Get Updates
Get notified of breaking news, exclusive insights, and must-see stories!

ಕಾರವಾರ: ಕೂರ್ಮಗಡ ದ್ವೀಪ ಜಾತ್ರೆಗೆ ಹರಿದುಬಂದ ಭಕ್ತ ಸಾಗರ, ಇಲ್ಲಿನ ವಿಶೇಷತೆ ಏನು?

ಕಾರವಾರ, ಜನವರಿ 25: ಸಮುದ್ರ ಮಧ್ಯದ ಕೂರ್ಮಗಡ ದ್ವೀಪದ ಮೇಲೆ ನೆಲೆಸಿರುವ ಐತಿಹಾಸಿಕ ನರಸಿಂಹ ದೇವರ ಜಾತ್ರಾ ಮಹೋತ್ಸವ ಗುರುವಾರ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಮೀನುಗಾರರ ಆರಾಧ್ಯದೈವವಾದ ನರಸಿಂಹ ದೇವರನ್ನು ಕಡವಾಡದಿಂದ ದೋಣಿ ಮೂಲಕ ಬೆಳಿಗ್ಗೆ ಕೊಂಡೊಯ್ದು ದ್ವೀಪದ ಮೇಲಿರುವ ಗುಡಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರು, ಪ್ರವಾಸಿಗರು ಬೋಟ್‌ಗಳ ಮೂಲಕ ತೆರಳಿ ದೇವರ ದರ್ಶನ ಪಡೆದರು.

Here Is The Speciality Of Kurumgad Island Jatre

ಅನಾಧಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಕೂರ್ಮಗಡ ದ್ವೀಪ ಜಾತ್ರೆಗೆ ಈ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರ ದರ್ಶನದ ಜೊತೆಗೆ ಕೂರ್ಮಗಡ ದ್ವೀಪವನ್ನು ಸುತ್ತಿ ಅನುಭವ ಪಡೆದುಕೊಂಡರು.

ಇನ್ನು ದ್ವೀಪದ ಜಾತ್ರೆಗೆ ತೆರಳುವ ಭಕ್ತರಿಗೆ ಬೈತಖೋಲ್ ಮೀನುಗಾರಿಕೆ ಬಂದರಿನಿಂದ ಕರೆದೊಯ್ಯಲು ಮೀನುಗಾರಿಕಾ ಬೋಟ್‌ಗಳು ಉಚಿತ ವ್ಯವಸ್ಥೆ ಮಾಡಿದ್ದವು. ಪ್ರಯಾಣದ ನಡುವೆಯೇ ದೋಣಿಯಲ್ಲಿ ಮೀನುಗಾರರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನರಸಿಂಹ ಹಾಗೂ ಪರಿವಾರದ ಮಾರುತಿ, ಬ್ರಹ್ಮ, ಖಾಪ್ರಿ ಮತ್ತು ಜಟಗಾ ದೇವರಿಗೆ ಬಾಳೆಗೊನೆ, ತೆಂಗಿನಕಾಯಿಯ ಪಂಚಕಜ್ಜಾಯ ವಿವಿಧ ರೀತಿಯ ನೈವೇದ್ಯವನ್ನು ಭಕ್ತರು ಅರ್ಪಿಸಿದರು. ಭಕ್ತರು ನೀಡಿದ ಬಾಳೆಗೊನೆಗಳನ್ನು ಅಲ್ಲಿಯೇ ಹರಾಜು ಕರೆದು ನೀಡಲಾಯಿತು.

ಇನ್ನು ಕಳೆದ ನಾಲ್ಕು ವರ್ಷದ ಹಿಂದೆ ದೋಣಿ ದುರಂತ ಸಂಭವಿಸಿ 17 ಮಂದಿ ಮೃತಪಟ್ಟ ಬಳಿಕ ಜಾತ್ರೆಗೆ ತೆರಳುವವರ ಮೇಲೆ ತೀವ್ರ ನಿಗಾ ಈಡಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದು ಬೋಟ್ ಹತ್ತುವಾಗ ಹಾಗೂ ಇಳಿಯುವವರ ವಿವಿರಗಳನ್ನು ದಾಖಲಿಸಿಕೊಂಡು ಯಾವುದೇ ನುಕುನುಗ್ಗಲು ಆಗದಂತೆ ಎಚ್ಚರ ವಹಿಸಿದ್ದರು.

