ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.21ರಿಂದ ಮೂರು ದಿನಗಳವರೆಗೆ ಕಾರವಾರದಲ್ಲಿ ಅಂತರರಾಷ್ಟ್ರೀಯ ವೈನ್ ಮೇಳ‌

|
Google Oneindia Kannada News

ಕಾರವಾರ, ಡಿಸೆಂಬರ್ 20 : ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಹಾಗೂ ಕರ್ನಾಟಕ ದ್ರಾಕ್ಷರಸ ಮಂಡಳಿ ಸಹಯೋಹದಲ್ಲಿ ಡಿ.21ರಿಂದ 23ವರೆಗೆ ಅಂತರಾಷ್ಟ್ರೀಯ ವೈನ್ ಮೇಳವನ್ನು ನಗರದ ಕಾಳಿ ರಿವರ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದ್ರಾಕ್ಷರಸ ಮಂಡಳಿ ವ್ಯವಸ್ಥಾಪಕರ ನಿರ್ದೇಶಕ ಟಿ ಸೋಮು ಹೇಳಿದರು.

ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 150 ಕ್ಕೂ ಹೆಚ್ಚು ವಿವಿಧ ವೈನ್ ಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚಿಲ್ಲಿ, ಅಮೇರಿಕಾ ಮತ್ತು ಇತರೆ ದೇಶಗಳ ವೈನ್ ಗಳು ಪ್ರದರ್ಶನವಾಗಲಿವೆ.

ಜನರ ಮನಸೂರೆಗೊಂಡ ಮಂಗಳೂರು ವೈನ್ ಮೇಳಜನರ ಮನಸೂರೆಗೊಂಡ ಮಂಗಳೂರು ವೈನ್ ಮೇಳ

ಕರ್ನಾಟಕದಲ್ಲಿ ವೈನ್ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿಗಳನ್ನು ಬೆಳೆಯಲು ಹಾಗೂ ರಾಜ್ಯದ ವೈನ್ ತಯಾರಕರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಪರಿಚಯಿಸಲು ಮತ್ತು ರಾಜ್ಯದಲ್ಲಿ ವೈನ್ ಬಳಕೆ ಹೆಚ್ಚಿಸಲು ಅನುವುಮಾಡಿಕೊಡುವ ಸಲುವಾಗಿ ಅಂತರಾಷ್ಟ್ರೀಯ ದ್ರಾಕ್ಷಾರಸ ಉತ್ಸವ ಆಯೋಜಿಸಲಾಗಿದೆ ಎಂದರು.

ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!

International Wine Fair is organized at Karwar

ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಉದ್ಘಾಟಿಸಲಿದ್ದು, ತೋಟಕಾರಿಕೆ ಸಚಿವ ಎಂ ಸಿ ಮನಗೂಳಿ ಹಾಗೂ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಉಪಸ್ಥಿತರು ಇರಲಿದ್ದಾರೆ. ಮೂರು ದಿನವೂ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರವೇಶ ದರ ರೂ.20 ನಿಗದಿ ಮಾಡಲಾಗಿದೆ ಎಂದು ಟಿ ಸೋಮು ಮಾಹಿತಿ ನೀಡಿದರು.

English summary
International Wine Fair is organized at Karwar for three days from December 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X