ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಜನೇಯ ಅವರೇ ನಾವೆಲ್ಲಾ ಸೋಮಾರಿಗಳಾ?

|
Google Oneindia Kannada News

ಬೆಂಗಳೂರು, ಜೂ. 19 : ಅಂತಾರಾಷ್ಟ್ರೀಯ ಯೋಗ ದಿನ ಸಮೀಪಿಸುತ್ತಿರುವಂತೆ ಎಲ್ಲೆಡೆ ಯೋಗದ್ದೇ ಚರ್ಚೆ. 'ಶ್ರಮಜೀವಿಗಳಿಗೆ ಯೋಗದ ಅಗತ್ಯವಿಲ್ಲ, ಸೋಮಾರಿಗಳು ಬೇಕಾದರೆ ಯೋಗಾಭ್ಯಾಸ ಮಾಡಿಕೊಳ್ಳಲಿ' ಎಂದು ಹೇಳಿಕೆ ನೀಡಿರುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಸ್ವಪಕ್ಷೀಯರು ಮತ್ತು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದ ಸಚಿವರು, 'ಸೋಮಾರಿಗಳು, ಶ್ರೀಮಂತರು ಬೇಕಾದರೆ ಯೋಗಾಭ್ಯಾಸ ಮಾಡಿಕೊಳ್ಳಲಿ. ಶ್ರಮ ಜೀವಿಗಳಿಗೆ ಅದರ ಅಗತ್ಯವಿಲ್ಲ. ಸೋಮಾರಿಗಳಾದವರು ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಲಿ' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. [ಒನ್ ಇಂಡಿಯಾದಲ್ಲಿ ಯೋಗ ಕುರಿತು ಸರಣಿ ಲೇಖನ ಆರಂಭ]

ಬಿಜೆಪಿ ನಾಯಕರಾದ ಆರ್.ಅಶೋಕ್, ಸುರೇಶ್ ಕುಮಾರ್ ಸಚಿವ ಆಂಜನೇಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು 'ನಾನು ದಿನ ಯೋಗ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವೇಗೌಡರು ಯೋಗ ಮಾಡುತ್ತಾರೆ. ಹಾಗಾದರೆ ನಾವೆಲ್ಲಾ ಸೋಮಾರಿಗಳಾ? ಎಂದು ಆಂಜನೇಯ ಅವರನ್ನು ಪ್ರಶ್ನಿಸಿದ್ದಾರೆ. [ದೆಹಲಿಯ ಯೋಗ ದಿನಾಚರಣೆಗೆ ವೀರೇಂದ್ರ ಹೆಗ್ಗಡೆ ಅತಿಥಿ]

ಮಾಜಿ ಸಚಿವ ಸುರೇಶ್ ಕುಮಾರ್ ಅವರು, ಫೇಸ್‌ಬುಕ್‌ನಲ್ಲಿ ಎಚ್.ಆಂಜನೇಯ ಅವರು ಯೋಗ ಮಾಡುವ ಚಿತ್ರವನ್ನು ಹಾಕಿದ್ದು, ಯೋಗ ಸೋಮಾರಿಗಳಿಗೆ ಮಾತ್ರವೇ? ನೀವು ಯೋಗ ಮಾಡುತ್ತಿದ್ದೀರಲ್ಲ? ಎಂದು ಪ್ರಶ್ನಿಸಿದ್ದಾರೆ. ಸಚಿವ ಆಂಜನೇಯ ಅವರ ಹೇಳಿಕೆಗೆ ನಾಯಕರು ನೀಡಿದ ಪ್ರತಿಕ್ರಿಯೆ ಇಲ್ಲಿದೆ...

