• search
For karwar Updates
Allow Notification  

  ಸುನೀಲ್ ನಾಯ್ಕ ಗೆಲುವಿನ ಮೂಲಕ ಭಟ್ಕಳದಲ್ಲಿ ಖಾತೆ ತೆರೆದ ಬಿಜೆಪಿ

  By ದೇವರಾಜ ನಾಯ್ಕ
  |

  ಕಾರವಾರ ಮೇ 15 : ಭಟ್ಕಳ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ತನ್ನ ಖಾತೆ ತೆರೆದಿದೆ. 2004ರಲ್ಲಿ ಮೋಹನ್ ಪಿ.ಸಿ ಅವರು ಕಾಂಗ್ರೆಸ್‌ನ ಸತ್ಯನಾರಾಯಣ ಸ್ವಾಮಿ ಅವರ ವಿರುದ್ಧ ಗೆಲುವು ಸಾಧಿಸಿದ ಬಳಿಕ, 2008ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ ಕಾಂಗ್ರೆಸ್‌ನ ಕೈ ವಶವಾಗಿತ್ತು.

  ಬಳಿಕ 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕ ಮಂಕಾಳ ವೈದ್ಯ ಗೆದ್ದ ಬಳಿಕ ಈ ಬಾರಿ ಅಲ್ಲಿ ಕೇಸರಿಯ ರಂಗು ಮೂಡಿದೆ. ಅದು ಕೂಡ ಭರ್ಜರಿ ಮತಗಳ ಅಂತರದಲ್ಲಿ ಬಿಜೆಪಿಯ ಅಭ್ಯರ್ಥಿ ಸುನೀಲ್ ನಾಯ್ಕ ಗೆಲುವು ಸಾಧಿಸುವುದು ಬಿಜೆಪಿಗರಿಗೆ ಹೇಳಲಾರದ ಸಂತೋಷ ಉಂಟು ಮಾಡಿದೆ.

  ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಪಡೆದ ಆರ್.ವಿ.ದೇಶಪಾಂಡೆ

  ವಿಧಾನಸಭೆಗೆ ಸುನೀಲ್ ನಾಯ್ಕ ಈ ಬಾರಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದರು. ತಂದೆ ಬಿಳಿಯಾ ನಾಯ್ಕ ಪಂಚಾಯಿತಿ ಅಧ್ಯಕ್ಷರಾಗಿದ್ದವರು. ಅವರ ಬಳಿಕ ಸುನೀಲ್ ಬ್ಯಾಂಕ್‌ಗಳ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ರಾಜಕೀಯ ರಂಗ ಪ್ರವೇಶಿದ್ದರು.

  BJP candidate sunil nayak won in bhatkal constituency.

  ಕಳೆದ 2013ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಪ್ರತ್ಯೇಕವಾಗಿದ್ದ ಕಾರಣ ಕಾರ್ಯಕರ್ತರು ಗೊಂದಲದಲ್ಲಿದ್ದರು. ಆದರೆ, ಈ ಬಾರಿಯೂ ಆರಂಭದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹತ್ತಾರು ಸಂಖ್ಯೆಯಲ್ಲಿದ್ದ ಆಕಾಂಕ್ಷಿಗಳು ನಿಧಾನವಾಗಿ ತೆರೆಗೆ ಸರಿದಿದ್ದರು. ಅಂತಿಮವಾಗಿ ಸುನೀಲ ನಾಯ್ಕ ಅವರಿಗೆ ಟಿಕೆಟ್ ದೊರೆಯಿತು.

  ಅವರೇ ಹೇಳುವ ಪ್ರಕಾರ, 'ಕಳೆದ ಬಾರಿ ಗೊಂದಲದಲ್ಲಿದ್ದ ಕಾರ್ಯಕರ್ತರನ್ನೆಲ್ಲ ಒಗ್ಗೂಡಿಸಿ ಕ್ಷೇತ್ರದಲ್ಲಿ ಪಕ್ಷಕ್ಕೆ ಭದ್ರ ತಳಹದಿ ಹಾಕಲು ಶ್ರಮಿಸಿದ್ದೆ. ನನ್ನ ಪಕ್ಷನಿಷ್ಠೆ ಹಾಗೂ ಪರಿಶ್ರಮವನ್ನು ಗಮನಿಸಿದ್ದ ವರಿಷ್ಠರು ನನಗೆ ಟಿಕೆಟ್ ನೀಡಿದ್ದರು' ಎಂದಿದ್ದರು.

  ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

  ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ತಮ್ಮ 'ರಾಜಕೀಯ ಗುರು' ಎಂದು ಪರಿಗಣಿಸಿರುವ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಗುರುವೇ ಸಾಥ್ ನೀಡಿದ್ದರು. ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿ ಬಿಜೆಪಿಗೆ ಬಂದಿರುವುದರಿಂದ ಕೆಲವು ಬಿಜೆಪಿಗರು ಮೊದಲು ಇವರ ಪಕ್ಷದ ಸೇರ್ಪಡೆಗೆ ತಗಾದೆ ಎತ್ತಿದ್ದರು. ಆದರೆ, ಅವರ ರಾಜಕೀಯ ಚಾತುರ್ಯ ಹಾಗೂ ಯುವ ಜನರೊಂದಿಗೆ ಬೆರೆಯುವ ಗುಣ ಈ ಬಾರಿಯ ಚುನಾವಣೆಯಲ್ಲಿ ಅವರ ಕೈ ಹಿಡಿದಿದೆ.

  ಜತೆಗೆ, ಕಾಂಗ್ರೆಸ್‌ಗೆ ತಂಜೀಮ್ ಬೆಂಬಲ ವ್ಯಕ್ತಪಡಿಸಿದ್ದು ಸಹ ಸುನೀಲ್ ನಾಯ್ಕಗೆ ಪ್ಲಸ್ ಪಾಯಿಂಟ್ ಆಗಿತ್ತು. 2013ರಲ್ಲಿ ಪಕ್ಷೇತರರಾಗಿ ಸ್ಪರರ್ಧಿಸಿದ್ದ ಮಂಕಾಳ ಸುಬ್ಬ ವೈದ್ಯ 37,319 ಮತಗಳನ್ನು ಪಡೆದು, ಜೆಡಿಎಸ್ ಅಭ್ಯರ್ಥಿ ಇನಾಯತ್ ಉಲ್ಲಾ ಶಾಬಂದ್ರಿ ವಿರುದ್ಧ (27,435) 9,884 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

  ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ 83,172 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ (77,242) ಅವರಿಗಿತಂತ 5,930 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

  ಭಟ್ಕಳದಲ್ಲಿ 2,14,694 ಮಂದಿ ಮತದಾರರಿದ್ದಾರೆ. ಅದರಲ್ಲಿ 1,65,207 ಮತಗಳು ಈ ಬಾರಿ ಚಲಾವಣೆಯಾಗಿದ್ದವು. ಶೇ 76.95 ಮತಗಳು ಈ ಬಾರಿ ಚಲಾವಣೆಯಾಗಿತ್ತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಕಾರವಾರ ಸುದ್ದಿಗಳುView All

  English summary
  Karnataka Election Results 2018: Very first time in Bhatkal BJP has opened its account. BJP candidate sunil nayak won in bhatkal constituency. he got 82,738 votes.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more