ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಕೈಗೊಳ್ಳುವವರಿಗೆ ಸಿಹಿ ಸುದ್ದಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮೇ.19 : ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಸಿಹಿ ಸುದ್ದಿಯೊಂದನ್ನು ಜಿಲ್ಲಾಡಳಿತ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಮಾಡುವ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಸ್ನೇಹಿ 'ಮೆಟ್ರೋ ಬೈಕ್' ಸೇವೆಯನ್ನು ಜಿಲ್ಲಾಡಳಿತ ಪರಿಚಯಿಸಲು ಮುಂದಾಗಿದೆ.

ಈಗಾಗಲೇ ಬೆಂಗಳೂರಿನ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಚಾಲ್ತಿಯಲ್ಲಿರುವ ಮೆಟ್ರೊ ಬೈಕ್ ಸೇವೆ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಮೂಲಕ ಪ್ರವಾಸೋದ್ಯಮಕ್ಕೆ ಪರಿಚಯಿಸಲಾಗುತ್ತಿದೆ. ಅಂದ ಹಾಗೆ ಇದು ಬೀಗದ ಕೈ ಇಲ್ಲದ ಸಂಪೂರ್ಣವಾಗಿ ಮೊಬೈಲ್ ಆಪ್ ಮೂಲಕ ವ್ಯವಹರಿಸುವ ವ್ಯವಸ್ಥೆಯಾಗಿದೆ.

ಮೊದಲ ಮತ್ತು ಪ್ರಾಯೋಗಿಕ ಹಂತದಲ್ಲಿ ಜಿಲ್ಲೆಗೆ 70 ಮೆಟ್ರೊಬೈಕ್ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಕಾರವಾರ ಮತ್ತು ಗೋಕರ್ಣದಲ್ಲಿ ವಿವಿಧೆಡೆ ಮೆಟ್ರೊ ಬೈಕ್ ಲಭ್ಯತಾಣಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ಎರಡು ತಿಂಗಳುಗಳ ಒಳಗಾಗಿ ಈ ಬೈಕ್ ಸೇವೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೆಟ್ರೋ ಬೈಕ್ ಪ್ರದರ್ಶಿಸಿ ತಿಳಿಸಿದರು.

District administration has issued a sweet news for tourists

ಮೆಟ್ರೊಬೈಕ್ ಸಂಸ್ಥೆ ಪ್ರವಾಸೋದ್ಯಮಕ್ಕೆ ಇದೇ ಮೊದಲ ಬಾರಿಗೆ ಬೈಕ್ ಸೇವೆ ಆರಂಭಿಸಲು ಮುಂದೆ ಬಂದಿದ್ದು, ಅವರಿಗೆ ಅನುಮತಿ ನೀಡುವ ಹಾಗೂ ಯೋಜನೆಗೆ ಸಂಪೂರ್ಣ ಸಹಕಾರವನ್ನು ಜಿಲ್ಲಾ ಪ್ರವಾಸೋದ್ಯಮ ಸಮಿತಿ ಮಾಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಮೆಟ್ರೊಬೈಕ್ ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದ ಸಂಸ್ಥೆಯ ವ್ಯವಹಾರಗಳ ಮುಖ್ಯಸ್ಥ ಶಮಂತ ಅವರು, ಈ ಬೈಕ್ ಸಂಪೂರ್ಣ ಮೊಬೈಲ್ ಆಪ್ ಮೂಲಕವೇ ಕಾರ್ಯನಿರ್ವಹಿಸಲಿದೆ. ಪ್ರವಾಸಿಗರು ತಮ್ಮ ಮೊಬೈಲ್ ಆಪ್ ನಲ್ಲಿ ಬೈಕ್ ಸೇವೆ ಪಡೆಯಬಹುದು.

District administration has issued a sweet news for tourists

ಅದಕ್ಕಾಗಿ ಈ ಮೊದಲೆ ಆಪ್ ಡೌನ್‍ ಲೋಡ್ ಮಾಡುವಾಗ ಆಧಾರ್ ನೋಂದಣಿ ಸಂಖ್ಯೆ, ಫೋಟೋ ಐಡಿ, ಲೈಸೆನ್ಸ್ ಹಾಗೂ ಆನ್ ಲೈನ್ ನಲ್ಲಿ ಹಣತುಂಬಲು ವ್ಯಾಲೆಟ್ ದಾಖಲಾಗಿರುತ್ತದೆ. ಬೈಕ್ ಸೇವೆ ಪಡೆದವರಿಗೆ ಕೊನೆಗೊಂಡಾಗ ಅವರ ಬ್ಯಾಂಕ್‍ ಖಾತೆಯಿಂದ ಸಂಬಂಧಿಸಿದ ಮೊತ್ತ ಕಟಾಯಿಸಲಾಗುತ್ತದೆ.

ಅದರ ರಸೀದಿ ನೋಂದಾಯಿತ ಮೊಬೈಲ್ ಗೆ ಎಸ್‍ಎಂಎಸ್ ಮೂಲಕ ರವಾನೆಯಾಗಲಿದೆ. ಅಂದ ಹಾಗೆ ಈ ಬೈಕ್ ಗೆ ಬೀಗದ ಕೈ ಇರುವುದಿಲ್ಲ. ಬೈಕ್ ಸೇವೆ ಬೇಕಾದಾಗ ಆಪ್‍ ನಲ್ಲಿ ನೋಂದಾಯಿಸಿದರೆ ಒಂದು ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಬರಲಿದ್ದು, ಅದನ್ನು ಬೈಕ್ ನಲ್ಲಿರುವ ಕೀಪ್ಯಾಡ್ ನಲ್ಲಿ ಒತ್ತುವ ಮೂಲಕ ಹ್ಯಾಂಡಲ್ ಲಾಕ್ ಓಪನ್ ಹಾಗೂ ಎಂಜಿನ್ ಆನ್ ಆಗಲಿದೆ.

District administration has issued a sweet news for tourists

ಯಾವ ರೀತಿ ಬಳಸಬೇಕೆಂಬ ಬಗ್ಗೆಯೂ ಬೈಕ್ ನಲ್ಲಿ ಫಲಕ ಅಳವಡಿಸಲಾಗಿದೆ. ಈ ಬೈಕ್ ಗೆ ಸಂಸ್ಥೆಯಿಂದಲೇ ಇಂಧನ ತುಂಬಲಾಗಿರುತ್ತದೆ. ಪ್ರತಿ ಕಿಲೋಮೀಟರ್ ಗೆ 5ರೂ. ಹಾಗೂ ಪ್ರತಿ ನಿಮಿಷಕ್ಕೆ 25 ಪೈಸೆ ದರ ನಿಗದಿಗೊಳಿಸಲಾಗುತ್ತದೆ. ಅಗತ್ಯವಿದ್ದವರು ಗಂಟೆ ಮತ್ತು ದಿನದ ಬಾಡಿಗೆಗೂ ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ಶಮಂತ ವಿವರಿಸಿದರು.

English summary
District administration has issued a sweet news for tourists coming to Uttara Kannada District. Tourism-friendly 'Metro Bike' service is being introduced by the district administration for the benefit of tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X