ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋತರೆ ತಲೆ ಕತ್ತರಿಸಿ ಕೊಡುತ್ತೇನೆ: ಜಮೀರ್ ಸವಾಲು

By Manjunatha
|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರಿಗೆ ಸವಾಲ್ ಹಾಕಿದ ಜಮೀರ್ ಅಹ್ಮದ್ ಖಾನ್ | Oneindia Kannada

ಬೆಂಗಳೂರು, ಏಪ್ರಿಲ್ 02: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಮೀರ್ ಅಹ್ಮದ್‌ರನ್ನು ಸೋಲಿಸಲೆಂದು ದೇವೇಗೌಡ ಅವರು ಭಾರಿ ಕಸರತ್ತು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್ ಅವರು 'ಚಾಮರಾಜಪೇಟೆಯಲ್ಲಿ ನಾನು ಸೋತರೆ ನನ್ನ ತಲೆ ಕಡಿದು ಕೊಡುತ್ತೇನೆ' ಎಂದು ಸವಾಲು ಹಾಕಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಇಂದು ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಅಲ್ತಾಫ್‌ ಖಾನ್ ಅವರನ್ನು ದೇವೇಗೌಡ ಅವರು ಜೆಡಿಎಸ್‌ಗೆ ಸ್ವಾಗತಿಸಿದ್ದು, ಜಮೀರ್ ವಿರುದ್ಧ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ದೇವೇಗೌಡ, ಟಿ.ಎ.ಶರವಣ, ಮತ್ತು ಅಲ್ತಾಫ್ ಅವರುಗಳು ಜಮೀರ್ ವಿರುದ್ಧ ಭಾರಿ ವಾಗ್ದಾಳಿ ನಡೆಸಿದರು.

ಜಮೀರ್ ವಿರುದ್ಧ ದೇವೇಗೌಡ ದಾಳ, ಕಾಂಗ್ರೆಸ್‌ನ ಅಲ್ತಾಫ್ ಜೆಡಿಎಸ್‌ಗೆ ಜಮೀರ್ ವಿರುದ್ಧ ದೇವೇಗೌಡ ದಾಳ, ಕಾಂಗ್ರೆಸ್‌ನ ಅಲ್ತಾಫ್ ಜೆಡಿಎಸ್‌ಗೆ

ಅಲ್ತಾಫ್ ಅವರ ಬಗ್ಗೆ ಮಾತನಾಡಿದ ಅವರು 'ಜೆಡಿಎಸ್‌ ಪಕ್ಷವು ಇಡೀ ರಾಜ್ಯದ ಮುಸ್ಲಿಮರನ್ನು ನನ್ನ ವಿರುದ್ಧ ನಿಲ್ಲಿಸಿದರೂ ನನ್ನ ಗೆಲುವು ತಡೆಯಲು ಅಸಾಧ್ಯ, ಬೇಕಿದ್ದರೆ ದೇವೇಗೌಡರು ಅವರ ಆಪ್ತೇಷ್ಟರಾಗಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಅವರನ್ನು ನನ್ನ ವಿರುದ್ಧ ಚುನಾವಣೆಗೆ ನಿಲ್ಲಿಸಿದರೂ ನಾನೇ ಗೆಲ್ಲುತ್ತೇನೆ' ಎಂದರು.

Zameer Ahmed challenged that he will win for sure

ತಮ್ಮನ್ನು ಕುಳ್ಳ ಎಂದು ಕರೆದದ್ದಕ್ಕೆ ಖಡಕ್ ಟಾಂಗ್ ನೀಡಿದ ಜಮೀರ್, 'ಅಮಿತಾಬ್ ಬಚ್ಚನ್ 7 ಅಡಿ ಇದ್ದಾರೆ, ಆದರೆ ಸಚಿನ್ ಕುಳ್ಳ ಆದರೆ ಯಾರು ಹೆಚ್ಚು ಖ್ಯಾತರು?' ಎಂದು ಪ್ರತ್ಯುತ್ತರ ನೀಡಿದರು.

ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್ ಗೆಲುವು ನಿಶ್ಚಿತ: ಪುಟ್ಟಣ್ಣ ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್ ಗೆಲುವು ನಿಶ್ಚಿತ: ಪುಟ್ಟಣ್ಣ

ಶರವಣ ಬಗ್ಗೆ ಮಾತನಾಡಲು ನಿರಾಕರಿಸಿದ ಜಮೀರ್ 'ಅವರು ರಾಜಕಾರಣಿಯೇ ಅಲ್ಲ ಅವರ ಬಗ್ಗೆ ಮಾತನಾಡುವುದು ವ್ಯರ್ಥ', ಅವರು ಸುಮ್ಮನೆ ಚಿನ್ನ ಮಾರಿಕೊಂಡು ಇರುವುದು ಒಳಿತು ಎಂದರು.

'ನಾನು 6 ಅಡಿ ನೀನು 3 ಅಡಿ ಬಾ ನೋಡೇ ಬಿಡೋಣ': ಜಮೀರ್‌ಗೆ ಸವಾಲು'ನಾನು 6 ಅಡಿ ನೀನು 3 ಅಡಿ ಬಾ ನೋಡೇ ಬಿಡೋಣ': ಜಮೀರ್‌ಗೆ ಸವಾಲು

English summary
Zameer Ahmed who recently joined congress said that he will win in Chamrajpet definitely. He also said 'Deve Gowda should bring Kashmir ex CM Omar Abdulla to defeat me in Chamrajpete'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X