ಆನಂದ್ ಅಸ್ನೋಟಿಕರ್ ಇನ್ನೂ ಜೆಡಿಎಸ್ ಸೇರ್ಪಡೆಗೊಂಡಿಲ್ಲ

Posted By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ಜನವರಿ 07: ಗಾಳಿ ಸುದ್ದಿಗಳಿಗೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬ್ರೇಕ್ ಹಾಕಿದ್ದಾರೆ. ಅವರಿನ್ನೂ ಜೆಡಿಎಸ್ ಸೇರಿಲ್ಲ ಎಂದು ಅಸ್ನೋಟಿಕರ್ ಆಪ್ತ ಸಲಹೆಗಾರರು ಸ್ಪಷ್ಟಪಡಿಸಿದ್ದಾರೆ.

'ಆನಂದ್ ಅವರು ಅಂಕೋಲಾದ ವಂದಗಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಿಮೆಂಟ್‌ವೊಂದರಲ್ಲಿ ಭಾಗವಹಿಸಿ, ಪಂಚಾಯ್ತಿ ಮಟ್ಟದಲ್ಲಿ ಜನರ ಸಭೆಯೊಂದನ್ನು ನಡೆಸುತ್ತಿದ್ದಾರೆ. ಅವರಿನ್ನು ಜೆಡಿಎಸ್‌ ಸೇರ್ಪಡೆಗೊಂಡಿಲ್ಲ' ಎಂದು ಆನಂದ್ ಅಸ್ನೋಟಿಕರ್ ಅವರ ಆಪ್ತ ಸಲಹೆಗಾರರು ಭಾನುವಾರ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಯಲ್ಲಿ ಮೂಲೆಗುಂಪಾದ ಅಸ್ನೋಟಿಕರ್ ಸವಾರಿ ಯಾವ ಪಕ್ಷದತ್ತ

'ಅವರಿನ್ನು ಜೆಡಿಎಸ್‌ ಸೇರ್ಪಡೆಗೊಂಡಿಲ್ಲ. ಇದೇ ಜನವರಿ 8 - 9ರಂದು ಜೆಡಿಎಸ್ ನ ಮಧು ಬಂಗಾರಪ್ಪನವರು ಕಾರವಾರಕ್ಕೆ ಬರಲಿದ್ದಾರೆ. ಆಗ ಅಸ್ನೋಟಿಕರ್ ಅವರು ಮಧು ಬಂಗಾರಪ್ಪ ಅವರನ್ನ ಭೇಟಿಯಾಗಬಹುದು. ಸಂಕ್ರಾತಿ ನಿಮಿತ್ತ 13ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ. ಅಲ್ಲಿ ಕುಟುಂಬದೊಂದಿಗೆ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ," ಎಂದು ಆಪ್ತ ಸಲಹೆಗಾರರು ಮಾಹಿತಿ ನೀಡಿದ್ದಾರೆ.

Anand Asnotikar has not yet joined JDS

"ಅವರು (ಅಸ್ನೋಟಿಕರ್) ಯಾವುದೇ ಪಕ್ಷ ಸೇರ್ಪಡೆಗೊಳ್ಳುವುದಿದ್ದರೂ ಅದು ಜನವರಿ 18ರ ನಂತರ ಆಗಬಹುದು," ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister Anand Asnotikar has not yet joined the JDS, his personnel advisers have pointed out.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