ಕರ್ನಾಟಕದಲ್ಲಿ ಕಾಂಗ್ರೆಸ್ ಉರುಳಿಸಲು ಯೋಗಿ ಏಕೆ ಬೇಕು?
ಬೆಂಗಳೂರು, ಮೇ 24 : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ಯುದ್ಧ ಸನ್ನದ್ಧವಾಗಲು ಆರಂಭಿಸಿವೆ.
ಕಾಂಗ್ರೆಸ್ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತ ತಂತ್ರಗಾರಿಕೆ ಹೆಣೆಯುತ್ತಿದೆ, ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ಇಂಥವರೇ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂದು ಘೋಷಣೆ ಮಾಡಲು ಆರಂಭಿಸಿದೆ, ಇನ್ನು ಬಿಜೆಪಿ ಜನ ಸಂಪರ್ಕ ಸಭೆಯನ್ನು ಹಳ್ಳಿಹಳ್ಳಿಗಳಲ್ಲಿ ಆರಂಭಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಪಕ್ಷದ ಅಧಿಕೃತ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಲ್ಲೂ ಘೋಷಣೆಯಾಗದಿದ್ದರೂ, ತಾವೇ ಸ್ವಯಂಘೋಷಿಸಿಕೊಂಡು ಕಾಲಿಗೆ ಗಾಲಿ ಕಟ್ಟಿಕೊಂಡಂತೆ ಊರೂರು ಸುತ್ತುತ್ತಿದ್ದಾರೆ, ದಲಿತರು, ಬಡವರು ಎಂದು ಭೇದಭಾವ ಮಾಡದೆ ಊಟತಿಂಡಿಗಳನ್ನು ಅಲ್ಲೇ ಮಾಡುತ್ತ ಜನರನ್ನು ಓಲೈಸಲು ಆರಂಭಿಸಿದ್ದಾರೆ.
ಬಿಜೆಪಿಯಲ್ಲಿ ರಾಯಣ್ಣ ಬ್ರಿಗೇಡ್ ಗೆ ಸಂಬಂಧಿಸಿದಂತೆ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಆರಂಭವಾಗಿದ್ದ ಶೀತಲ ಸಮರ ಭುಗಿಲೇಲುವ ಮೊದಲೇ ತಣ್ಣಗಾಗಿಸಲು ಪ್ರಯತ್ನಿಸಲಾಗಿದ್ದು, ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡಿದೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡು ಜೋಕ್ ಕತ್ತರಿಸುತ್ತ ನಗಾಡುತ್ತಿರುವ ಚಿತ್ರಗಳು ಕಣ್ಣಿಗೆ ಬೀಳುತ್ತಿವೆ.
ಬಿಜೆಪಿ ಪಾಲಿಗೆ ಲಿಂಗಾಯತರ ಮುಖಂಡ ಯಡಿಯೂರಪ್ಪನವರೇ ಮಾಸ್ ಲೀಡರ್. ಅವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ ಪಕ್ಷ. ಆದರೆ, ಉತ್ತರಪ್ರದೇಶದಲ್ಲಿ ಸಿಕ್ಕಂತಹ ಅಭೂತಪೂರ್ವ ಯಶಸ್ಸು ಇಲ್ಲಿ ಕಾಣುವುದು ಅನುಮಾನ. ಈ ಕಾರಣದಿಂದಾಗಿಯೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಇಲ್ಲಿ ಸ್ಟಾರ್ ಪ್ರಚಾರಕನನ್ನಾಗಿ ಇಲ್ಲಿಗೆ ತರುವ ಮಾಸ್ಟರ್ ಪ್ಲಾನ್ ಇದಾಗಿದೆ.

ಕರ್ನಾಟಕಕ್ಕೆ ಯೋಗಿ ಪ್ರಚಾರಕ್ಕೆ ಬರಬೇಕು
ಉತ್ತರಪ್ರದೇಶ ಚುನಾವಣೆಗೆ ಮುನ್ನ ಉತ್ತರಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಯೋಗಿ ಆದಿತ್ಯನಾಥ್ ತಮ್ಮ ಕಾರ್ಯವೈಖರಿಯಿಂದ ಇಡೀ ದೇಶದ ಗಮನ ಸೆಳೆದಿದ್ದಾರೆ. ಫೈರ್ ಬ್ರಾಂಡ್ ಹಿಂದೂ ನೇತಾರ ಯೋಗಿ ಅವರು ಉತ್ತರಪ್ರದೇಶದಲ್ಲಿ ಮಾಡಿದ ಚಮತ್ಕಾರ ಕರ್ನಾಟಕದಲ್ಲಿಯೂ ಮಾಡುತ್ತಾರೆ ಎಂಬ ಹವಣಿಗೆ ಇಲ್ಲಿನ ನಾಯಕರದ್ದು. ಅವರ ಜನಪ್ರಿಯತೆಯನ್ನು ಮಾನದಂಡವಾಗಿಟ್ಟುಕೊಂಡು ಜನರನ್ನು ಸೆಳೆಯುವ ತಂತ್ರಗಾರಿಕೆ ಬಿಜೆಪಿಯದ್ದು.

