ಸಮುದ್ರ ತೀರದಲ್ಲಿ ಪತ್ತೆಯಾಯ್ತು 8,000 ವರ್ಷಗಳಷ್ಟು ಹಳೆಯ ರಸ್ತೆ; ಆದಿಮಾನವರ ಹೆಜ್ಜೆಗುರುತು ನೋಡಿ ವಿಜ್ಞಾನಿಗಳಿಗೆ ಅಚ್ಚರಿ

ಲಂಡನ್: ಇಂಗ್ಲೆಂಡ್‌ನ ಫೋರ್ಮ್‌ಬಿ (Formby) ಕರಾವಳಿಯಲ್ಲಿ ಸುಮಾರು 8,000 ವರ್ಷಗಳಷ್ಟು ಹಳೆಯದಾದ, ಬರೋಬ್ಬರಿ ಎರಡು ಮೈಲಿ ಉದ್ದದ ಪ್ರಾಚೀನ ಹೆದ್ದಾರಿಯೊಂದು ಪತ್ತೆಯಾಗಿದೆ. ಸಾವಿರಾರು ವರ್ಷಗಳ ಹಿಂದೆ ಆದಿಮಾನವರು ಮತ್ತು ಕಾಡು ಪ್ರಾಣಿಗಳು ಒಂದೇ ಮಾರ್ಗದಲ್ಲಿ ಒಟ್ಟಿಗೆ ಸಂಚರಿಸುತ್ತಿದ್ದ ನೈಜ ಹೆಜ್ಜೆಗುರುತುಗಳು ಇಲ್ಲಿ ಪತ್ತೆಯಾಗಿದ್ದು, ಇತಿಹಾಸಕಾರರನ್ನು ವಿಸ್ಮಯಗೊಳಿಸಿದೆ. ಸಮುದ್ರದ ಅಲೆಗಳ ಆರ್ಭಟ ಹಾಗೂ ತೀರದ ಮಣ್ಣಿನ ಸವೆತವು ವಿಜ್ಞಾನಿಗಳಿಗೆ ಇತಿಹಾಸದ ರೋಮಾಂಚನಕಾರಿ ರಹಸ್ಯವೊಂದನ್ನು ಬಿಚ್ಚಿಟ್ಟಿದೆ.

ಪ್ರಖ್ಯಾತ ವಿಜ್ಞಾನ ಪತ್ರಿಕೆ 'ನೇಚರ್ ಇಕಾಲಜಿ ಆಂಡ್ ಎವಲ್ಯೂಷನ್' ಪ್ರಕಟಿಸಿರುವ ಹೊಸ ಅಧ್ಯಯನದ ಪ್ರಕಾರ, ಈ ಕರಾವಳಿ ತೀರವು ಸಹಸ್ರಾರು ವರ್ಷಗಳ ಕಾಲ ಜೀವಸಂಕುಲದ ಕೇಂದ್ರವಾಗಿತ್ತು. ಹಿಮಯುಗ ಅಂತ್ಯಗೊಂಡು ಹಿಮನದಿಗಳು ಕರಗಿದಾಗ ಸಮುದ್ರ ಮಟ್ಟ ದಿಢೀರ್ ಏರಿಕೆಯಾಯಿತು. ಈ ಹವಾಮಾನ ವೈಪರೀತ್ಯದಿಂದಾಗಿ ಮನುಷ್ಯರು ಮತ್ತು ವನ್ಯಜೀವಿಗಳು ಬಲವಂತವಾಗಿ ಭೂಭಾಗದ ಒಳಗಡೆ ವಲಸೆ ಹೋಗಬೇಕಾಯಿತು. ಈ ಒತ್ತಡದಿಂದಾಗಿ ಎಲ್ಲರೂ ಒಂದೇ ಕರಾವಳಿ ಕಾರಿಡಾರ್‌ನಲ್ಲಿ ಒಟ್ಟಿಗೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಸಂಶೋಧನೆಯ ಮುಖ್ಯ ಲೇಖಕಿ ಅಲಿಸನ್ ಬರ್ನ್ಸ್ ತಿಳಿಸಿದ್ದಾರೆ.

