ಅಂಕೋಲ; ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ

ಕಾರವಾರ, ಆಗಸ್ಟ್‌ 06: ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ಮಳೆ ಹೆಚ್ಚಾಗಿ ಪ್ರವಾಹ ಉಂಟಾಗಿ ಸುರಕ್ಷಿತ ಸ್ಥಳಕ್ಕೆಂದು ಬರುತ್ತಿದ್ದ ವೇಳೆ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. ಇಂದು ಬೆಳಿಗ್ಗೆ ಗುಳ್ಳಾಪುರ ಸೇತುವೆಯ ಬಳಿ ಮೃತದೇಹ ಪತ್ತೆಯಾಗಿದೆ.

Recommended Video

      Kabiniಯಲ್ಲಿ ಬಹಳ ಮಳೆ , ಪ್ರವಾಹದ ಭೀತಿಯಲ್ಲಿ Nanjangudu

      ಬುಧವಾರ ಸುರಿದ ಧಾರಾಕಾರ ಮಳೆಯಿಂದಾಗಿ ಗಂಗಾವಳಿಯ ನದಿಯ ಹರಿವಿನ ಪ್ರಮಾಣ ಹೆಚ್ಚಾಗಿತ್ತು. ಇದನ್ನು ತಿಳಿದು ಸುರಕ್ಷಿತ ಸ್ಥಳಕ್ಕೆ ಬೈಕ್ ನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಈ ಪೈಕಿ ಓರ್ವನನ್ನು ನಿನ್ನೆಯೇ ರಕ್ಷಣೆ ಮಾಡಲಾಗಿತ್ತು.

      Dead Body Of A Person Drowned In Flood Found Today In Ankola Of Uttara Kannada

      ಆದರೆ, ಇನ್ನೊಬ್ಬರು ಪ್ರವಾಹಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈತನನ್ನು ಹೊನ್ನಾವರದ ಸಂತೋಷ ನಾಯ್ಕ ಎಂದು ಗುರುತಿಸಲಾಗಿತ್ತು. ತಾಲೂಕಾಡಳಿತ, ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಜಂಟಿಯಾಗಿ ಈತನಿಗಾಗಿ ಹುಡುಕಾಟ ನಡೆಸಿದ್ದರು. ಇದೀಗ ಬೆಳಿಗ್ಗೆ ಮೃತದೇಹ ಹಾಗೂ ಬೈಕ್ ಪತ್ತೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+