ಚಿಕ್ಕಬಳ್ಳಾಪುರದಲ್ಲಿ ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ
ಶಿಡ್ಲಘಟ್ಟ, ಆಗಸ್ಟ್, 19 : ತಿಮ್ಮನಾಯಕನ ಹಳ್ಳಿಯ ಯುವಶಕ್ತಿ ಸಂಘಟನೆಯು 'ಪರಿಸರ ಶಕ್ತಿ' ಎಂಬ ಶೀರ್ಷಿಕೆ ಅಡಿಯಲ್ಲಿ ಮೊರಾರ್ಜಿ ದೇಸಾಯಿ ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದು, ಬುಧವಾರ ಯಶಸ್ವಿಯಾಗಿ ನೆರವೇರಿದೆ.
ಯುವಶಕ್ತಿಯು ಈ ಕಾರ್ಯಕ್ರಮದ ಅಡಿಯಲ್ಲಿ ಹಳ್ಳಿಯಾದ್ಯಂತ ಸುಮಾರು 250 ಸಸಿಗಳನ್ನು ನೆಟ್ಟು ಸಾರ್ವಜನಿಕರಿಗೆ ಪರಿಸರ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಕರೆ ನೀಡಲಾಯಿತು.[ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ]

ಬರ ಪರಿಸ್ಥಿತಿ ಎದುರಿಸುತ್ತಿರುವ ಬಯಲು ಸೀಮೆಯಲ್ಲಿ ಸ್ವಚ್ಚಂದ ಪರಿಸರ ನಿರ್ಮಾಣ ಮಾಡಲು ಪಣತೊಟ್ಟ ಸಂಘಟನೆಯು, ಇದುವರೆಗೆ ಸುಮಾರು 3000 ಗಿಡಗಳನ್ನು ನೆಟ್ಟು, ಪರಿಸರ ಸುವ್ಯವಸ್ಥೆಗೆ ಶ್ರಮವಹಿಸುತ್ತಿದೆ.
ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಇನ್ನಷ್ಟು ಹಳ್ಳಿಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದು, ಶಾಲಾ ಮಕ್ಕಳಿಗೆ ಸಸಿಗಳ ಪೋಷಣಾ ಜವಾಬ್ದಾರಿ ವಹಿಸಿಕೊಡಲು ತೀರ್ಮಾನಿಸಿದ್ದೇವೆ. ಹಲವಾರು ಇಂಜಿನಿಯರ್ ಗಳು ಕಚೇರಿಗೆ ತೆರಳದೆ ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ ಎಂದು ಸಂಘಟನಾ ಸದಸ್ಯರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ಕಾಲೇಜು ಪ್ರಾಂಶುಪಾಲರಾದ ನಾರಾಯಣ ಸ್ವಾಮಿ, ರೈತಮುಂಖಡರು ಭಾಗವಹಿಸಿದ್ದರು.












Click it and Unblock the Notifications