Ancient Coastal Road

ಮರಳಿನ ಅಡಿಯಲ್ಲಿ ಅಡಗಿದೆ ಇತಿಹಾಸದ 36 ಪದರಗಳು

ಫೋರ್ಮ್‌ಬಿ ಕರಾವಳಿಯ ಮರಳಿನ ದಿಬ್ಬಗಳ ಅಡಿಯಲ್ಲಿ ಸುಮಾರು 36 ಪ್ರತ್ಯೇಕ ಮಣ್ಣಿನ ಪದರಗಳು ಪತ್ತೆಯಾಗಿವೆ. ಇದು ಕೇವಲ ಮಣ್ಣಲ್ಲ, ಬದಲಿಗೆ ಹಳೆಯ ಇತಿಹಾಸವನ್ನು ದಾಖಲಿಸಿದ ಮಣ್ಣಿನ ಕೇಕ್‌ನಂತಿದೆ. ಮಧ್ಯಶಿಲಾಯುಗದಿಂದ ಹಿಡಿದು ಮಧ್ಯಯುಗದವರೆಗಿನ ಕಾಲಾವಧಿಯನ್ನು ಈ ಪದರಗಳು ಪ್ರತಿನಿಧಿಸುತ್ತವೆ. ಈ ಮಣ್ಣಿನ ಪದರಗಳಲ್ಲಿ ಸಿಲುಕಿಕೊಂಡಿದ್ದ ಪುರಾತನ ಬರ್ಚ್ ಮತ್ತು ಸ್ಪ್ರೂಸ್ ಮರಗಳ ಬೀಜಗಳನ್ನು ವಿಜ್ಞಾನಿಗಳು 'ರೇಡಿಯೋಕಾರ್ಬನ್ ಡೇಟಿಂಗ್' ತಂತ್ರಜ್ಞಾನಕ್ಕೆ ಒಳಪಡಿಸಿದಾಗ, ಈ ತೀರವು ಕ್ರಿ.ಪೂ. 15,000ರಿಂದ ಕ್ರಿ.ಶ.1450ರವರೆಗೆ ನಿರಂತರ ಹೆದ್ದಾರಿಯಾಗಿ ಬಳಕೆಯಲ್ಲಿದೆ ಎಂಬುದು ಸಾಬೀತಾಗಿದೆ.

ಇಲ್ಲಿನ ಮೇಲ್ಭಾಗದ ಪದರಗಳು ಸಮುದ್ರದ ಬಿರುಗಾಳಿಗೆ ಕೊಚ್ಚಿ ಹೋಗುತ್ತಿದ್ದರೂ, ಆಳವಾದ ಮಣ್ಣಿನಲ್ಲಿ ಗಾಳಿ ಸೋಕದೆ ಅಡಗಿರುವ ಹೆಜ್ಜೆಗುರುತುಗಳು ಇಂದಿಗೂ ಅತ್ಯಂತ ಸ್ಪಷ್ಟವಾಗಿ ಸಂರಕ್ಷಿಸಲ್ಪಟ್ಟಿವೆ. ಪ್ರತಿ ಬಾರಿ ಸಮುದ್ರದ ಅಲೆಗಳು ಮಣ್ಣನ್ನು ಕೊಚ್ಚಿ ಕರೆದೊಯ್ದಾಗ ಹೊಸ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತಿವೆ. ವಿಶ್ವದ ಇತರೆಡೆ ಸಿಗುವ ಪುರಾತನ ಹೆಜ್ಜೆಗುರುತುಗಳು ಕೇವಲ ಮಾನವರಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ, ಫೋರ್ಮ್‌ಬಿ ಕರಾವಳಿ ವಿಶಿಷ್ಟವಾಗಿದೆ. ಏಕೆಂದರೆ ಇದು ಇಡೀ ಪರಿಸರ ವ್ಯವಸ್ಥೆಯ ಸಹಬಾಳ್ವೆಯನ್ನು ತೋರಿಸುತ್ತದೆ.

US Green Card: ಅಮೆರಿಕ ಗ್ರೀನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ; ಭಾರತೀಯರ ಮೇಲಾಗುವ ಪರಿಣಾಮಗಳೇನು?
US Green Card: ಅಮೆರಿಕ ಗ್ರೀನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ; ಭಾರತೀಯರ ಮೇಲಾಗುವ ಪರಿಣಾಮಗಳೇನು?

