ಕಾಸರಕೋಡಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ, ಓರ್ವ ಕಣ್ಮರೆ
ಕಾರವಾರ, ಆಗಸ್ಟ್ 17: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಯಾಗಿ, ಓರ್ವ ಮೀನುಗಾರ ಸಮುದ್ರ ಪಾಲಾದ ಘಟನೆ ಹೊನ್ನಾವರದ ಬಳಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಬಳಿ ಘಟನೆ ನಡೆದಿದ್ದು, ಇಂದು ಐದು ಮಂದಿ ತಂಡ ಎರಡು ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿತ್ತು.
ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿ ಪಲ್ಟಿಯಾಗಿದ್ದು, ದೋಣಿಯಲ್ಲಿದ್ದವರು ಪಾರಾಗಿ, ತನ್ವೀರ್ (22) ಎಂಬ ಮೀನುಗಾರ ಕಣ್ಮರೆಯಾಗಿದ್ದಾನೆ.

ನಾಪತ್ತೆಯಾದ ಮೀನುಗಾರನಿಗಾಗಿ ಹುಡುಕಾಟ ಮುಂದುವರೆದಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.












Click it and Unblock the Notifications