ನಾವು ಬಂದಿರೋದೆ ರಾಜಕಾರಣ ಮಾಡೋಕೆ: ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ
Recommended Video

ಶಿರಸಿ, ಅಕ್ಟೋಬರ್.11: ನಾವು ಸಮಾಜ ಸೇವೆ ಮಾಡೋಕೆ ಕುರ್ಚಿಯ ಮೇಲೆ ಬಂದು ಕುಳಿತಿಲ್ಲ. ನಾವು ಬಂದಿರೋದೆ ರಾಜಕಾರಣ ಮಾಡೋಕೆ ಅಂತ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿದ್ದವರಿಗೆ ರಾಜಕಾರಣವೆನ್ನುವುದು ಸೇವೆಯಲ್ಲ. ಇದು ವೃತ್ತಿ. ಅದಕ್ಕೋಸ್ಕರನೇ ಎಂಎಲ್ಎ, ಎಂಪಿಗಳಾಗಿದ್ದು. ರಾಜಕಾರಣ ಬಿಟ್ಟು ಬೇರೇನೂ ಮಾಡಲಿಕ್ಕೆ ನಮಗೆ ಬರೋದಿಲ್ಲ. ರಾಜಕಾರಣಾನೇ ಮಾಡೋದು.
ನನ್ನ ಈ ಹೇಳಿಕೆಯನ್ನು ಮಾಧ್ಯಮದವರು ಹೇಗೆ ಬೇಕಾದರೂ ಬರೆಯಲಿ. ಅದು ಅವರವರ ಭಾವಕ್ಕೆ, ಅವರವರ ಭಕುತಿಗೆ ಅಂತಾನೂ ತಿಳಿಸಿದ್ದಾರೆ.

ಜನೌಷಧ ಕೇಂದ್ರ ಉದ್ಘಾಟನೆ:
ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭವಾಗಿರುವ ಜನೌಷಧ ಕೇಂದ್ರವನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಿದರು.
ಉದ್ಘಾಟನೆಯ ನಂತರ ಮಾತನಾಡಿದ ಅವರು "ಜಿಲ್ಲೆಯಾದ್ಯಂತ ಆರಂಭಿಸಿರುವ ಪ್ರಧಾನ ಮಂತ್ರಿ ಡಯಾಲಿಸಿಸ್ ಯೋಜನೆಯಿಂದಾಗಿ ಕಿಡ್ನಿ ವೈಫಲ್ಯ ಎದುರಿಸುತ್ತಿರುವ ರೋಗಿಗಳು ಮರು ಜೀವ ಪಡೆಯುವಂತಾಗಿದೆ.
ನಿಯಮದಂತೆ ವೈದ್ಯರು ರೋಗಿಗಳಿಗೆ ಔಷಧ ಬರೆದು ಕೊಡುವಾಗ ಕಂಪನಿಯ ಹೆಸರು ಬರೆದುಕೊಡುವಂತಿಲ್ಲ. ಆದರೆ, ವೈದ್ಯರು ಮತ್ತು ಕಂಪನಿಯ ನಡುವಿನ ಹೊಂದಾಣಿಕೆಯಿಂದ ವೈದ್ಯರು ಔಷಧದ ಹೆಸರಿನ ಜೊತೆಗೆ ಕಂಪನಿ ಹೆಸರು ಉಲ್ಲೇಖಿಸುತ್ತಾರೆ. ಕೆಲವರು ಔಷಧ ಖರೀದಿಸಿದ ಮೇಲೆ ತಂದು ತೋರಿಸುವಂತೆ ರೋಗಿಗಳಿಗೆ ತಿಳಿಸುತ್ತಾರೆ" ಎಂದು ಆರೋಪಿಸಿದರು.
ದೇಶಕ್ಕೆ ಹೊಂದಾಣಿಕೆಯಾಗುವ ಔಷಧ ಕಂಡುಹಿಡಿಯುವ ಪ್ರಯತ್ನ ನಡೆಯಲೇ ಇಲ್ಲ. ಇದರ ಹಿಂದೆ ದೊಡ್ಡ ಲಾಬಿ ಕೆಲಸ ಮಾಡುತ್ತಿದೆ ಎಂದು ಅನಂತಕುಮಾರ ಹೆಗಡೆ ತಿಳಿಸಿದರು.











Click it and Unblock the Notifications