ಹರಪ್ಪ ನಾಗರಿಕತೆಗೂ ಮುಂಚೆಯೇ ಮನುಷ್ಯರಿಂದ ಕೃತಕ ದ್ವೀಪ, ಸ್ಕಾಟ್ಲೆಂಡ್‌ನಲ್ಲಿ 5,000 ವರ್ಷ ಹಳೆಯ ರಹಸ್ಯ ಪತ್ತೆ
Harappan: ವಿಶ್ವದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಎಲ್ಲರೂ ಹುಬ್ಬೇರಿಸುವಂತೆ ಆಗಿದೆ. ಸ್ಕಾಟ್ಲೆಂಡ್‌ನ ಸರೋವರವೊಂದರಲ್ಲಿ ಪುರಾತತ್ವ ತಜ್ಞರು ಸುಮಾರು 5,000 ವರ್ಷ ಹಳೆಯದಾದ ಹಾಗೂ ಹರಪ್ಪ ನಾಗರಿಕತೆಗಿಂತಲೂ ಹಳೆಯದಾದ ಕೃತಕ ದ್ವೀಪವನ್ನು ಪತ್ತೆ ಮಾಡಿದ್ದಾರೆ. ಸ್ಕಾಟ್ಲೆಂಡ್‌ನ ಸರೋವರವೊಂದರಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಮಾನವರು ದ್ವೀಪವೊಂದನ್ನು ನಿರ್ಮಿಸಿದ್ದಾರೆ. ಮರದ ಅಡಿಪಾಯದಲ್ಲಿ ಈ ನಗರ ಅಭಿವೃದ್ಧಿ ಹೊಂದಿದೆ. ಈ ಆವಿಷ್ಕಾರದಿಂದ ಪುರಾತನ ಕಾಲದಲ್ಲಿಯೇ ಜನರು ಅತ್ಯುತ್ತಮ ನಗರ ಅಭಿವೃದ್ಧಿ ಕೌಶಲ್ಯ ಹೊಂದಿದ್ದರು ಎನ್ನುವುದು ತಿಳಿದು ಬಂದಿದೆ. ಇಲ್ಲಿನ ಐಲ್ ಆಫ್ ಲೆವಿಸ್‌ನ ಲೋಚ್ ಭೋರ್ಗಾಸ್ಟೈಲ್ ಪ್ರದೇಶದಲ್ಲಿ ಈ ದ್ವೀಪ ಪತ್ತೆಯಾಗಿದೆ. ವಿಜ್ಞಾನಿಗಳು ಮೊದಲಿಗೆ ಇದನ್ನು ಸಾಮಾನ್ಯ ಕಲ್ಲಿನ ಗುಡ್ಡ ಎಂದು ಭಾವಿಸಿದ್ದರು. ಆದರೆ ಅಧ್ಯಯನ ಮಾಡಿದಾಗ ಕಲ್ಲುಗಳ ಕೆಳಗೆ ಸುಮಾರು 75 ಅಡಿ ಅಗಲದ ದೊಡ್ಡ ವೃತ್ತಾಕಾರದ ಮರದ ವೇದಿಕೆ ಇರುವುದನ್ನು ಕಂಡುಹಿಡಿದಿದ್ದಾರೆ.
ಆ ಕಾಲದಲ್ಲಿಯೇ ಮನುಷ್ಯರು ಮರದ ತುಂಡುಗಳು ಮತ್ತು ಕೊಂಬೆಗಳನ್ನು ಬಳಸಿ ಬಲವಾದ ಅಡಿಪಾಯ ನಿರ್ಮಿಸಿದ್ದರು. ವಿಜ್ಞಾನಿಗಳ ಪ್ರಕಾರ, ಈ ದ್ವೀಪವನ್ನು ನವಶಿಲಾಯುಗದಲ್ಲಿ ಸುಮಾರು 5,000 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಬಳಿಕ ಸಾವಿರಾರು ವರ್ಷಗಳ ನಂತರ ಜನರು ಇನ್ನಷ್ಟು ಕಲ್ಲುಗಳನ್ನು ಸೇರಿಸಿ ದ್ವೀಪವನ್ನು ಮತ್ತಷ್ಟು ಬಲಪಡಿಸಿದ್ದರು. ಈ ರೀತಿಯ ಕೃತಕ ದ್ವೀಪಗಳನ್ನು "ಕ್ರ್ಯಾನೋಗ್" ಎಂದು ಕರೆಯಲಾಗುತ್ತದೆ. ಸ್ಕಾಟ್ಲೆಂಡ್‌ನಲ್ಲಿ ಇಂತಹ ನೂರಾರು ದ್ವೀಪಗಳಿವೆ. ಆದರೆ ಈ ಹೊಸ ಪತ್ತೆಯಿಂದ ಆವಿಷ್ಕಾರದಿಂದ ಈ ಪ್ರದೇಶದ ಕೃತಕ ದ್ವೀಪವು ಕ್ರಿ.ಪೂ. 3800 ರಿಂದ 3300ರ ಅವಧಿಯಲ್ಲೇ ನಿರ್ಮಾಣವಾಗಿದ್ದವು ಎಂಬುದು ದೃಢಪಟ್ಟಿದೆ.

ಈ ದ್ವೀಪದ ಬಳಿ ಪುರಾತನ ಮಡಿಕೆಗಳ ತುಂಡುಗಳು ಸಹ ಸಿಕ್ಕಿವೆ. ಇದರಿಂದ ಇಲ್ಲಿ ಜನರು ಒಂದು ಪ್ರದೇಶದಲ್ಲಿ ಸೇರುತ್ತಿದ್ದರು, ಊಟ ಅಥವಾ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು ಎನ್ನುವ ಬಗ್ಗೆಯೂ ಸಂಶೋಧನೆ ಮುಂದುವರಿದಿದೆ.
ವಿಜ್ಞಾನಿಗಳು ನೀರಿನೊಳಗಿನ ಭಾಗಗಳನ್ನು ಅಧ್ಯಯನ ಮಾಡಲು ವಿಶೇಷ ಕ್ಯಾಮೆರಾ ಮತ್ತು 3D ತಂತ್ರಜ್ಞಾನವನ್ನು ಬಳಸಿದರು. ರೇಡಿಯೊಕಾರ್ಬನ್ ಪರೀಕ್ಷೆಯಿಂದ ಮರಗಳ ವಯಸ್ಸು ದೃಢಪಟ್ಟಿದೆ. ಈ ಆವಿಷ್ಕಾರವು ಪ್ರಾಚೀನ ಜನರ ಎಂಜಿನಿಯರಿಂಗ್ ಕೌಶಲ್ಯ ಮತ್ತು ಸೃಜನಶೀಲತೆಯನ್ನು ತೋರಿಸುವ ಮಹತ್ವದ ಭಾಗವಾಗಿತ್ತು ಎಂದು ಹೇಳಲಾಗಿದೆ.












Click it and Unblock the Notifications