ಕರ್ನಾಟಕದೊಡನೆ ಯೋಗಿಯ ಅನುಬಂಧ
ಕರ್ನಾಟಕ ರಾಜಕೀಯದಲ್ಲಿ ಮಠಗಳು ಮಹತ್ವದ ಪಾತ್ರವಹಿಸುತ್ತವೆ ಎಂಬುದನ್ನು ಎಲ್ಲರೂ ಬಲ್ಲರು. ಯೋಗಿ ಆದಿತ್ಯನಾಥ್ ಅವರು ತಾವೇ ಸ್ವತಃ ಮಠವೊಂದರ ಸ್ವಾಮೀಜಿಯಾಗಿರುವುದರಿಂದ ಇಲ್ಲಿನ ಮಠಗಳ ಮೇಲೂ ಪ್ರಭಾವ ಬೀರಬಲ್ಲರು. ಅಲ್ಲದೆ ಇಲ್ಲಿನ ಕದ್ರಿ ಯೋಗೇಶ್ವರ್ ಮಠದೊಂದಿಗೆ ಯೋಗಿಯವರು ವಿಶೇಷ ಬಾಂಧವ್ಯ ಹೊಂದಿದ್ದಾರೆ. ಕಳೆದ 15 ವರ್ಷಗಳಿಂದ ಯೋಗಿಯವರು ಅಖಿಲ ಭರತವರ್ಷೀಯ ಅವಧೂತ ಭೇಷ್ ಬರಾಹ್ ಪಂಥದ ಮುಖಂಡರಾಗಿದ್ದು, ಕದ್ರಿ ಯೋಗೇಶ್ವರ್ ಮಠದ ಮುಖಂಡನನ್ನು ನೇಮಿಸಿದ್ದು ಇವರೇ.

ಒಕ್ಕಲಿಗ ಮಠದೊಂದಿಗೆ ಯೋಗಿಯ ಸಂಪರ್ಕ
ಲಿಂಗಾಯತರಷ್ಟೇ ಬಲಿಷ್ಠರಾಗಿರುವ ಒಕ್ಕಲಿಗರ ಆದಿಚುಂಚನಗಿರಿ ಮಠದೊಂದಿಗೆ ಕೂಡ ಯೋಗಿಯ ಉತ್ತಮ ಸಂಬಂಧವಿದೆ. ಯೋಗಿಯವರು ಪರಿಪಾಲಿಸುವ ನಾಥ ಸಂಪ್ರದಾಯವನ್ನು ಬಾಲಗಂಗಾಧರನಾಥ ಸ್ವಾಮೀಜಿ ದೇವಸ್ಥಾನ ಕೂಡ ಪರಿಪಾಲಿಸುತ್ತದೆ. ಯೋಗಿಯ ಗುರು ಅವೈದ್ಯನಾಥ್ ಮತ್ತು ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿಯವರು ಉತ್ತಮ ಬಾಂಧವ್ಯ ಹೊಂದಿದ್ದರು. ಈ ಮಠದ ಮೂಲಕ ಕೂಡ ಯೋಗಿ ಆದಿತ್ಯನಾಥರನ್ನು ಬಳಸಿ ಒಕ್ಕಲಿಗರ ಮತಗಳನ್ನು ಕಬಳಿಸುವುದು ಬಿಜೆಪಿಯ ಯೋಚನೆ.

