ಭಟ್ಕಳದ ವಿನಾಯಕನಿಗೆ ಮಿಸ್ಟರ್ ಗ್ರ್ಯಾಂಡ್ ಸೌತ್ ಕರ್ನಾಟಕ ಕಿರೀಟ

By: ದೇವರಾಜ್ ನಾಯ್ಕ್
Subscribe to Oneindia Kannada

ಕಾರವಾರ, ನವೆಂಬರ್ 11: ಆರ್ಟ್ ಬೆಟಲ್ ಮಿಸ್ಟರ್ ಆ್ಯಂಡ್ ಮಿಸ್ ಗ್ರ್ಯಾಂಡ್‌ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಟ್ಕಳದ ಯುವಕ ವಿನಾಯಕ ಶೇಟ್ ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರಹೊಮ್ಮಿದ್ದಾರೆ.

ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಲ್ಲಿ ಆಯೋಜಿಸಿದ್ದ ಆರ್ಟ್ ಬೆಟಲ್ ಮಿಸ್ಟರ್ ಆ್ಯಂಡ್ ಮಿಸ್ ಗ್ರ್ಯಾಂಡ್‌ ಸೌತ್ ಇಂಡಿಯಾ ಅಡಿಶನ್ ನಲ್ಲಿ 300 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ವಿನಾಯಕ ಶೇಟ್ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದರು.

ಹಾವಿನಿಂದ ಹುಡುಗಿಯ ರಕ್ಷಿಸಿದ ವೈಶಾಖ್ ಮತ್ತಿತರರಿಗೆ ಶೌರ್ಯ ಪ್ರಶಸ್ತಿ

ಬಳಿಕ ಅಕ್ಟೋಬರ್‍ ನಲ್ಲಿ ಮಂಗಳೂರಿನ ರಿವರ್‍ಡೇಯಲ್ಲಿ ನಡೆದ ಮಿಸ್ಟರ್ ಆ್ಯಂಡ್ ಮಿಸ್ ಗ್ರ್ಯಾಂಡ್‌ ಸೌತ್ ಇಂಡಿಯಾ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರ ಹೊಮ್ಮುವ ಮೂಲಕ ಎಲ್ಲರ ಗಮನ ಸೆಳೆದಿದರು.

ಭಟ್ಕಳದ ಸೋನಾರಕೇರಿಯ ಮಾರುತಿ ಶೇಟ್ ಹಾಗೂ ಪ್ರೇಮಾ ಅವರ ಪುತ್ರನಾಗಿರುವ ವಿನಾಯಕ ಇಲ್ಲಿನ ದೈವಜ್ಞ ಬ್ರಾಹ್ಮಣ ಸಮಾಜದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಕರ್ನಾಟಕದಿಂದ ವಿನಾಯಕ ಆಯ್ಕೆ

ಕರ್ನಾಟಕದಿಂದ ವಿನಾಯಕ ಆಯ್ಕೆ

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ಗೋವಾಗಳಿಂದ ಸ್ಪರ್ಧಿಗಳು ಆಗಮಿಸಿದ್ದು, ಅವರೆಲ್ಲನ್ನು ಹಿಂದಿಕ್ಕಿದ ವಿನಾಯಕ, ಕರ್ನಾಟಕ ವಿಭಾಗದಿಂದ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಸ್ಪರ್ಧೆಯಲ್ಲಿ ಕರ್ನಾಟಕದಿಂದ ಒಟ್ಟೂ 5 ಜನರಲ್ಲಿ ಮೊದಲಿಗನಾದ ಈತನಿಗೆ ಟಾಲೆಂಟ್ ರೌಂಡ್‍ ನಲ್ಲಿ ಈತ ಬಿಡಿಸಿದ ಕರಾವಳಿಯ ಚಿತ್ರ ಎಲ್ಲರ ಗಮನ ಸೆಳೆದಿದ್ದಾರೆ.

 ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾದ ವಿನಾಯಕ ಶೇಟ್

ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾದ ವಿನಾಯಕ ಶೇಟ್

ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಲ್ಲಿ ಆಯೋಜಿಸಿದ್ದ ಆರ್ಟ್ ಬೆಟಲ್ ಮಿಸ್ಟರ್ ಆ್ಯಂಡ್ ಮಿಸ್ ಗ್ರ್ಯಾಂಡ್‌ ಸೌತ್ ಇಂಡಿಯಾ ಅಡಿಶನ್ ನಲ್ಲಿ 300 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ವಿನಾಯಕ ಶೇಟ್ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾನೆ.

ಡಾನ್ಸ್ ಮೂಲಕ ಗಮನ ಸೆಳೆದ ವಿನಾಯಕ

ಡಾನ್ಸ್ ಮೂಲಕ ಗಮನ ಸೆಳೆದ ವಿನಾಯಕ

ಹಾಡು, ಡಾನ್ಸ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜತೆಗೆ ಸ್ಪರ್ಧೆಯಲ್ಲಿ ಮುಖ್ಯವಾಗಿ ಟ್ರೇಡೀಶನಲ್ ರೌಂಡ್, ಪಾರ್ಟಿವೇರ್ ರೌಂಡ್, ಫ್ರೀವೇರ್ ಸೇರಿದಂತೆ ವಿವಿಧ ರೌಂಡ್ಸ್ ಗಳಲ್ಲಿ ಕೂಡಾ ವಿನಾಯಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿನಾಯಕನಿಗೆ ಹಾಡು, ನಾಟಕ, ಫೋಟೋಗ್ರಾಫಿಯಲ್ಲಿ ಆಸಕ್ತಿ

ವಿನಾಯಕನಿಗೆ ಹಾಡು, ನಾಟಕ, ಫೋಟೋಗ್ರಾಫಿಯಲ್ಲಿ ಆಸಕ್ತಿ

ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಮೊಡೆಲಿಂಗ್, ಡ್ಯಾನ್ಸ್, ಹಾಡು, ನಾಟಕ, ಫೋಟೋಗ್ರಾಫಿ ಹಾಗೂ ಕಿರುಚಿತ್ರ ತಯಾರಿಕೆಯಲ್ಲಿಯೂ ಅತ್ಯಂತ ಆಸಕ್ತಿ ಹೊಂದಿರುವ ವಿನಾಯಕ ಸಧ್ಯ ಖಾಸಗಿ ಕಂಪನಿಹೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ವಿನಾಯಕನ ಈ ಅಪರೂಪದ ಸಾಧನೆಗೆ ‘ಒನ್ ಇಂಡಿಯಾ ಕನ್ನಡ' ಕೂಡ ಶುಭ ಹಾರೈಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bhatkal's Vinayaka Sait bagged the title of mister South Karnataka 2017. Art Beatle Mr. and Miss Grand South India held in Mangaluru on October.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