ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ ಮತಗಟ್ಟೆ ಬಳಿಯೇ ಜೆಡಿಎಸ್ ಕಾರ್ಯಕರ್ತನಿಗೆ ಅವಾಜ್ ಹಾಕಿದ ಶಾಸಕಿ ರೂಪಾಲಿ ನಾಯ್ಕ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಏಪ್ರಿಲ್ 23:ಸರ್ವೋದಯ ನಗರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ.

ನಗರದ ದಿವೇಕರ್ ಕಾಲೇಜು ಎದುರಿನ ಮತಗಟ್ಟೆಯ ಬಳಿ ಈ ಘಟನೆ ನಡೆದಿದೆ. ಜೆಡಿಎಸ್ ನ ಕಾರ್ಯಕರ್ತ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಇದೇ ವೇಳೆ ಸ್ಥಳಕ್ಕಾಗಮಿಸಿದ ಶಾಸಕಿ ರೂಪಾಲಿ ನಾಯ್ಕ ಜೆಡಿಎಸ್ ಕಾರ್ಯಕರ್ತನಿಗೆ ಅವಾಜ್ ಹಾಕಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ಆನಂದ ಅಸ್ನೋಟಿಕರ್ ರೌಡಿಸಂ ಮಾಡಿಸುತ್ತಿದ್ದಾರೆ. 10 ಲಕ್ಷ ತಿಂದಿದ್ದೀರಾ, ನಿನ್ನ ತಂದೆ ಒಂದ್ ಪಕ್ಷ, ತಾಯಿ ಒಂದ್ ಪಕ್ಷ. ನಂಗೆ ಹೇಳುತ್ತೀಯಾ? ಆನಂದ ಅಸ್ನೋಟಿಕರ್ ಈಗಲೇ ಕತ್ತಿ ಕೊಟ್ಟಿದ್ದಾನಾ? ಮರ್ಯಾದೆ ಕಾಣೋದಿಲ್ಲಾ. ಆ ಪಕ್ಷ, ಈ ಪಕ್ಷ ಅಂತ ದುಡ್ಡು ತಿನ್ನೋರು ನೀವು. ಪಕ್ಷದಲ್ಲಿ ನಿಯತ್ ಇಲ್ವಾ. ಊರು ಹಾಳು ಮಾಡೋಕೆ ಬಂದಿದ್ದೀರಿ. ಒಂದು ವರ್ಷ ಗೂಂಡಾಗಿರಿ ಕಡಿಮೆಯಾಗಿತ್ತು. ಮತ್ತೆ ಸ್ಟಾರ್ಟ್ ಆಯ್ತಾ?" ಎಂದು ಶಾಸಕಿ ರೂಪಾಲಿ ನಾಯ್ಕ ಜೆಡಿಎಸ್ ಕಾರ್ಯಕರ್ತನೊಬ್ಬನಿಗೆ ಅವಾಜ್ ಹಾಕಿದ್ದಾರೆ.

ಬೈಂದೂರಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಿರುಸಿನ ಮತದಾನಬೈಂದೂರಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಿರುಸಿನ ಮತದಾನ

BJP MLA Rupali Naik shouted to JDS activist in Karwar

ಘಟನೆ ನಡೆದ ಸ್ಥಳದಲ್ಲಿದ್ದ ಪೊಲೀಸರು ಶಾಸಕಿಯ ಮಾತನ್ನು ಕೇಳಿ ನಿಬ್ಬೆರಗಾಗಿದ್ದು, ಶಾಸಕಿ ಅವಾಜ್ ಹಾಕಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

English summary
BJP and JDS activists have fought for a small cause. On this reason BJP MLA Rupali Naik shouted to JDS activist in Karwar.This video is now viral everywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X