ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ : ಕೋಮು ಗಲಭೆಗೆ ತುತ್ತಾಯಿತು ಈದ್!

By ಡಿ.ಪಿ.ನಾಯ್ಕ
|
Google Oneindia Kannada News

ಕಾರವಾರ, ಡಿಸೆಂಬರ್ 02: ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ನಡುವೆ ನಡೆದ ಗಲಾಟೆಯೊಂದು ವಿಕೋಪಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಶುಕ್ರವಾರ (ಡಿಸೆಂಬರ್ 01) ನಡೆದಿದೆ.

ಚಂದಾವರದಲ್ಲಿ ಹನುಮಂತ ದೇವಸ್ಥಾನದ ಕಾರ್ತಿಕ ದೀಪೋತ್ಸವ ಹಾಗೂ ಈದ್‍ಮಿಲಾದ್ ಆಚರಣೆಗೆ ಸಂಬಂಧಿಸಿ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿದ್ದ ಗಲಾಟೆ ಹಿಂಸಾಚಾರಕ್ಕೆ ತಿರುಗಿ, ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಸುಮಾರು 20ಕ್ಕು ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದು, 5ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬನನ್ನು ತಾಲ್ಲೂಕಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅಲ್ಲದೆ ಬಂಧನವನ್ನು ವಿರೋಧಿಸಿ ಹಿಂದುಪರ ಸಂಘಟನೆಗಳು ಶುಕ್ರವಾರ ರಾತ್ರಿ ಹೊನ್ನಾವರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದು, ಶನಿವಾರ (ಡಿಸೆಂಬರ್ 02) ಕುಮಟಾ ಹಾಗೂ ಹೊನ್ನಾವರ ಬಂದ್‍ಗೆ ಕರೆ ನೀಡಿವೆ.

Karawara : Communal clutches between Hindu-Muslim

ಘಟನೆ ವಿವರ
ಚಂದಾವರ ವೃತ್ತದ ಬಳಿ ತಾತ್ಕಾಲಿಕ ಗುಮ್ಮಟ ರಚಿಸುವುದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಕೆಲ ವರ್ಷಗಳಿಂದ ಸಂಘರ್ಷ ನಡೆಯುತ್ತಲೇ ಬಂದಿತ್ತು. ಶುಕ್ರವಾರ (ಡಿಸೆಂಬರ್ 01) ಕೂಡ ಇದು ಮರುಕಳಿಸಿತು.

ಶುಕ್ರವಾರ (ಡಿಸೆಂಬರ್ 01) ಮಧ್ಯಾಹ್ನ ಬಿಜೆಪಿಯ ಸೂರಜ್ ನಾಯ್ಕ ಸೋನಿ ಇದೆ ಮಾರ್ಗವಾಗಿ ಕಾರನ್ನು ಚಲಾಯಿಸಿಕೊಂಡು ಬರುವಾಗ ಯಾರೋ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಸೂರಜ್ ಇದರ ಬಗ್ಗೆ ಸ್ಥಳದಲ್ಲಿ ನಿಯುಕ್ತಿಗೊಂಡಿರುವ ಪೊಲೀಸರಿಗೆ ದೂರಿದ್ದರು. ಇದರಿಂದ ರೊಚ್ಚಿಗೆದ್ದ ಕೆಲವರು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದೇ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ.

ಏನಿದು ವಿವಾದ?
ಚಂದಾವರದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಹನುಮಂತ ದೇವಸ್ಥಾನವಿದ್ದು, ಪ್ರತಿ ವರ್ಷ ಕಾರ್ತಿಕ ದೀಪೋತ್ಸವದಲ್ಲಿ ನಾಕಾ ವೃತ್ತದ ಬಳಿ ಹನುಮಂತ ದೇವರ ಉತ್ಸವ ಮೂರ್ತಿ ಸ್ಥಾಪಿಸಿ ದೇವಸ್ಥಾನದವರಗೆ ಕೇಸರಿ ಪತಾಕೆಗಳಿಂದ ಅಲಂಕರಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Karawara : Communal clutches between Hindu-Muslim

ಕಾರ್ತಿಕ ದೀಪೋತ್ಸವದ ನಂತರ ಈದ್ ಮಿಲಾದ್ ಹಬ್ಬ ಬರುತ್ತದೆ. ಮುಸ್ಲಿಂ ಸಮಾಜದವರೂ ಈ ಸ್ಥಳದಲ್ಲಿ ಗುಮ್ಮಟ ಸ್ಥಾಪಿಸಿ ಹಸಿರು ಪತಾಕೆಗಳಿಂದ ಶೃಂಗಸಿ ಆಚರಿಸುತ್ತಾರೆ. ಆದರೆ ಕಳೆದ ವರ್ಷ ಎರಡೂ ಸಮುದಾಯದ ನಡುವೆ ಕಸಿವಿಸಿ ಉಂಟಾಗಿತ್ತು. ಈ ವರ್ಷ ನಾಕಾವೃತ್ತದಲ್ಲಿ ಹನುಮಂತ ದೇವರ ಮೂರ್ತಿ ಸ್ಥಾಪಿಸುವ ಸ್ಥಳದಲ್ಲಿ ಗುಮ್ಮಟ ಇಡುವುದು, ಪತಾಕೆ ಹಚ್ಚುವುದು ಬೇಡ. ಸ್ಥಳವನ್ನು ಬಿಟ್ಟು ಗುಮ್ಮಟ ಇಡಲಿ ಎಂದು ಹಿಂದು ಪರ ಸಂಘಟನೆಗಳು ಪಟ್ಟು ಹಿಡಿದರು.

ಸೋಮವಾರ ಹೊನ್ನಾವರದ ತಹಶೀಲ್ದಾರ ವಿ. ಆರ್. ಗೌಡ, ಪಿ.ಎಸ್‍ಐ ಅನಂದಮೂರ್ತಿ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಎರಡೂ ಸಮುದಾಯದ ಮುಖಂಡರ ಶಾಂತಿ ಸಭೆ ಕರೆಯಲಾಗಿತ್ತು. ಕೊನೆಗೆ ಮುಸ್ಲಿಂರಿಗೆ ದ್ವಾರದಿಂದ 25 ಮೀಟರ್ ದೂರದ ಜಾಗದಲ್ಲಿ ಗುಮ್ಮಟ ಸ್ಥಾಪಿಸುವಂತೆ ತಿಳಿಸಲಾಗಿತ್ತು. ಆದರೆ ಇದನ್ನು ಕೆಲ ಮುಸ್ಲಿಂ ಸಮುದಾಯದ ಯುವಕರು ವಿರೋಧಿಸಿದ್ದರು ಎನ್ನಲಾಗಿದೆ. ಶನಿವಾರ (ಡಿಸೆಂಬರ್ 02) ಈದ್ ಮಿಲಾದ್ ಇರುವುದರಿಂದ ಹನುಮಾನ್ ದ್ವಾರದ ಬಳಿ ಮಸಿದಿ ಮಾದರಿ ನಿರ್ಮಿಸಿಬಿಡಬಹುದೆಂಬ ಆತಂಕದಿಂದ ಹಿಂದುಗಳು ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ಆಗ ಎರಡೂ ಗುಂಪುಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

English summary
Communal clutches between Hindu and Muslim Karawara' Chandavara village, 20 men arrested by Karawara Police, 5 people injured in fight, tight security in chandavara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X