ಜನರನ್ನು ಸೆಳೆಯಲು ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿಗಳು!

ಕಾರವಾರ, ಡಿಸೆಂಬರ್ 22: ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ನಡೆಯುತ್ತಿದೆ. ಅಭ್ಯರ್ಥಿಗಳು ಜನರಿಗೆ ತಮ್ಮ ಗುರುತನ್ನು ಹೇಳಲು ಹಲವು ಪ್ರಯೋಗ ಮಾಡಿದ್ದಾರೆ. ಕಾರವಾರದಲ್ಲಿ ಚುನಾವಣಾ ಚಿನ್ಹೆಯನ್ನು ಮುದ್ರಿಸಿ ಹಂಚಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ವಿಭಿನ್ನ ಪ್ರಚಾರ ತಂತ್ರವನ್ನು ಮಾಡಿದ್ದಾರೆ. ಮತದಾರರಿಗೆ ಚಿನ್ಹೆ ಮುದ್ರಿಸಿ ನೀಡುತ್ತಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಸ್ನೋಟಿ ಗ್ರಾಮದಲ್ಲಿ ಕೇಳಿ ಬಂದಿದೆ.

ಅಸ್ನೋಟಿ ಗ್ರಾಮದ ಬೂತ್ ಸಂಖ್ಯೆ 19ರಲ್ಲಿ ಅಭ್ಯರ್ಥಿಗಳ ಚಿನ್ಹೆ ಇರುವ ಹಾಳೆಯ ಮೇಲೆ ಮತದಾರರ ಸಂಖ್ಯೆ ಬರೆದು ಕೊಡಲಾಗಿದೆ. ಈ ಕುರಿತು ಚುನಾವಣಾಧಿಕಾರಿಗಳಿಗೆ ಪ್ರತಿಸ್ಪರ್ಧಿಗಳು ದೂರು ನೀಡಿದ್ದಾರೆ.

Gram Panchayat Election Symbol Printed And Distribute To Voters

ಈ ಘಟನೆಯಿಂದಾಗಿ ಮತಗಟ್ಟೆ ಬಳಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಆದರೆ, ಪಂಚಾಯಿತಿಯ ಮತದಾನಕ್ಕೆ ಯಾವುದೇ ಅಡಚಣೆ ಆಗಲಿಲ್ಲ.

ವಾಹನ ನುಗ್ಗಿಸಿದ ವ್ಯಕ್ತಿ ವಶಕ್ಕೆ: ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ತಂದು ಪೊಲೀಸರೊಂದಿಗೆ ವಾಗ್ವಾದ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರದ ಶಿರವಾಡದಲ್ಲಿ ನಡೆದಿದೆ.

ಶಿರವಾಡ ಪಬ್ಲಿಕ್ ಸ್ಕೂಲ್‌ನಲ್ಲಿ ನಾಲ್ಕು ಮತಗಟ್ಟೆಗಳನ್ನು ತೆರೆಯಲಾಗಿದೆ. ಇದು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಮತದಾನ ಆರಂಭವಾದ ಬಳಿಕ ಕಾರಿನಲ್ಲಿ ಬಂದ ವ್ಯಕ್ತಿ ನಿಷೇಧಾಜ್ಞೆ ವ್ಯಾಪ್ತಿಯಲ್ಲಿ ಕಾರು ನುಗ್ಗಿಸಿದ.

blockquote class="twitter-tweet blockquote">

ನಿಷೇಧಾಜ್ಞೆ ನಡುವೆಯೂ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ತಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಾರವಾರದ ಶಿರವಾಡದಲ್ಲಿ ನಡೆದಿದೆ.#Karwar #Grampanchayatelections pic.twitter.com/GZ2s5Koj7e

— oneindiakannada (@OneindiaKannada) December 22, 2020

ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ವಾಹನ ತೆಗೆಯುವಂತೆ ಸೂಚಿಸಿದರು.‌ ಆದರೆ, ವಾಹನ ತೆಗೆಯದೇ ಪೊಲೀಸರೊಂದಿಗೆ ವಾಗ್ವಾದ ಮಾಡಿದ. ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಲು ಮುಂದಾದಾಗ ಪಿಎಸ್ಐ ರೇವಣ್ಣ ಸಿದ್ದಪ್ಪ ಹಾಗೂ ಸಿಬ್ಬಂದಿ ವಾಹನದಿಂದ ಆತನನ್ನು ಇಳಿಸಿ ವಶಕ್ಕೆ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+