Bengaluru Property Boom: ಬಿಡದಿ ಟೌನ್‌ಶಿಪ್ ನಿರ್ಮಾಣ: ಬೆಂಗಳೂರಿನ ಸಮೀಪದ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ
Bengaluru Property Boom:ಕರ್ನಾಟಕ ಸರ್ಕಾರವು ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಟೌನ್‌ಶಿಪ್ ನಿರ್ಮಾಣದಿಂದಾಗಿ ಬೆಂಗಳೂರು ಹಾಗೂ ಬಿಡದಿ ಭಾಗದ ಆಸ್ತಿಗಳಿಗೆ ಬಂಪರ್ ಬೆಲೆ ಬರುವ ನಿರೀಕ್ಷೆ ಇದೆ. ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಅಂದಾಜು 18,133 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಟೌನ್‌ಶಿಪ್ ಅನ್ನು 7,481 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಟೌನ್‌ಶಿಪ್‌ನಲ್ಲಿ ಮನೆಗಳು, ಕಚೇರಿಗಳು, ಕಾರ್ಖಾನೆಗಳು ಮತ್ತು ಮನರಂಜನೆಯ ಪ್ರದೇಶಗಳು ಸೇರಿದಂತೆ ಎಲ್ಲವೂ ಇರುತ್ತದೆ. ಹೊಸ ಪಟ್ಟಣ ನಿರ್ಮಾಣವು ನೈಋತ್ಯ ಬೆಂಗಳೂರಿನ ಆಸ್ತಿದಾರರಿಗೆ ಬಂಪರ್ ಗುಡ್‌ನ್ಯೂಸ್ ತಂದಿದೆ. ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯು ಮನೆಗಳು, ಅಂಗಡಿಗಳು, ಶಾಲೆ ಹಾಗೂ ಆಸ್ಪತ್ರೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
Bengaluru Property Boom: ಬೆಂಗಳೂರು ಸಮೀಪದ ಪ್ರದೇಶಗಳಿಗೆ ಬಂಪರ್
ಇನ್ನು ಈ ಯೋಜನೆಯ ಅಭಿವೃದ್ಧಿಯಿಂದಾಗಿ ಬೆಂಗಳೂರು ಹಾಗೂ ಬೆಂಗಳೂರು ಸಮೀಪದ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಬಿಡದಿ, ರಾಮನಗರ ಮತ್ತು ಕೆಂಗೇರಿ ಭಾಗದಲ್ಲಿ ಭೂಮಿ ಹಾಗೂ ಪ್ರಾಪರ್ಟಿ ಬೆಲೆ ಹೆಚ್ಚಾಗುತ್ತಿದೆ. ಮೈಸೂರು ರಸ್ತೆ, ನೈಸ್ ರಸ್ತೆ ಮತ್ತು ಯೋಜಿತ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯಿಂದ ಉತ್ತಮವಾಗಿ ಸಂಪರ್ಕ ಹೊಂದಿರುವುದರಿಂದ ಬಿಡದಿ ಮತ್ತು ರಾಮನಗರ ಬೆಂಗಳೂರು ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಪ್ರಮುಖ ಪ್ರದೇಶಗಳಾಗಿ ಬದಲಾಗುತ್ತಿವೆ. ಈ ಪ್ರದೇಶದ ಮತ್ತೊಂದು ಲಾಭವೆಂದರೆ ಬಿಡದಿಗೆ ಪ್ರಸ್ತಾವಿತ ಮೆಟ್ರೋ ವಿಸ್ತರಣೆ ಯೋಜನೆಯಿಂದಲೂ ಲಾಭವಾಗುತ್ತಿದೆ. ಈ ಭಾಗದಲ್ಲಿ ಈಗಾಗಲೇ ಟೊಯೋಟಾ ಕಿರ್ಲೋಸ್ಕರ್‌ನಂತಹ ದೊಡ್ಡ ಕಾರ್ಖಾನೆಗಳನ್ನು ಇವೆ.

ಬಿಡದಿ ಮತ್ತು ರಾಮನಗರ ಪ್ರದೇಶಗಳು ವೈಟ್‌ಫೀಲ್ಡ್ ಅಥವಾ ಉತ್ತರ ಬೆಂಗಳೂರಿನಲ್ಲಿನ ಪ್ರಾಪರ್ಟಿ ಹಾಗೂ ಆಸ್ತಿಗಳಿಗಿಂತ ಅಗ್ಗವಾಗಿದೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ 3,000 ರೂಪಾಯಿಯಿಂದ 6,000 ರೂಪಾಯಿ ಬೆಲೆ ಇದೆ. ಪಟ್ಟಣ ಯೋಜನೆಯಿಂದ ಹೆಜ್ಜಾಲ ಮತ್ತು ಬಿಡದಿ ಬಳಿಯ ಪ್ರದೇಶಗಳಲ್ಲಿ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಇದೆ.
ಭವಿಷ್ಯದಲ್ಲಿ ಮೆಟ್ರೋ ವಿಸ್ತರಣೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಅಭಿವೃದ್ಧಿ ಇತ್ಯಾದಿಗಳಿಂದಾಗಿ ಭೂಮಿಯ ಬೆಲೆಗಳು ಏರಿಕೆಯಾಗುವ ಮುನ್ಸೂಚನೆ ಇದೆ. ಭೂಮಿ ಮತ್ತು ಮನೆಗಳನ್ನು ಮಾರಾಟ ಮಾಡುವ ಜನರು ಈಗ ಅಲ್ಲಿ ಖರೀದಿಸುವುದು ಸೂಕ್ತ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳ
ಇನ್ನು ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಪರ್ಟಿ ಬೆಲೆಯು ದೇಶದಲ್ಲಿಯೇ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಮೆಟ್ರೋ ಯೋಜನೆ ಅಭಿವೃದ್ಧಿ ಹಾಗೂ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಬಿಡಿದಿ ಟೌನ್‌ಶಿಪ್ ಯೋಜನೆಯೂ ಸಹ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಕಾರಣವಾಗಿದೆ.












Click it and Unblock the Notifications