳನ್ನು ತೆರೆದು ಮಂಗಳವಾರ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಿ ಅವರ ಮೂಲಕ ಇವಿಎಂ ಹಾಗೂ ವಿವಿ ಪ್ಯಾಟ್ ಮಷಿನ್‌ಗಳನ್ನು ಮತಗಟ್ಟೆಗೆ ರವಾನಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 1435 ಮತಗಟ್ಟೆಗಳಿದ್ದು, ಇವುಗಳಲ್ಲಿ 276 ಸೂಕ್ಷ್ಮ ಮತಗಟ್ಟೆಗಳಾಗಿವೆ. 6416 ಮತಗಟ್ಟೆ ಸಿಬ್ಬಂದಿಗಳನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ಅಲ್ಲಲ್ಲಿ 287 ಮೈಕ್ರೋ ಒಬ್ಸರ್ವಸರ್‌ಗಳನ್ನು ಕೂಡ ನೇಮಕ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 11 ರಂತೆ ಜಿಲ್ಲೆಯಲ್ಲಿ ಒಟ್ಟೂ 66 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಇನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆಗಳನ್ನು ಜನರಿಗೆ ಮನವರಿಕೆ ಮಾಡಿದ್ದು, ಮತದಾನಕ್ಕೆ ಉತ್ತೇಜಿಸಲಾಗಿದೆ. ಅಲ್ಲದೆ ಸ್ವೀಪ್ ಚಟುವಟಿಕೆ, ಜಾಗೃತಿ, ಜಾಥಾ ಸೇರಿದಂತೆ ಇನ್ನಿತರ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದ ಕಾರಣ ಈ ಬಾರಿ ಜಿಲ್ಲೆಯಲ್ಲಿ ಶೇ. 80 ರಷ್ಟು ಮತದಾನದ ಗುರಿ ಹೊಂದಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಇವರಿಗೆ ಮನೆಯಿಂದ ಮತದಾನದ ಅವಕಾಶ ಆಯ್ಕೆ ನೀಡಿದಾಗ 1062 ವಿಶೇಷ ಚೇತನರು ಮತ್ತು 3508 ಮಂದಿ 80 ವರ್ಷ ದಾಟಿದ ಮತದಾರರು ಮತದಾನ ಮಾಡಿದ್ದಾರೆ. ಶೇ 95.43 ಮತದಾನವಾಗಿದೆ ಎಂದು ತಿಳಿಸಿದರು.
ಮತಗಟ್ಟೆ ಸಿಬ್ಬಂದಿಗಳಿಂದ ಮಸ್ಟರಿಂಗ್ ಸೆಂಟರ್‌ನಲ್ಲಿ ಇವಿಎಂ, ಡಾಕ್ಯುಮೆಂಟರಿ ಸಂಗ್ರಹಗಳು ನಡೆದು, ಮಧ್ಯಾಹ್ನ ನಿಗದಿತ ಮತಗಟ್ಟೆಗೆ ತೆರಳಿದ್ದಾರೆ. 719 ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕಂಟ್ರೋಲ್ ರೂಮ್‌ನಿಂದ ಈ ಮತಗಟ್ಟೆಗಳಲ್ಲಿನ ಮತದಾನವನ್ನು ನೋಡಬಹುದಾಗಿದ್ದು, ಜೊತೆಗೆ ಈ ಕೇಂದ್ರಗಳ ವಿಡಿಯೋ ನೇರಪ್ರಸಾರ ಸಿಇಒ ಕರ್ನಾಟಕ ಕಚೇರಿಗೂ ಸಂಪರ್ಕದಲ್ಲಿರುತ್ತದೆ ಎಂದರು.

ಮಳೆಯಿಂದ ಪರದಾಡಿದ ಚುನಾವಣಾ ಸಿಬ್ಬಂದಿ
ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಂಗಳವಾರ ಮಳೆಯಾದ ಕಾರಣ ಚುನಾವಣಾ ಸಿಬ್ಬಂದಿ ಪರದಾಡುವಂತಾಯಿತು. ಹಳಿಯಾಳದಲ್ಲಿ ಮಳೆ ಧಾರಾಕಾರವಾಗಿ ಸುರಿದ ಕಾರಣ ಮಸ್ಟರಿಂಗ್ ಕೇಂದ್ರದ ಬಳಿ ಬಸ್ ಗಳು ಹುಗಿದುಕೊಂಡ ಕಾರಣ ಬಸ್ ತೆಗೆಯಲು ಹರಸಾಹಸ ಪಡುವಂತಾಯಿತು. ಇದಲ್ಲದೆ ಯಲ್ಲಾಪುರ ಭಾಗದಲ್ಲಿಯೂ ಮಳೆಯಾಗಿದ್ದು ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಕಂಡುಬಂದಿದೆ.
ಮತದಾರರನ್ನು ಸೆಳೆಯಲು ವಿಶೇಷ ಮತಗಟ್ಟೆ
ಮತದಾನದ ದಿನದಂದು ಮತದಾರರನ್ನು ಸೆಳೆಯಲು ಕೆಲ ಮತಗಟ್ಟೆಗಳನ್ನು ಶೃಂಗರಿಸಿದ್ದೇವೆ. ಪ್ರತಿ ಕ್ಷೇತ್ರದಲ್ಲಿ 2 ವಿಶೇಷ ಚೇತನ ಮತಗಟ್ಟೆಗಳನ್ನು ನಗರ ಭಾಗದಲ್ಲೇ ಮಾಡಿದ್ದೇವೆ. ಯುವ ಮತದಾರರಿಗಾಗಿ ಪ್ರತಿ ಕ್ಷೇತ್ರದಲ್ಲಿ ಎರಡು ಯುವ ಅಧಿಕಾರಿಗಳಿಂದ ನಿರ್ವಹಿಸಲ್ಪಡುವ ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಐದು ಪಿಂಕ್- ಮಹಿಳಾ ಬೂತ್‌ಗಳನ್ನು ನಿರ್ಮಿಸಲಾಗಿದೆ ಎಂದರು.

ಹೊರ ರಾಜ್ಯಗಳಿಂದ ಬಂದ ಭದ್ರತಾ ಸಿಬ್ಬಂದಿ
ಜಿಲ್ಲೆಯಲ್ಲಿರುವ ಎಲ್ಲಾ ಮತಗಟ್ಟೆಗಳಿಗೆ 1,352 ರಾಜ್ಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, 200 ಮಹಾರಾಷ್ಟ, ಸೊಲ್ಲಾಪುರದ ಹೋಮ್ ಗಾರ್ಡ್ಸ್, 600 ಕರ್ನಾಟಕ ಹೋಮ್ ಗಾರ್ಡ್ಸ್, ರಾಜಸ್ಥಾನದ ಮೀಸಲು ಪಡೆಯ ಏಳು ಕಂಪನಿ, ಸಿಎಪಿಎಫ್‌ನ 7 ತುಕಡಿ, ಸಿಆರ್‌ಪಿಎಫ್‌ನ ನಾಲ್ಕು ತುಕಡಿ, ಕೆಎಸ್‌ಆರ್‌ಪಿಎಫ್‌ನ ಆರು ಪ್ಲೊಟೋನ್‌ಗಳನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಭದ್ರತೆ ಹಾಗೂ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ತಿಳಿಸಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications