ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ ಕಗ್ಗಂಟು: 2ನೇ ಬ್ರಹ್ಮಗಂಟನ್ನು ಯಶಸ್ವಿಯಾಗಿ ಬಿಡಿಸಿದ ಸಿಎಂ ಬಿಎಸ್ವೈ

|
Google Oneindia Kannada News

Recommended Video

Yediyurappa's cabinet expansion Drama to end soon | BJP | Karnataka | Cabinet

"ಸಚಿವ ಸಂಪುಟ ವಿಸ್ತರಣೆ ಇದೇ ಗುರುವಾರ (ಫೆ 6) ಬೆಳಗ್ಗೆ ನಡೆಯಲಿದೆ" ಎನ್ನುವ ಮೂಲಕ, ಈ ವಿಚಾರದಲ್ಲಿ, ಹಲವು ತಿಂಗಳಿನಿಂದ ಹರಿದಾಡುತ್ತಿದ್ದ ಎಲ್ಲಾ ಗೊಂದಲ/ಅಂತೆಕಂತೆ ಕಥೆಗಳಿಗೆ ಸಿಎಂ ಯಡಿಯೂರಪ್ಪ ತೆರೆ ಎಳೆದಿದ್ದಾರೆ.

ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಒಂದು ಕಡೆ, ಸೋತವರು ನಮಗೂ ಸಂಪುಟದಲ್ಲಿ ಅವಕಾಶ ನೀಡಬೇಕು ಎನ್ನುವುದು ಇನ್ನೊಂದು, ಜೊತೆಗೆ, ಮೂಲ ಬಿಜೆಪಿಯವರೂ ಲಾಬಿ ನಡೆಸುತ್ತಿದ್ದರಿಂದ, ಸಂಪುಟ ವಿಸ್ತರಣೆ ಗೊಂದಲದ ಗೂಡಾಗಿತ್ತು.

ಬಿಎಸ್ವೈ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆಯೇ ಮೌನಕ್ಕೆ ಶರಣಾದ ಸಾಹುಕಾರ ಜಾರಕಿಹೊಳಿಬಿಎಸ್ವೈ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆಯೇ ಮೌನಕ್ಕೆ ಶರಣಾದ ಸಾಹುಕಾರ ಜಾರಕಿಹೊಳಿ

ಬಿಜೆಪಿ ವರಿಷ್ಠರಿಂದ ಸಂಪುಟ ವಿಸ್ತರೆಣೆಗೆ ಅನುಮೋದನೆ ಪಡೆವುದೇ ಯಡಿಯೂರಪ್ಪನವರಿಗೆ ದೊಡ್ಡ ಸಾಹಸವಾಗಿತ್ತು. ಅದನ್ನು, ಹಾಗೂಹೀಗೂ ನಿಭಾಯಿಸಿ, ಮೊದಲ ಹೆಜ್ಜೆಯನ್ನು ಸಿಎಂ ಯಶಸ್ವಿಯಾಗಿ ದಾಟಿದ್ದಾರೆ.

ನನ್ನ ಸೋಲಿಗೆ ಬಿಜೆಪಿಯವರೇ ಕಾರಣ: ಮಾತಿನ ಕ್ಷಿಪಣಿ ಎಸೆದ ಎಂ.ಟಿ.ಬಿ ನಾಗರಾಜ್!ನನ್ನ ಸೋಲಿಗೆ ಬಿಜೆಪಿಯವರೇ ಕಾರಣ: ಮಾತಿನ ಕ್ಷಿಪಣಿ ಎಸೆದ ಎಂ.ಟಿ.ಬಿ ನಾಗರಾಜ್!

ಈಗ ಉಳಿದಿರುವುದು ಸಂಪುಟ ವಿಸ್ತರಣೆ ಮತ್ತು ಅವರು ಡಿಮಾಂಡ್ ಮಾಡುತ್ತಿರುವ ಖಾತೆ. ತಮ್ಮ ರಾಜಕೀಯ ಅನುಭವವನ್ನೆಲ್ಲಾ ಪ್ರಯೋಗಿಸಿರುವ ಸಿಎಂ ಬಿಎಸ್ವೈ, ಎರಡನೇ, ಕಗ್ಗಂಟನ್ನೂ ಯಶಸ್ವಿಯಾಗಿ ಬಿಡಿಸಿದ್ದಾರೆ. ಅದು ಯಾವುದು? ಮುಂದೆ ಓದಿ..