ಇಲ್ಲಿ ಈಗ ಸಂಪೂರ್ಣ ಅಳಿದು ಹೋಗಿರುವ ದೈತ್ಯ ಕಾಡುಕೋಣಗಳು (Aurochs), ಕೆಂಪು ಜಿಂಕೆಗಳು ಮತ್ತು ಕಾಡುಹಂದಿಗಳ ಹೆಜ್ಜೆಗಳ ಜೊತೆಗೆ ಕ್ರೂರ ಪ್ರಾಣಿಗಳಾದ ಬೂದು ತೋಳಗಳು (Grey Wolves) ಹಾಗೂ ಲಿಂಕ್ಸ್ ಕಾಡುಬೆಕ್ಕು ಪ್ರಾಣಿಗಳ ಹೆಜ್ಜೆಗುರುತುಗಳು ಮಾನವನ ಹೆಜ್ಜೆಗಳ ಜೊತೆ ಪತ್ತೆಯಾಗಿವೆ. ಅಂದರೆ, ಅಂದಿನ ಕಾಲದಲ್ಲಿ ಮನುಷ್ಯರು ಮತ್ತು ಕಾಡುಮೃಗಗಳು ಪರಸ್ಪರ ಹೊಂದಾಣಿಕೆಯಿಂದ ಒಂದೇ ಹಾದಿಯನ್ನು ಹಂಚಿಕೊಂಡು ಬದುಕುತ್ತಿದ್ದವು ಎಂಬುದಕ್ಕೆ ಇದು ಜೀವಂತ ಸಾಕ್ಷಿ ಎನ್ನುವುದು ದೃಢವಾಗಿದೆ.

ಹಸುಗಳ ಹೆಜ್ಜೆ ಎಂದು ನಿರ್ಲಕ್ಷಿಸಿದ್ದರು

ಚಿಕ್ಕದೊಂದು ಕುತೂಹಲ ದೊಡ್ಡ ಆವಿಷ್ಕಾರಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ. 1970ರ ದಶಕದಲ್ಲೇ ಸ್ಥಳೀಯ ಪ್ರವಾಸಿಗರು ಮರಳಿನಲ್ಲಿ ಈ ಹೆಜ್ಜೆಗಳನ್ನು ಗುರುತಿಸಿದ್ದರು. ಆದರೆ, ಇವೆಲ್ಲ ಆಧುನಿಕ ಡೈರಿ ಫಾರ್ಮ್‌ಗಳ ಹಸುಗಳ ಹೆಜ್ಜೆಗುರುತುಗಳು ಎಂದು ಜನರು ನಿರ್ಲಕ್ಷಿಸಿದ್ದರು. ಆದರೆ, 1990ರ ದಶಕದಲ್ಲಿ ಒಬ್ಬ ನಿವೃತ್ತ ಶಾಲಾ ಶಿಕ್ಷಕರು ಈ ಬಗ್ಗೆ ತೀವ್ರ ಕುತೂಹಲ ತಳೆದು ಸಂಶೋಧನೆ ನಡೆಸಿ ಇದರ ಕಾಲಾವಧಿಯನ್ನು ಜಗತ್ತಿಗೆ ಪರಿಚಯಿಸಿದಾಗ ವಿಜ್ಞಾನ ಲೋಕವೇ ಬೆಚ್ಚಿಬಿದ್ದಿತ್ತು. ಇಂದು ನಾವು ಪ್ರಕೃತಿಯಿಂದ ದೂರವಾಗಿ ಬದುಕುತ್ತಿದ್ದೇವೆ. ಆದರೆ ಇತಿಹಾಸದ ಬಹುಪಾಲು ಅವಧಿಯಲ್ಲಿ ಮನುಷ್ಯನ ದೈನಂದಿನ ಹೆಜ್ಜೆಗಳು ವನ್ಯಜೀವಿಗಳೊಂದಿಗೆ ನಿಕಟವಾಗಿ ಹೆಣೆದುಕೊಂಡಿದ್ದವು ಎಂಬುದನ್ನು ಈ ಸೂಪರ್ ಹೈವೇ ನಮಗೆ ನೆನಪಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+