ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯಗೆ ಮತ್ತೆ 5 ಪ್ರಶ್ನೆ ಕೇಳಿದ ಯಡಿಯೂರಪ್ಪ!

|
Google Oneindia Kannada News

Recommended Video

ಸಿದ್ದರಾಮಯ್ಯನವರಿಗೆ ಬಿ ಎಸ್ ಯಡಿಯೂರಪ್ಪ ಕೇಳಿದ 5 ಪ್ರಶ್ನೆಗಳು | Oneindia Kannada

ಬೆಂಗಳೂರು, ಫೆಬ್ರವರಿ 08 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವಿನ ಟ್ವಿಟರ್ ವಾರ್ ಮುಂದುವರೆದಿದೆ. ಸಿದ್ದರಾಮಯ್ಯಗೆ ಮತ್ತೆ 5 ಪ್ರಶ್ನೆಗಳನ್ನು ಯಡಿಯೂರಪ್ಪ ಕೇಳಿದ್ದಾರೆ.

ಬೆಂಗಳೂರಿನಲ್ಲಿ ಮೋದಿ : ಮೋದಿಯ ಟಾಪ್‌ 10 ಹೇಳಿಕೆಗಳು!ಬೆಂಗಳೂರಿನಲ್ಲಿ ಮೋದಿ : ಮೋದಿಯ ಟಾಪ್‌ 10 ಹೇಳಿಕೆಗಳು!

ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಅದರಲ್ಲೂ ಮೋದಿ ಭಾಷಣದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಮೋದಿ ಭಾಷಣ : ಸಿದ್ದರಾಮಯ್ಯಗೆ ಯಡಿಯೂರಪ್ಪ 5 ಪ್ರಶ್ನೆಗಳುಮೋದಿ ಭಾಷಣ : ಸಿದ್ದರಾಮಯ್ಯಗೆ ಯಡಿಯೂರಪ್ಪ 5 ಪ್ರಶ್ನೆಗಳು

#Dare2Answer ಎಂಬ ಹ್ಯಾಷ್ ಟ್ಯಾಗ್ ಬಳಸಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಿಗೆ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಫೆ. 6ರಂದು ಯಡಿಯೂರಪ್ಪ 5 ಪ್ರಶ್ನೆ ಕೇಳಿದ್ದರು. ಬುಧವಾರ ರಾತ್ರಿ ಮತ್ತೆ 5 ಪ್ರಶ್ನೆಗಳನ್ನು ಕೇಳಿದ್ದಾರೆ. ಕರ್ನಾಟಕದ ಸರ್ಕಾರದ ವೈಫಲ್ಯತೆಗಳನ್ನು ಮುಂದಿಟ್ಟು ಸಿದ್ದರಾಮಯ್ಯ ಅವರೇ ಉತ್ತರ ಕೊಡಿ ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರ: ಮುಖಾಮುಖಿ ಚರ್ಚೆಗೆ ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನಭ್ರಷ್ಟಾಚಾರ: ಮುಖಾಮುಖಿ ಚರ್ಚೆಗೆ ಮೋದಿಗೆ ಸಿದ್ದರಾಮಯ್ಯ ಪಂಥಾಹ್ವಾನ

ಕರ್ನಾಟಕದಲ್ಲಿ ಚುನಾವಣೆ ಎದುರಾಗುತ್ತಿದೆ. ಮುಖ್ಯಮಂತ್ರಿ ಮತ್ತು ಬಿಜೆಪಿ ಅಧ್ಯಕ್ಷರು ಟ್ವಿಟರ್ ಮೂಲಕ ಮಾತಿನ ಯುದ್ಧ ನಡೆಸುತ್ತಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೇಗೆ ಆಗುತ್ತದೆ? ಎಂಬುದರ ಮುನ್ಸೂಚನೆಯಾಗಿದೆ.

ಸಿದ್ದರಾಮಯ್ಯಗೆ ಪ್ರಶ್ನೆ - 1

ನಿಮ್ಮ ಸರ್ಕಾರದ ಜಪ್ರಿಯ ಯೋಜನೆ ಅನ್ನಭಾಗ್ಯದಲ್ಲಿ ಕೇಂದ್ರ ಸರ್ಕಾರದ ಪಾಲೆಷ್ಟು?. ಈ ಬಗ್ಗೆ ಚರ್ಚೆ ಮಾಡೋಣ ಬನ್ನಿ.

ಮುಖ್ಯಮಂತ್ರಿಗಳಿಗೆ ಪ್ರಶ್ನೆ - 2

ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆಯ ಟೆಂಡರ್ ಕರೆಯುವಾಗ ನಿಯಮಾವಳಿಗಳನ್ನು ಏಕೆ ಪಾಲನೆ ಮಾಡಿಲ್ಲ?

ಸಿದ್ದರಾಮಯ್ಯಗೆ ಪ್ರಶ್ನೆ - 3

ಪರಿಶಿಷ್ಟ ಜಾತಿ, ಪಂಗಡದ ಹಾಸ್ಟೆಲ್‌ಗಳಿಗೆ ಹಾಸಿಗೆ, ದಿಂಬು ಖರೀದಿಯಲ್ಲಿ ಅಕ್ರಮ ನಡೆದಿದೆ. ಆಗ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಜೊತೆ ನೀವು ಏಕೆ ನಿಂತಿರಿ?

ಸಿದ್ದರಾಮಯ್ಯಗೆ ಪ್ರಶ್ನೆ - 4

ನಿಮ್ಮ ಸರ್ಕಾರದಲ್ಲಿ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ಕರುಣಿಸಿದ್ದೀರಿ. ರೋಹಿಣಿ ಸಿಂಧೂರಿ, ಅಜಯ್ ನಾಗಭೂಷಣ್ ಮುಂತಾದ ಅಧಿಕಾರಿಗಳನ್ನು ಯಾವ ಆಧಾರದ ಮೇಲೆ ವರ್ಗಾವಣೆ ಮಾಡಲಾಯಿತು.

ಸಿದ್ದರಾಮಯ್ಯಗೆ ಪ್ರಶ್ನೆ - 5

ಟಿ.ಎನ್.ಚಿಕ್ಕರಾಯಪ್ಪ, ಜಯಚಂದ್ರ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಾಗ ಸುಮಾರು 4 ಕೋಟಿ ಹೊಸ ನೋಟುಗಳು ಸಿಕ್ಕಿದವು. ಅದು ಹೇಗೆ ಸಾಧ್ಯವಾಯಿತು?. ಇಬ್ಬರು ನಿಮ್ಮ ಆಪ್ತರಲ್ಲವೇ?.

English summary
Karnataka BJP president B.S.Yeddyurappa asked 5 questions for Chief Minister Siddaramaiah. After Prime Minister of India Narendra Modi speech in Bengaluru on February 4, 2018. Siddaramaiah asked him to walk the talk posing four questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X