ಸಮುದ್ರದಲ್ಲಿ ಬಾರ್ಜ್ ನೋಡು, ಅದರ ಮೇಲೆ ರೈಲು ಎಂಜಿನ್ ನೋಡು..

By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ನವೆಂಬರ್ 7: ಹಳಿಯ ಮೇಲೆ  ರೈಲು ಚಲಿಸುವುದನ್ನು ಕೇಳಿದ್ದೀರಿ. ಆದರೆ ಅದೇ ರೈಲಿನ ಎಂಜಿನ್ ರಸ್ತೆಯ ಮೇಲೆ ಬಂದದ್ದನ್ನು ಯಾವಾಗಲಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಇಅರಲಿ, ಸಮುದ್ರ ಮಾರ್ಗದ ಮೂಲಕ ಬಾರ್ಜ್ ಮೇಲೇರಿ ಸಾಗಿದ್ದ ರೈಲು ಎಂಜಿನ್ ಎಲ್ಲಾದರೂ ನೋಡಿದ್ದೀರಾ?

ಕೈಕೊಟ್ಟ ಬಿಎಸ್‍ವೈ, ಸಚಿವ ಹೆಗಡೆ; ಪರಿಹಾರಕ್ಕಾಗಿ ಮೋದಿಗೆ ಮೊರೆ

ಹೌದು, ಈ ವಿಶೇಷ ನಡೆದಿರುವುದು ಕಾರವಾರದ ಬೈತಖೋಲ್ ಬಂದರಿನಲ್ಲಿ. ಗೋವಾದ ವಾಸ್ಕೋಗೆ ತೆರಳಲು ಬೆಂಗಳೂರಿನಿಂದ ಬಂದು ಗೋವಾ ಗಡಿಯಲ್ಲಿ ಅನುಮತಿ ಸಿಗದೆ ನಾಲ್ಕು ತಿಂಗಳಿನಿಂದ ಹೆದ್ದಾರಿ ಅಂಚಿಗೆ ನಿಂತಿದ್ದ ರೈಲ್ವೆ ಎಂಜಿನ್ ಮಂಗಳವಾರ ಬಾರ್ಜ್ ಏರಿ ಸಮುದ್ರ ಮಾರ್ಗದ ಮೂಲಕ ಮತ್ತೆ ವಾಸ್ಕೋಗೆ ತೆರಳಿದೆ.

Barge carries railway engine to Vasco from Karwar

ಜೂನ್ 15ರಂದು ಬೆಂಗಳೂರಿನ ಯಲಹಂಕದ ರೈಲ್ ವ್ಹೀಲ್ ಫ್ಯಾಕ್ಟರಿಯಿಂದ ವಾಸ್ಕೋ ರೈಲು ನಿಲ್ದಾಣಕ್ಕೆ 80 ಗಾಲಿಯ ಟ್ರಾಲಿಯ ಮೇಲೆ ಈ ಎಂಜಿನ್ ಸಾಗಿತ್ತು. ಜುಲೈ 1ರಂದು ನಗರ ಪ್ರವೇಶಿಸಿದ್ದ ಈ ಎಂಜಿನ್ ಜುಲೈ 3ಕ್ಕೆ ಕರ್ನಾಟಕ- ಗೋವಾ ಗಡಿ ಭಾಗದ ಮಾಜಾಳಿ ಚೆಕ್‌ ಪೋಸ್ಟ್ ತಲುಪಿತ್ತು.

ಮೊದಲೇ ಅನುಮತಿ ಪಡೆಯದ ಕಾರಣಕ್ಕಾಗಿ ಗೋವಾ ಗಡಿಯ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಇದು ಜುಲೈ 14ರವರೆಗೆ ನಿಂತಿತ್ತು. ಆದರೆ ಈ ಭಾರೀ ಗಾತ್ರದ ವಾಹನ ರಸ್ತೆಯ ಮೇಲೆ ಸಾಗುವುದರಿಂದ ರಾಜ್ಯದಲ್ಲಿನ ಕೆಲ ಸೇತುವೆಗಳು ಅಪಾಯಕ್ಕೆ ಸಿಲುಕಲಿದೆ ಎಂದು ಗೋವಾ ಸರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಇದರ ಸಾಗಾಟಕ್ಕೆ ಅನುಮತಿ ನೀಡಿರಲಿಲ್ಲ.

ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ 1.15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

ಜತೆಗೆ ಗಡಿಯಲ್ಲಿ ನಿಲ್ಲಲೂ ಅವಕಾಶ ನೀಡಿರಲಿಲ್ಲ. ಹೀಗಾಗಿ ಅಂದೇ ಅದು ಕಾರವಾರದ ಆರ್‌ಟಿಒ ಕಚೇರಿ ಎದುರು ಬಂದು ಬೀಡು ಬಿಟ್ಟಿತ್ತು. ನಗರದಲ್ಲಿ ಬೀಡು ಬಿಟ್ಟು ನಾಲ್ಕು ತಿಂಗಳು ಕಳೆದ ಬಳಿಕ ಇದೀಗ ಬಂದರು ಇಲಾಖೆಯೊಂದಿಗೆ ಮಾತುಕತೆ ನಡೆಸಿ ಬಾರ್ಜ್ ಮೂಲಕ ಸಾಗಿಸಲು ಮುಂಬೈ ಮೂಲದ ಬರ್ಕತ್ ಹೈರಿಂಗ್ ಕಂಪೆನಿಯ (ಬಿಎಚ್ ಸಿ) 700 ಮೆಟ್ರಿಕ್ ಟನ್ ಭಾರ ಎತ್ತುವ ಸಾಮರ್ಥ್ಯದ ಕ್ರೇನ್‌ ಅನ್ನು ಕಾರವಾರ ಬಂದರಿಗೆ ತರಲಾಗಿತ್ತು.

ಅದರ ಮೂಲಕ 138 ಮೆಟ್ರಿಕ್ ಟನ್ ಭಾರದ ಎಂಜಿನ್‌ ಅನ್ನು ಎತ್ತಿ, ಸುಮಾರು 1,550 ಮೆಟ್ರಿಕ್ ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದ ಬಾರ್ಜ್ ನಲ್ಲಿ ಇಟ್ಟು ವಾಸ್ಕೋಗೆ ಸಾಗಿಸಲಾಯಿತು.

"ಇದೇ ಪ್ರಥಮ ಬಾರಿಗೆ ಇಷ್ಟು ಭಾರವನ್ನು ಬಾರ್ಜ್ ಮೂಲಕ ಕಾರವಾರ ಬಂದರಿನಿಂದ ಸಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಜತೆಗೆ ಮುಂಬೈನಿಂದ ಇದೇ ಪ್ರಥಮ ಬಾರಿಗೆ ಕ್ರೇನ್‌ ಅನ್ನು ತರಿಸಿದ್ದೇವೆ" ಎನ್ನುತ್ತಾರೆ ಬಂದರು ಅಧಿಕಾರಿ ಕ್ಯಾ.ಅರುಣ್ ಗಾಂವ್ಕರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This is the first time Barge carries railway engine to Vasco from Karwar. First time we transporting railway engine through barge, said by officer captain Arun Gawnkar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