ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಲಸಿಕೆ ಪಡೆದ ಸಿಐಎಸ್ಎಫ್ ನ 150 ಸಿಬ್ಬಂದಿ

|
Google Oneindia Kannada News

ಕಾರವಾರ, ಫೆಬ್ರವರಿ 10: ಕೈಗಾ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್)ನ 150 ಸಿಬ್ಬಂದಿ ಕಾರವಾರದ ಕದ್ರಾ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ.

ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದ ಭದ್ರತೆ ವಹಿಸಿಕೊಂಡಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಬುಧವಾರ ಕಮಾಂಡೆಂಟ್ ಜಿ.ಭುವನೇಶ್ ಕುಮಾರ್ ನೇತೃತ್ವದಲ್ಲಿ ಕದ್ರಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆ ಪಡೆದಿದ್ದಾರೆ.

ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಫೆ.24ಕ್ಕೆ ಶಿರಸಿ ಬಂದ್‌ಗೆ ಕರೆ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಫೆ.24ಕ್ಕೆ ಶಿರಸಿ ಬಂದ್‌ಗೆ ಕರೆ

ಕದ್ರಾ ಆಸ್ಪತ್ರೆಯ ಡಾ.ಮೊಹ್ಸಿನ್ ಶೇಖ್ ಸಮ್ಮುಖದಲ್ಲಿ ಕಮಾಂಡೆಂಟ್ ಭುವನೇಶಕುಮಾರ್, ಸಹಾಯಕ ಕಮಾಂಡೆಂಟ್ ರಾಕೇಶಕುಮಾರ್, ಇನ್ಸ್‌ಪೆಕ್ಟರ್ ವಿಶಾಲ್ ಸಿಂಗ್, ಕೈಗಾ ಗುಪ್ತದಳ ವಿಭಾಗದ ಸಿದ್ದಾರೂಢ ಬಿ. ಮುಂತಾದವರು ಲಸಿಕೆ ಹಾಕಿಸಿಕೊಂಡಿದ್ದಾರೆ.

Karwar: 150 Personnel Members Of The CISF Who Received The Covid Vaccine

ಲಸಿಕೆ ಹಾಕಿಸಿಕೊಳ್ಳಲು ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳೇ ಹಿಂಜರಿಯುತ್ತಿರುವಾಗ ಸಿಐಎಸ್ಎಫ್ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಹಲವರಿಗೆ ಪ್ರೇರಣೆ ನೀಡಿದ್ದಾರೆ.

Karwar: 150 Personnel Members Of The CISF Who Received The Covid Vaccine

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಕಾರವಾರ ತಹಶೀಲ್ದಾರ ಆರ್.ವಿ.ಕಟ್ಟಿ ಮುಂತಾವದರು ಕೂಡ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

Recommended Video

'ನಾನೊಬ್ಬ ಭಾರತೀಯ ಮುಸಲ್ಮಾನ ಎನ್ನಲು ಹೆಮ್ಮೆಯಾಗುತ್ತದೆ'- ಗುಲಾಂ ನಬಿ ಆಜಾದ್‌ | Oneindia Kannada

English summary
150 personnel of the Kaiga Central Industrial Security Force (CISF) have received the Covid-19 vaccine at the Kadra government hospital in Karwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X