ಜಮೀರ್ ಅಹಮದ್ ಕಾಂಗ್ರೆಸ್‌ನ ಹೊಸ ಟ್ರಬಲ್ ಶೂಟರ್!

Recommended Video

      ಜಮೀರ್ ಅಹ್ಮದ್ ಖಾನ್ ರನ್ನ ಕಾಂಗ್ರೆಸ್ ನ ಟ್ರಬಲ್ ಶೂಟರ್ ಆಗಿ ಮಾಡಿದ ಸಿದ್ದು | Oneindia Kannada

      ಬೆಂಗಳೂರು, ಸೆಪ್ಟೆಂಬರ್ 24 : ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಕೆಲವು ಶಾಸಕರು ಸಚಿವ ಸಂಪುಟ ವಿಸ್ತರಣೆಗೆ ಪಟ್ಟು ಹಿಡಿದಿದ್ದಾರೆ. ಎಲ್ಲರ ಜೊತೆ ಮಾತುಕತೆ ನಡೆಸಿ ಅಸಮಾಧಾನ ಬಗೆಹರಿಸುತ್ತಿರುವುದು ಯಾರು?, ಸಿದ್ದರಾಮಯ್ಯ ಎಂದು ಕೊಂಡರೆ ನಿಮ್ಮ ಊಹೆ ತಪ್ಪು.....!

      ಜಮೀರ್ ಅಹಮದ್ ಖಾನ್ ಕರ್ನಾಟಕ ಕಾಂಗ್ರೆಸ್‌ನ ಹೊಸ ಟಬ್ರಲ್ ಶೂಟರ್. ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರ ಪೈಕಿ ಜಮೀರ್ ಅಹಮದ್ ಖಾನ್ ಸಹ ಒಬ್ಬರು.

      2018ರ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದಿದ್ದಾರೆ ಜಮೀರ್ ಅಹಮದ್ ಖಾನ್. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅವರು ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪ ಸಂಖ್ಯಾತ ಮತ್ತು ಹಜ್ ಖಾತೆಯ ಸಚಿವರು.

      ಸದ್ಯ, ಕಾಂಗ್ರೆಸ್‌ ಪಕ್ಷದಲ್ಲಿ ಮುನಿಸಿಕೊಂಡಿರುವ ಶಾಸಕರಾದ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಆನಂದ್ ಸಿಂಗ್ ಸೇರಿದಂತೆ ಎಲ್ಲರ ಜೊತೆ ಮಾತುಕತೆ ನಡೆಸುತ್ತಿರುವುದು ಜಮೀರ್ ಅಹಮದ್ ಖಾನ್, ಎಲ್ಲರನ್ನೂ ಸಿದ್ದರಾಮಯ್ಯ ನಿವಾಸಕ್ಕೆ ಕರೆತರುತ್ತಿರುವುದು ಸಹ ಜಮೀರ್....

      ಸಿದ್ದರಾಮಯ್ಯ ಆಪ್ತರು ಜಮೀರ್

      ಸಿದ್ದರಾಮಯ್ಯ ಆಪ್ತರು ಜಮೀರ್

      ಜೆಡಿಎಸ್ ಪಕ್ಷದಲ್ಲಿದ್ದ ಸಮಯದಿಂದಲೂ ಜಮೀರ್ ಅಹಮದ್ ಖಾನ್ ಸಿದ್ದರಾಮಯ್ಯ ಅವರ ಪರಮಾಪ್ತರು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ, ಕಾಂಗ್ರೆಸ್ ಬೆಂಬಲಿಸಿದ ಬಳಿಕ ಮತ್ತಷ್ಟು ಆಪ್ತರಾದರು. ನಂತರ ಸಿದ್ದರಾಮಯ್ಯ ಅವರ ಜೊತೆಗೆ ಜಮೀರ್ ಅಹಮದ್ ಖಾನ್ ಗುರುತಿಸಿಕೊಂಡಿದ್ದಾರೆ.

      ಈಗ ಅಸಮಾಧಾನಗೊಂಡ ಶಾಸಕರ ಜೊತೆ ಮಾತುಕತೆ ನಡೆಸುವ ಹೊಣೆಯನ್ನು ಸಿದ್ದರಾಮಯ್ಯ ಅವರು ಜಮೀರ್ ಅಹಮದ್ ಖಾನ್‌ಗೆ ನೀಡಿದ್ದಾರೆ. ಆದ್ದರಿಂದ, ಶಾಸಕರ ಜೊತೆ ಮೊದಲು ಮಾತುಕತೆ ನಡೆಸಿ, ಬಳಿಕ ಅವರನ್ನು ಸಿದ್ದರಾಮಯ್ಯ ನಿವಾಸಕ್ಕೆ ಕರೆದುಕೊಂಡು ಬರುತ್ತಿದ್ದಾರೆ.

