ಕಾರವಾರ; ಪ್ರೇಯಸಿಯನ್ನೇ ಅಪಹರಿಸಿದ ಪ್ರಿಯಕರ!
ಕಾರವಾರ, ಜೂನ್ 1: ತಮ್ಮ ಪ್ರೀತಿಗೆ ಕುಟುಂಬ ಸದಸ್ಯರು ಒಪ್ಪಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ತಾನು ಪ್ರೀತಿಸಿದ ಯುವತಿಯನ್ನು ಮನೆಯವರ ಕಣ್ಣುತಪ್ಪಿಸಿ ಯುವಕನ ಜೊತೆ ಓಡಿ ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕೊಡ್ನಣಿ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ್ದು, ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಹುಲೇಕಲ್ ಗ್ರಾಮದ ಯುವತಿ ಮತ್ತು ಕುಮಟಾ ತಾಲೂಕಿನ ಕೋಡ್ಕಣಿ ಗ್ರಾಮದ ಸುಬ್ರಹ್ಮಣ್ಯ ಭಂಡಾರಿ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ವಿಷಯ ಮನೆಯವರಿಗೆ ಗೊತ್ತಾಗಿದ್ದು, ಇಬ್ಬರನ್ನೂ ಬೇರ್ಪಡಿಸಿದ್ದರು. ಇದರಿಂದ ಕೆರಳಿದ ಯುವಕ ತನ್ನ ಪ್ರೇಯಸಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎನ್ನುವುದು ಪೋಷಕರ ಆರೋಪವಾಗಿದೆ.

ಸಂಬಂಧಿಕರ ಮನೆಗೆ ತೆರಳಿದಾಗ ಎಸ್ಕೇಪ್: ಕಳೆದ ಮೇ 31ರಂದು ಯುವತಿ ತನ್ನ ಸಂಬಂಧಿಕರ ಮನೆಗೆ ತೆರಳಿದ್ದರು. ಇದೇ ಸಮಯವನ್ನು ಕಾಯುತ್ತಿದ್ದ ಯುವಕ ಮನೆಯಲ್ಲಿದ್ದ ವೃದ್ಧನ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಸೆರೆಗೆ ಬಲೆ ಬೀಸಿದ ಪೊಲೀಸರು: ಯುವತಿ ಪೋಷಕರು ನೀಡಿರುವ ಅಪಹರಣದ ಕೇಸ್ ದಾಖಲಿಸಿಕೊಂಡಿರುವ ಕುಮಟಾ ಠಾಣೆ ಪೊಲೀಸರು ಆರೋಪಿ ಸುಬ್ರಹ್ಮಣ್ಯ ಭಂಡಾರಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನೊಂದು ಕಡೆ ಕಿಡ್ನಾಪ್ ಆಗಿರುವ ಯುವತಿಯ ಪತ್ತೆಗೂ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.












Click it and Unblock the Notifications