ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾರದೊಳಗೆ 53 ಕೋಟಿ ಬಿಡುಗಡೆ, ಮಾತು ಉಳಿಸಿಕೊಂಡ ರಕ್ಷಣಾ ಸಚಿವೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಮಾರ್ಚ್ 5: ಇಲ್ಲಿನ ಸೀಬರ್ಡ್ ನಿರಾಶ್ರಿತರಿಗೆ ನೀಡಬೇಕಿದ್ದ ಪರಿಹಾರದ ಬಾಕಿ ಹಣವನ್ನು ಮೂರು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಫೆಬ್ರವರಿ 24ರಂದು ಕಾರವಾರಕ್ಕೆ ಬಂದಾಗ ಭರವಸೆ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೊಟ್ಟ ಮಾತಿನಂತೆ ವಾರದ ಒಳಗೆ 52.81 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿಸಿದ್ದಾರೆ.

ಸೀಬರ್ಡ್ ನಿರಾಶ್ರಿತರಿಗೆ ನೀಡಲು ಬಾಕಿ ಇದ್ದ 53.11 ಕೋಟಿ ರುಪಾಯಿ ಪರಿಹಾರದಲ್ಲಿ ಫೆಬ್ರವರಿ 26ರಂದು 23.76 ಕೋಟಿ ರುಪಾಯಿ ಹಾಗೂ ಮಾರ್ಚ್ 2ರಂದು 29.4 ಕೋಟಿ ಬಿಡುಗಡೆಯಾಗಿದೆ. ಒಟ್ಟು 52.81 ಕೋಟಿ ರುಪಾಯಿ ಪರಿಹಾರದ ಹಣ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿಗೆ ತಲುಪಿದೆ.

ಸೀಬರ್ಡ್ ನಿರಾಶ್ರಿತರ 32 ವರ್ಷಗಳ ನೋವಿಗೆ ನಾಳೆ ಮುಲಾಮುಸೀಬರ್ಡ್ ನಿರಾಶ್ರಿತರ 32 ವರ್ಷಗಳ ನೋವಿಗೆ ನಾಳೆ ಮುಲಾಮು

Defence minister Nirmala Sitaraman fulfilled promise, 53 crore released

ಸೀಬರ್ಡ್ ನಿರಾಶ್ರಿತರ ಬೇಡಿಕೆಯಂತೆ ಹೆಚ್ಚುವರಿಯಾಗಿ ನೀಡಬೇಕಿದ್ದ 587 ಕೋಟಿ ರುಪಾಯಿಯಲ್ಲಿ 534 ಕೋಟಿ ರುಪಾಯಿ ಹಂತಹಂತವಾಗಿ ಬಿಡುಗಡೆ ಮಾಡಿದ್ದರು. ಅಲ್ಲದೆ ಫೆಬ್ರವರಿ 24ರಂದು ನಿರಾಶ್ರಿತರಿಗೆ ಪರಿಹಾರದ ಚೆಕ್ ವಿತರಣೆ ಮಾಡಲು ಬಂದಾಗ ಬಾಕಿ 53.11 ಕೋಟಿ ರುಪಾಯಿ ತ್ವರಿತವಾಗಿ ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಇದೀಗ 52.81 ಕೋಟಿ ಬಿಡುಗಡೆ ಆಗಿದೆ.

English summary
Defence minister Nirmala Sitaraman promised to release compensation of 53 crore, while she visited Karwar Seabird. Within a week amount released and fulfilled the promise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X