      ಕುಮಾರಕೃಪಾದಲ್ಲಿ ಕಾಣಿಸಿಕೊಂಡರು

      ಕುಮಾರಕೃಪಾದಲ್ಲಿ ಕಾಣಿಸಿಕೊಂಡರು

      ಜಮೀರ್ ಅಹಮದ್ ಖಾನ್ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆಗೂ ಗುರುತಿಸಿಕೊಂಡಿದ್ದಾರೆ. ಕುಮಾರಕೃಪಾ ಅತಿಥಿ ಗೃಹದಲ್ಲಿ ವೇಣುಗೋಪಾಲ್ ಜೊತೆಗೆ ಅವರು ಕಾಣಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

      ಸಚಿವ ಸಂಪುಟ ವಿಸ್ತರಣೆಗೆ ಪಟ್ಟು ಹಿಡಿದಿರುವ ಆನಂದ್ ಸಿಂಗ್, ಎಂ.ಟಿ.ಬಿ.ನಾಗರಾಜ್, ಡಾ.ಕೆ.ಸುಧಾಕರ್ ಅವರ ಜೊತೆ ಜಮೀರ್ ಮಾತುಕತೆ ನಡೆಸುತ್ತಿದ್ದಾರೆ.

      ಡಾ.ಕೆ.ಸುಧಾಕರ್ ಭೇಟಿ

      ಡಾ.ಕೆ.ಸುಧಾಕರ್ ಭೇಟಿ

      ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಅವರ ನಿವಾಸದಲ್ಲಿ ಭಾನುವಾರ ಜಮೀರ್ ಅಹಮದ್ ಖಾನ್ ಉಪಹಾರ ಸವಿದರು. ಬಳಿಕ ಮಾತನಾಡಿದ ಅವರು, 'ಉಪಹಾರಕ್ಕೆ ಕರೆದಿದ್ದರು ಬಂದಿದ್ದೆ. ಊಟಕ್ಕೆ ಕರೆದರೆ ಅದಕ್ಕೂ ಬರುತ್ತಿದ್ದೆ. ಇಬ್ಬರದ್ದು ಕಾಂಗ್ರೆಸ್ ಪಕ್ಷ ಅದು ಬಿಟ್ಟರೆ ಬೇರೆ ಯಾವುದೇ ವಿಶೇಷವಿಲ್ಲ' ಎಂದು ಹೇಳಿದರು.

      'ಡಾ.ಕೆ.ಸುಧಾಕರ್ ಅವರು ಚೆನ್ನೈಗೆ ದೇವಾಲಯಕ್ಕೆ ಹೋಗಿದ್ದರು. ಬೆಂಗಳೂರಿಗೆ ಬಂದ ಬಳಿಕ ಅವರು ನನಗೆ ಫೋನ್ ಮಾಡಿದ್ದರು. ಮಾಧ್ಯಮದಲ್ಲಿ ಏನೇನೋ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರು. ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ. ಈ ಕುರಿತು ಟ್ವಿಟ್ ಸಹ ಮಾಡಿದ್ದಾರೆ' ಎಂದು ಜಮೀರ್ ಹೇಳಿದರು.

      ಎಂ.ಬಿ.ಬಿ.ನಾಗರಾಜ್ ಭೇಟಿ

      ಎಂ.ಬಿ.ಬಿ.ನಾಗರಾಜ್ ಭೇಟಿ

      ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಟಿ.ಬಿ.ನಾಗರಾಜ್ ಸಚಿವ ಸಂಪುಟ ವಿಸ್ತರಣೆಗಾಗಿ ಪಟ್ಟು ಹಿಡಿದಿದ್ದಾರೆ. ಬಹಿರಂಗವಾಗಿ ನನಗೆ ಸಚಿವ ಸ್ಥಾನಬೇಕು ಎಂದು ಹೇಳಿದ್ದಾರೆ. ಜಮೀರ್ ಅಹಮದ್ ಅವರು ಬೆಂಗಳೂರಿನಲ್ಲಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

      ಭಾನುವಾರ ಹೊಸಕೋಟೆಯಲ್ಲಿರುವ ಎಂ.ಟಿ.ಬಿ.ನಾಗರಾಜ್ ನಿವಾಸಕ್ಕೆ ಸಚಿವ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಖಾನ್ ಭೇಟಿ ನೀಡಿದ್ದರು. ಬಳಿಕ ಬೆಂಗಳೂರಿನಲ್ಲಿ ಅವರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದರು.

      ಆನಂದ್ ಸಿಂಗ್ ಜೊತೆ ಮಾತುಕತೆ

      ಆನಂದ್ ಸಿಂಗ್ ಜೊತೆ ಮಾತುಕತೆ

      ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ಬಿಜೆಪಿಗೆ ವಾಪಸ್ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆನಂದ್ ಸಿಂಗ್ ಅವರ ಜೊತೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಜಮೀರ್ ಅಹಮದ್ ಖಾನ್ ಅವರು ಮಾತುಕತೆ ನಡೆಸಿ, ಅವರನ್ನು ಸಿದ್ದರಾಮಯ್ಯ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+