Here Is The Speciality Of Kurumgad Island Jatre

ಇನ್ನೂ ಜಾತ್ರೆಯು ದ್ವೀಪದಲ್ಲಿ ನಡೆಯುವುದರಿಂದ ದೇವರ ದರ್ಶನಕ್ಕೆ ಬರುವ ಭಕ್ತರಲ್ಲಿ ಹೆಚ್ಚಿನವರು ಪೂಜಾ ಸಾಮಗ್ರಿಯೊಂದಿಗೆ ಪಾಯಸ, ಸಿಹಿ ತಿನಿಸುಗಳನ್ನು ಸಹ ತಂದಿದ್ದರು. ಮಧ್ಯಾಹ್ನದ ಹೊತ್ತಿಗೆ ದ್ವೀಪದ ದಡದಲ್ಲಿ ಭಕ್ತರು ಊಟ, ಉಪಾಹಾರ ಸೇವಿಸುತ್ತಿರುವುದು ಕಂಡುಬಂತು.

ನಿರ್ಮಾಣವಾಗದ ಜಟ್ಟಿ ಭಕ್ತರ ಪರದಾಟ

ಇನ್ನು ಕೂರ್ಮಗಡ ದ್ವೀಪದ ಬಳಿ ತೆರಳುವ ಬೋಟ್‌ಗಳಿಗೆ ನಿಲ್ಲಲು ಯಾವುದೇ ಜೆಟ್ಟಿ ವ್ಯವಸ್ಥೆ ಇಲ್ಲದ ಕಾರಣ ಭಕ್ತರು ಹಾಗೂ ಪ್ರವಾಸಿಗರು ಪರದಾಡುವಂತಯಿತು. ನೂರಾರು ಮೀಟರ್ ದೂರದ ಸಮುದ್ರದಲ್ಲಿಯೆ ಬೋಟ್‌ಗಳನ್ನು ನಿಲ್ಲಿಸಿ ಡಿಗ್ಗಿ ಮೂಲಕ ಕರೆದುಕೊಂಡು ತೆರಳಲಾಯಿತು. ಕಳೆದ ಕೆಲ ವರ್ಷದಿಂದ ಜೆಟ್ಟಿ ನಿರ್ಮಾಣದ ಭರವಸೆ ನೀಡಲಾಗಿತ್ತಾದರೂ ಅದು ಭರವಸೆಯಾಗಿಯೇ ಉಳಿದಿದೆ. ಮತ್ತೊಂದು ಬದಿ ಸಣ್ಣ ಜೆಟ್ಟಿ ಇದೆಯಾದರೂ ಅಲ್ಲಿ ದೊಡ್ಡ ಬೋಟ್ ನಿಲ್ಲಿಸಲು ಸಾಧ್ಯವಾಗದ ಕಾರಣ ಪ್ರತಿ ವರ್ಷವೂ ಇಲ್ಲಿ ಮೀನುಗಾರರು ಪರದಾಡುವ ಸ್ಥಿತಿ ಇದೆ.

ಮೀನುಗಾರರು ಮೀನುಗಾರಿಕೆ ಹಂಗಾಮು ಪ್ರಾರಂಭವಾಗುವ ಪೂರ್ವದಲ್ಲಿ ನರಸಿಂಹ ದೇವರಿಗೆ ಪೂಜೆ ಸಲ್ಲಿಸಿ ಪ್ರಾರಂಭಿಸುವುದು ಪರಂಪರೆ. ಕಡಲಿನಲ್ಲಿ ಮೀನುಗಾರಿಕೆ ನಡೆಸುವಾಗ ಯಾವುದೇ ರೀತಿಯ ತೊಂದರೆ ಬರದಂತೆ ಹಾಗೂ ಮೀನು ಯತೇಚ್ಛವಾಗಿ ಸಿಗುವಂತಾಗಲು ದ್ವೀಪದ ದೇವರಲ್ಲಿ ಮೊರೆ ಇಡಲಾಗುತ್ತದೆ. ಮೀನುಗಾರರ ಜೊತೆಗೆ ಇತರೆ ಸಮುದಯದ ಭಕ್ತರು ಕೂಡ ತುಲಾಭಾರ ಹಾಗೂ ವೈವಿಧ್ಯಮಯ ಭಕ್ಷಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಅಲ್ಲದೆ ಇಲ್ಲಿಗೆ ದೋಣಿಗಳ ಮೂಲಕ ತೆರಳುವ ಭಕ್ತರಿಗೆ ಎಲ್ಲಿಲ್ಲದ ಖುಷಿ ನೀಡುತ್ತದೆ ಎನ್ನುತ್ತಾರೆ ಮೀನುಗಾರ ಮನೋಜ ಹರಿಕಂತ್ರ.

Here Is The Speciality Of Kurumgad Island Jatre

ಇನ್ನು ಐತಿಹಾಸಿಕವಾದ ಕೂರ್ಮಗಡ ಜಾತ್ರೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅದರಲ್ಲಿಯೂ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕ್ಕೊಳ್ಳುತ್ತಾರೆ. ಆದರೆ ದ್ವೀಪದಲ್ಲಿ ಜೆಟ್ಟಿ ಸೇರಿದಂತೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಆಗಬೇಕಿರುವ ವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ವ್ಯವಸ್ಥೆ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+