ಹಿಂದೂತ್ವದ ಮುಖವಾಣಿ ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ್ ಹಿಂದೂತ್ವದ ಪ್ರಬಲ ಪ್ರತಿಪಾದಕ. ಚುನಾವಣೆಯಲ್ಲಿ ಅಭಿವೃದ್ಧಿಯೇ ಬಿಜೆಪಿಯ ಮಂತ್ರವಾಗಲಿದೆ ಎಂದು ಹೇಳಲಾಗಿದ್ದರೂ ಹಿಂದೂತ್ವದ ಲೆಬೆಲ್ ಕಟ್ಟಿಕೊಂಡೇ ಬಿಜೆಪಿ ಪ್ರಚಾರಕ್ಕಿಳಿಯುತ್ತದೆ. ಕಾವಿಧಾರಿ ಯೋಗಿ ಈಗಾಗಲೆ ಉತ್ತರಪ್ರದೇಶದಲ್ಲಿ ಕೇಸರಿಯ ರಂಗನ್ನು ಚೆಲ್ಲಾಡಿದ್ದಾರೆ. ರುದ್ರೇಶ್ ಸೇರಿದಂತೆ ಹಲವಾರು ಹಿಂದೂ ಮುಖಂಡರು ಈ ವರ್ಷ ಕಗ್ಗೊಲೆಯಾಗಿರುವುದು ಮತಬೇಟೆಗಳಿಯಲು ಬಿಜೆಪಿ ಸಹಕಾರಿಯಾಗಲಿದೆ.

ಬಿರುಗಾಳಿ ಎಬ್ಬಿಸಿರುವ ಯೋಗಿಯ ತಂತ್ರಗಾರಿಕೆ
ತಮ್ಮ ವಿರೋಧಿಗಳನ್ನು ಹೇಗೆ ಮಟ್ಟಹಾಕಬಹುದು, ಜನರನ್ನು ಹೇಗೆ ಓಲೈಸಬಹುದು ಎಂದು ಯೋಗಿ ಬಲ್ಲರು. ಕಸಾಯಿಖಾನೆಗಳ ಮೇಲಿನ ಕಡಿವಾಣ, ಗುಟ್ಕಾ ಮೇಲಿನ ನಿಷೇಧ, ಪ್ಲಾಸ್ಟಿಕ್ ಬ್ಯಾನ್, ರಸ್ತೆಯನ್ನು ತಾವೇ ಸ್ವಚ್ಛ ಮಾಡುವ ಪರಿ, ರೋಡ್ ರೋಮಿಯೇಗಳ ಮೇಲೆ ನಿಯಂತ್ರಣದಿಂದಾಗಿ ಉತ್ತರಪ್ರದೇಶದಲ್ಲಿ ಯೋಗಿ ಜನರನ್ನು ಅಪಾರವಾಗಿ ಸೆಳೆದಿದ್ದಾರೆ. ಬದಲಾವಣೆಯ ಹರಿಕಾರರಾಗಿರುವ ಯೋಗಿಯ ಪ್ರಸ್ತುತತೆ ಅಂಥದೇ ಬದಲಾವಣೆಯ ಗಾಳಿಯನ್ನು ಕರ್ನಾಟಕದಲ್ಲಿಯೂ ಬೀಸಿ ತರಲಿದೆ ಎಂಬುದು ಇಲ್ಲಿನ ನಾಯಕರ ಲೆಕ್ಕಾಚಾರ.

ಸಿದ್ದರಾಮಯ್ಯ Vs ಯೋಗಿ ಆದಿತ್ಯನಾಥ್
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟಗಳು ಅಂತರ್ಮುಖಿಯಾಗಿ ಇದ್ದೇ ಇರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಹೋರಾಟ ನಡೆಯುತ್ತಿರುವುದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವೆ ಅಲ್ಲ, ಬದಲಿಗೆ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ! ಮೋದಿ ಅಲೆ ಇಲ್ಲಿ ಇಲ್ಲ ಎಂದೇ ಸಿದ್ದರಾಮಯ್ಯ ಎರಡು ಉಪಚುನಾವಣೆ ಗೆದ್ದಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಪ್ರವೇಶವಾಗುತ್ತಿದ್ದಂತೆ ಯುದ್ಧ ಯೋಗಿ ಮತ್ತು ಸಿದ್ದು ನಡುವೆ ನಡೆಯಲಿದೆ. ಮುಖ್ಯಮಂತ್ರಿ ಅಂದ್ರೆ ಯೋಗಿಯಂತಿರಬೇಕು, ಸಿದ್ದರಾಮಯ್ಯನವರಂತಲ್ಲ ಎಂದು ಬಿಂಬಿಸುವ ಹುನ್ನಾರ ಬಿಜೆಪಿಯದ್ದು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications