ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಾದಲ್ಲಿ ಜುಲೈ ಅಂತ್ಯದವರೆಗೆ ನೆರೆ ರಾಜ್ಯಗಳ ಮೀನು ಆಮದು ನಿಷೇಧ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ.19: ಗೋವಾ ಸರ್ಕಾರವು ಜುಲೈ ತಿಂಗಳ ಅಂತ್ಯದವರೆಗೆ ಹೊರ ರಾಜ್ಯಗಳಿಂದ ಮೀನುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಇದರಿಂದಾಗಿ ರಾಜ್ಯದ ಗಡಿಭಾಗವಾದ ಮಾಜಾಳಿಯಲ್ಲಿ ಕೇರಳ, ಕರ್ನಾಟಕ, ತಮಿಳುನಾಡುಗಳಿಂದ ಮೀನುಗಳನ್ನು ತುಂಬಿಕೊಂಡ ಹೊರಟಿದ್ದ ಮೀನು ಲಾರಿಗಳು ಸಾಲುಗಟ್ಟಿ ನಿಂತಿವೆ.

ಆಮದು ಸುಂಕ ತಗ್ಗಿಸಿದ ಭಾರತ, ಗರಂ ಆದ ಟ್ರಂಪ್ಆಮದು ಸುಂಕ ತಗ್ಗಿಸಿದ ಭಾರತ, ಗರಂ ಆದ ಟ್ರಂಪ್

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಇತರ ರಾಜ್ಯಗಳಿಂದ ಮೀನುಗಳನ್ನು ಆಮದು ಮಾಡಿಕೊಳ್ಳುವುದನ್ನು ಬುಧವಾರ ನಿಷೇಧಿಸಿದ್ದಾರೆ. ಅಲ್ಲದೆ, ಗಡಿಯಲ್ಲಿ ಇತರ ರಾಜ್ಯದ ಮೀನು ಲಾರಿಗಳನ್ನು ಒಳ ಬಿಡದಂತೆ ಅವರು ಚೆಕ್ ಪೋಸ್ಟ್ ಗಳಿಗೆ ಸೂಚನೆ ಹೊರಡಿಸಿದ್ದಾರೆ.

Goa government has ordered a ban on imports of fish from outside states

ಇದರಿಂದಾಗಿ ಮೀನು ತುಂಬಿಕೊಂಡು ರಾಜ್ಯದ ಮೂಲಕ ಗೋವಾಕ್ಕೆ ತೆರಳಲು ಹೋಗಿದ್ದ ಅನೇಕ ಮೀನು ಲಾರಿಗಳನ್ನು ಗಡಿಯಲ್ಲಿ ಗೋವಾ ಪೊಲೀಸರು ತಡೆಹಿಡಿದ್ದಾರೆ.

ಗೋವಾ ಆಹಾರ ಮತ್ತು ಮಾದಕ ವಸ್ತುಗಳ ಅಡ್ಮಿನಿಸ್ಟ್ರೇಶನ್ (ಎಫ್ಡಿಎ) ಗೋವಾದ ಕೆಲವೆಡೆ ಮೀನು ಮಾರುಕಟ್ಟೆಯ ಮೇಲೆ ದಾಳಿ ನಡೆಸಿದ್ದ ವೇಳೆ, ಮೀನುಗಳನ್ನು ಕೆಡದಂತೆ ಸಂರಕ್ಷಿಸಿಡಲು ಟಾಕ್ಸಿಕ್ ಆಸಿಡ್ ಹಾಗೂ ಫಾರ್ಮಾಲಿನ್ ರಾಸಾಯನಿಕಗಳನ್ನು ಬಳಸುತ್ತಿರುವುದು ಪ್ರಾಥಮಿಕವಾಗಿ ಬೆಳಕಿಗೆ ಬಂದಿತ್ತು.

ಆದರೆ, ನಂತರ ಅದು ಈ ರಾಸಾಯನಿಕಗಳು ನೈಸರ್ಗಿಕ ಮಟ್ಟದಲ್ಲೇ ಇದೆ ಎಂದು ತಿಳಿಸಿತ್ತು. ಮೀನುಗಳಲ್ಲಿ ಫಾರ್ಮಾಲಿನ್ ಅಂಶ ಇಲ್ಲ ಎಂಬ ಭೀತಿಯನ್ನು ಅದು ತನ್ನ ವರದಿಯಲ್ಲಿ ತಿಳಿಸಿತ್ತು.

ಆದರೂ ಸರ್ಕಾರ ಹೊರ ರಾಜ್ಯದ ಮೀನುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ವಿವಾದ ಸೃಷ್ಟಿಸಿದೆ. ಮುಂಗಾರು ಸಮಯದಲ್ಲಿ ಪ್ರತಿವರ್ಷವೂ ಜುಲೈ 31ರವರೆಗೆ ದೇಶದ ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಹೀಗಾಗಿ ಎಲ್ಲೆಡೆ ಈ ವೇಳೆ ಮೀನುಗಳ ಕೊರತೆ ಉಂಟಾಗುತ್ತದೆ.

Goa government has ordered a ban on imports of fish from outside states

ಗೋವಾ ರಾಜ್ಯವು ಪ್ರವಾಸಿ ಕೇಂದ್ರ ಆಗಿರುವುದರಿಂದ ಇಲ್ಲಿಗೆ ಅತಿ ಹೆಚ್ಚು ಮೀನುಗಳ ಅಗತ್ಯ ಇದೆ. ಆದರೆ, ಸ್ಥಳೀಯ ನಾಡದೋಣಿ ಮೀನುಗಾರರು ಈ ಸಮಯದಲ್ಲಿ ಸಮುದ್ರಕ್ಕೆ ಇಳಿದು ಮೀನುಗಳನ್ನು ಹಿಡಿಯುತ್ತಿದ್ದಾರೆ. ಹೀಗಾಗಿ, ರಾಜ್ಯದ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಸ್ಥಳೀಯ ಮೀನು ಲಭ್ಯವಿದೆ.

ಹೀಗಾಗಿ ಇತರ ರಾಜ್ಯದ ಮೀನುಗಳ ಅವಶ್ಯಕತೆ ಈಗಿಲ್ಲ ಎಂದು ಸಿಎಂ ಪರಿಕ್ಕರ್ ನಿಷೇಧದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

'ಇದು ಕೇವಲ ಮೀನುಗಳಿಗೆ ಮಾತ್ರವಲ್ಲ. ಹಣ್ಣುಗಳು ಮತ್ತು ತರಕಾರಿಗಳನ್ನು ಕೂಡ ತಪಾಸಣೆಗಾಗಿ ತಿಳಿಸಿದ್ದೇವೆ. ಆಹಾರ ಪದಾರ್ಥಗಳಲ್ಲಿ ಯಾವುದೇ ಸಂರಕ್ಷಕ ರಾಸಾಯನಿಕಗಳು ಪತ್ತೆಯಾದರೆ ಅವುಗಳನ್ನೂ ನಿಷೇಧಿಸಲಾಗುವುದು" ಎಂದು ಪರಿಕ್ಕರ್ ಹೇಳಿದ್ದಾರೆ.

English summary
Goa government has ordered a ban on imports of fish from outside states till the end of July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X