ಗ್ರಾ.ಪಂ ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷರನ್ನು ಸೋಲಿಸಿ ವಿಜಯಮಾಲೆ ಧರಿಸಿದ ದಂಪತಿ
ಕಾರವಾರ, ಡಿಸೆಂಬರ್ 30: ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕರನ್ನು ಸೋಲಿಸುವ ಮೂಲಕ ದಂಪತಿಗಳಿಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಕಾರವಾರ ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯತಿಯ ಕಿಲ್ಲೆ ವಾರ್ಡ್ ನಿಂದ ಸ್ಪರ್ಧಿಸಿದ್ದ ಸೂರಜ್ ದೇಸಾಯಿ 109 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಚಿತ್ತಾಕುಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಜು ತಾಂಡೇಲ್ ವಿರುದ್ಧ ಸ್ಪರ್ಧಿಸಿದ್ದ ಅವರು, 440 ಮತಗಳನ್ನು ಪಡೆದಿದ್ದು, ರಾಜು ತಾಂಡೇಲ್ 331 ಮತಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ಸೂರಜ್ ದೇಸಾಯಿ ಪತ್ನಿ ಸ್ವಾತಿ ದೇಸಾಯಿ ಕೂಡ ಚಿತ್ತಾಕುಲ ಗ್ರಾಮ ಪಂಚಾಯಿತಿಯ ಮಡಿವಾಳ ಶಿಟ್ಟಾ ವಾರ್ಡ್ ನಿಂದ ಆಯ್ಕೆಯಾಗಿದ್ದಾರೆ. ಒಟ್ಟು 311 ಮತಗಳನ್ನು ಪಡೆದಿದ್ದ ಸ್ವಾತಿ ಚಿತ್ತಾಕುಲ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷೆ ದಿಲ್ಸಾದ್ ಶೇಖ್ ವಿರುದ್ಧ 231 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದಿಲ್ಸಾದ್ ಶೇಖ್ 98 ಮತಗಳನ್ನು ಪಡೆದಿದ್ದಾರೆ. ಇನ್ನು ಚಿತ್ತಾಕುಲದ ಬೇತುನಾಯ್ಕ ವಾಡದ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ವಾತಿ ದೇಸಾಯಿ 5 ಮತಗಳಿಂದ ಸೋಲು ಅನುಭವಿಸಿದ್ದಾರೆ.












Click it and Unblock the Notifications