ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಾಳಿಗೆಯಲ್ಲಿದ್ದ ಗೋವಾ ಮದ್ಯದ ಬಾಟಲಿಗಳನ್ನು ಹೊರತೆಗೆದ ಬೆಂಗಳೂರು ಅಬಕಾರಿ ಅಧಿಕಾರಿಗಳು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ನವೆಂಬರ್.21: ಮನೆಯ ನೆಲಮಾಳಿಗೆಯಲ್ಲಿ ಅಡಗಿಸಿಟ್ಟಿದ್ದ 20 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಬೆಂಗಳೂರಿನಿಂದ ಬಂದ ಅಬಕಾರಿ ವಿಚಕ್ಷಣಾ ದಳದ ಅಧಿಕಾರಿಗಳ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿ ಇಂದು ಬುಧವಾರ ಬೆಳಗ್ಗೆ ನಡೆದಿದೆ.

ಜೊಯಿಡಾ ರಾಮನಗರದ ನಾಗನಾಥಗಲ್ಲಿಯ ಪರಶುರಾಮ ಗಾಂವ್ಕರ ಅವರ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಬೆಡ್ ರೂಂ ಒಳಗಿನ ನೆಲಮಾಳಿಗೆಯಿಂದ 20 ಲಕ್ಷ ಮೌಲ್ಯದ 270 ಮದ್ಯದ ಬಾಟಲಿಗಳ ಬಾಕ್ಸ್ ಹಾಗೂ 19 ಬಿಯರ್ ಬಾಟಲಿಗಳ ಬಾಕ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.

Goa liquor bottles found in Ramanagar

ಅಕ್ರಮ ತಡೆ: ಸಕಾಲ ವ್ಯಾಪ್ತಿಗೆ ಇನ್ನು ಅಬಕಾರಿ ಇಲಾಖೆಅಕ್ರಮ ತಡೆ: ಸಕಾಲ ವ್ಯಾಪ್ತಿಗೆ ಇನ್ನು ಅಬಕಾರಿ ಇಲಾಖೆ

ಇನ್ನು ಸಮೀಪದ ಗಣೇಶ ಗಲ್ಲಿಯ ಚಂದ್ರಶೇಖರ ಎನ್ನುವವರ ಮನೆಯಲ್ಲೂ 70 ಬಾಕ್ಸ್ ಗೋವಾ ಮದ್ಯ ಹಾಗೂ ಸ್ಯಾಂಟ್ರೊ ಕಾರನ್ನು ವಶಪಡಿಸಿಕೊಂಡಿದ್ದಾರೆ.

ರಾಮನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಜಾಲದ ಕುರಿತು ಈ ಹಿಂದೆ ಸ್ಥಳೀಯರು ಸ್ಥಳೀಯ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಜರುಗಿಸಿರಲಿಲ್ಲ .ಈ ಹಿನ್ನಲೆಯಲ್ಲಿ ಸ್ಥಳೀಯರು ಬೆಂಗಳೂರಿನ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು.

Goa liquor bottles found in Ramanagar

ಬಾರ್‌ ಲೈಸೆನ್ಸ್‌ ನವೀಕರಣಕ್ಕೆ ಆನ್‌ಲೈನ್‌: ಭ್ರಷ್ಟಾಚಾರಕ್ಕೆ ಬಿತ್ತು ಬ್ರೇಕ್‌ಬಾರ್‌ ಲೈಸೆನ್ಸ್‌ ನವೀಕರಣಕ್ಕೆ ಆನ್‌ಲೈನ್‌: ಭ್ರಷ್ಟಾಚಾರಕ್ಕೆ ಬಿತ್ತು ಬ್ರೇಕ್‌

ಈ ಹಿನ್ನೆಲೆಯಲ್ಲಿ ರಾಜ್ಯ ಅಬಕಾರಿ ವಿಚಕ್ಷಣ ದಳದ ಉಪಾಧೀಕ್ಷಕ ಅಶೋಕ್, ನಿರೀಕ್ಷಕ ರವಿಕುಮಾರ್, ಉಪ‌ನಿರೀಕ್ಷಕ ಪ್ರಕಾಶ್ ನೇತ್ರತ್ವದ ತಂಡ ದಾಳಿ ನಡೆಸಿ ಗೋವಾ ಮದ್ಯವನ್ನು ವಶಕ್ಕೆ ಪಡೆದಿದೆ.

English summary
Goa liquor bottles found in Parashurama Gaonkar's house at Ramanagar in Uttara Kannada district. Now this bottles seized by Bangalore Excise officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X