ಆಂಜನೇಯ ಪ್ರಶ್ನಿಸಿದ ಸಚಿವ ದೇಶಪಾಂಡೆ

ಆಂಜನೇಯ ಪ್ರಶ್ನಿಸಿದ ಸಚಿವ ದೇಶಪಾಂಡೆ

ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಆಂಜನೇಯ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ 'ನಾನು ದಿನ ಯೋಗ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವೇಗೌಡರು ಯೋಗ ಮಾಡುತ್ತಾರೆ. ಹಾಗಾದರೆ ನಾವೆಲ್ಲಾ ಸೋಮಾರಿಗಳಾ? ಎಂದು ಆಂಜನೇಯ ಅವರನ್ನು ಪ್ರಶ್ನಿಸಿದ್ದಾರೆ.

ನೀವು ಯೋಗ ಮಾಡುತ್ತಿದ್ದೀರಲ್ಲಾ?

ನೀವು ಯೋಗ ಮಾಡುತ್ತಿದ್ದೀರಲ್ಲಾ?

ಮಾಜಿ ಸಚಿವ ಸುರೇಶ್ ಕುಮಾರ್ ಅವರು, ಫೇಸ್‌ಬುಕ್‌ನಲ್ಲಿ ಎಚ್.ಆಂಜನೇಯ ಅವರು ಯೋಗ ಮಾಡುವ ಚಿತ್ರವನ್ನು ಹಾಕಿದ್ದು, ಯೋಗ ಸೋಮಾರಿಗಳಿಗೆ ಮಾತ್ರವೇ? ನೀವು ಯೋಗ ಮಾಡುತ್ತಿದ್ದೀರಲ್ಲ? ಎಂದು ಪ್ರಶ್ನಿಸಿದ್ದಾರೆ.

'ಸಿದ್ದರಾಮಯ್ಯ, ಖಾದರ್ ಸೋಮಾರಿಗಳಾ?'

'ಸಿದ್ದರಾಮಯ್ಯ, ಖಾದರ್ ಸೋಮಾರಿಗಳಾ?'

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಆಂಜನೇಯ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 'ಸಿದ್ದರಾಮಯ್ಯ, ಖಾದರ್‌ ಯೋಗ ಮಾಡುತ್ತಾರೆ, ಅವರೂ ಸೋಮಾರಿಗಳಾ' ಎಂದು ಪ್ರಶ್ನಿಸಿದ್ದಾರೆ.

ನಿರಂತರ ಯೋಗಾಭ್ಯಾಸ ನಡೆಸೋಣ..

ನಿರಂತರ ಯೋಗಾಭ್ಯಾಸ ನಡೆಸೋಣ..

ಕೇಂದ್ರ ಕಾನೂನು ಸಚಿವ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡರು ಆಂಜನೇಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಉತ್ತಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ನಿರಂತರ ಯೋಗಾಭ್ಯಾಸ ನಡೆಸೋಣ' ಎಂದು ಫೇಸ್‌ಬುಕ್‌ನಲ್ಲಿ ಕರೆ ನೀಡಿರುವ ಅವರು ಯೋಗ ಮಾಡುವ ಚಿತ್ರವನ್ನು ಹಾಕಿದ್ದಾರೆ.

ಆಂಜನೇಯ ಅವರು ಯೋಗ ಮಾಡಬೇಡಿ ಎಂದು ಹೇಳಿಲ್ಲ

ಆಂಜನೇಯ ಅವರು ಯೋಗ ಮಾಡಬೇಡಿ ಎಂದು ಹೇಳಿಲ್ಲ

ಸಚಿವ ದಿನೇಶ್ ಗುಂಡೂರಾವ್ ಅವರು ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಸೋಮಾರಿಗಳು ಯೋಗ ಮಾಡಿದರೆ ಚಟುವಟಿಕೆಯಿಂದ ಇರುತ್ತಾರೆ ಎಂದು ಆಂಜನೇಯ ಅವರು ಹೇಳಿದ್ದಾರೆ, ಯೋಗ ಮಾಡಬೇಡಿ ಎಂದು ಹೇಳಿಲ್ಲ' ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

English summary
BJP and Congress leaders condemned the social welfare minister H.Anjaneya statement on Yoga. On Wednesday minister said, 'Yoga is for lazy people who do not have time for exercise'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X