ಹದಿನೇಳು ಶಾಸಕರ ರಾಜೀನಾಮೆಯನ್ನು ಕೊಡಿಸಿ, ಉಪಚುನಾವಣೆಯಲ್ಲಿ ಗೆಲ್ಲಿಸಿದ್ದು

ಹದಿನೇಳು ಶಾಸಕರ ರಾಜೀನಾಮೆಯನ್ನು ಕೊಡಿಸಿ, ಉಪಚುನಾವಣೆಯಲ್ಲಿ ಗೆಲ್ಲಿಸಿದ್ದು

ಹದಿನೇಳು ಶಾಸಕರ ರಾಜೀನಾಮೆಯನ್ನು ಕೊಡಿಸಿ, ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದು, ಸಮರ್ಥವಾಗಿ ಈ ಕೆಲಸಗಳನ್ನು ಬಿಎಸ್ವೈ ನಿಭಾಯಿಸಿಕೊಂಡು ಬಂದಿದ್ದರು. ಸೋತ ಇಬ್ಬರು ಮುಖಂಡರಾದ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್, ಜೊತೆಗೆ ಆರ್. ಶಂಕರ್ ಕೂಡಾ ಸಚಿವ ಸ್ಥಾನಕ್ಕೆ ಪಟ್ಟುಹಿಡಿದು ಕೂತಿದ್ದರು. ಇದಲ್ಲದೇ ಅಥಣಿಯಿಂದ ಗೆದ್ದಿರುವ ಮಹೇಶ್ ಕುಮಠಳ್ಳಿ.

ಆರ್.ಶಂಕರ್ ಮನವೊಲಿಕೆ

ಆರ್.ಶಂಕರ್ ಮನವೊಲಿಕೆ

ಇವರಲ್ಲಿ ಆರ್.ಶಂಕರ್ ಅವರನ್ನು ಕರೆಸಿ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ರಾಣೆಬೆನ್ನೂರಿನಲ್ಲಿ ಆರ್.ಶಂಕರ್ ಗೆ ಟಿಕೆಟ್ ನೀಡದೇ, ವಿಧಾನಪರಿಷತ್ ಸದ್ಯಸ್ಯತ್ವದ ಆಫರ್ ನೀಡಲಾಗಿತ್ತು. ಆದರೆ, ಬಿಜೆಪಿ, ಸವದಿಗೆ ಟಿಕೆಟ್ ನೀಡಿದ್ದರಿಂದ, ಶಂಕರ್ ಸಿಟ್ಟಾಗಿದ್ದರು. ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿರುವ ಬಿಎಸ್ವೈ, ಆರು ತಿಂಗಳೊಳಗಾಗಿ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ, ಆರ್. ಶಂಕರ್ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ.

ಎಂ.ಟಿ.ಬಿ ನಾಗರಾಜ್

ಎಂ.ಟಿ.ಬಿ ನಾಗರಾಜ್

ಇನ್ನು, ಹೊಸಕೋಟೆಯ ಪರಾಜಿತ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್. "ನನ್ನ ಸೋಲಿಗೆ ಬಿಜೆಪಿಯವರೇ ಕಾರಣ, ನಾನು ಯಾರ ಹಂಗಿನಲ್ಲೂ ಇಲ್ಲ" ಎಂದು ಒಂದು ದಿನದ ಹಿಂದೆ ಆಕ್ರೋಶ ಹೊರಹಾಕಿದ್ದ ಎಂಟಿಬಿಯವರನ್ನೂ ಮನವೊಲಿಸುವಲ್ಲಿ ಬಿಎಸ್ವೈ ಯಶಸ್ವಿಯಾಗಿದ್ದಾರೆ. "ಯಡಿಯೂರಪ್ಪನವರ ಮೇಲೆ ನಮಗೆ ನಂಬಿಕೆಯಿದೆ. ಸಂಪುಟದಲ್ಲಿ ಸೇರದೇ ಇರುವುದಕ್ಕೆ ಬೇಸರವಿಲ್ಲ" ಎಂದು ಎಂಟಿಬಿ ಹೇಳಿದ್ದಾರೆ.

ಮಹೇಶ್ ಕುಮಠಳ್ಳಿ

ಮಹೇಶ್ ಕುಮಠಳ್ಳಿ

ಇನ್ನು ಅಥಣಿಯ ಶಾಸಕ ಮಹೇಶ್ ಕುಮಠಳ್ಳಿಯವರ ಮನವೊಲಿಸುವಲ್ಲೂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. "ನಾನು ಬಿಜೆಪಿ ಕಚೇರಿಯಲ್ಲಿ ಕಸಗುಡಿಸಲೂ ಸಿದ್ದ. ನಾವು ಪಕ್ಷದ ವಿರುದ್ದ ಕೆಲಸ ಮಾಡುವುದಿಲ್ಲ" ಎನ್ನುವ ಹೇಳಿಕೆ, ಕುಮಠಳ್ಳಿ ಕಡೆಯಿಂದ ಬಂದಿದೆ. ಹಾಗಾಗಿ, ಎರಡನೇ ಕಗ್ಗಂಟನ್ನೂ ಬಿಎಸ್ವೈ ಬಿಡಿಸಿದ್ದಾರೆ. ಇನ್ನೇನಿದ್ದರೂ ಎಚ್. ವಿಶ್ವನಾಥ್ ಮನವೊಲಿಸುವುದು ಮತ್ತು ಖಾತೆ ಹಂಚಿಕೆ ಮಾಡುವುದು.

English summary
Yediyurappa Government Cabinet Expansion: CM Succeeded To Convince Three Leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X