Get Updates
Get notified of breaking news, exclusive insights, and must-see stories!

ಸರ್ಕಾರ ಉರುಳಿಸಿದ ಖುಷಿ: ಮೋದಿಗೆ ಪತ್ರ ಬರೆದ ಯಡಿಯೂರಪ್ಪ

ಬೆಂಗಳೂರು, ಜುಲೈ 23: ವಿಶ್ವಾಮತದಲ್ಲಿ ಮೈತ್ರಿ ಸರ್ಕಾರವನ್ನು ಸೋಲಿಸಿ ಬಹುಮತ ಸಂಪಾದನೆ ಮಾಡಿ, ಸಿಎಂ ಖುರ್ಚಿಯನ್ನು ತಮ್ಮ ಪಾಲಿಗೆ ಮಾಡಿಕೊಂಡ ಕೂಡಲೇ ಯಡಿಯೂರಪ್ಪ ಅವರು ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ, ನಿಮ್ಮ ಹಾಗೂ ಪಕ್ಷದ ಪ್ರಮುಖರ ಬೆಂಬಲಕ್ಕೆ ಧನ್ಯವಾದಗಳು, ಕರ್ನಾಟಕದಲ್ಲಿ ನಾವು ಮೈತ್ರಿ ಸರ್ಕಾರವನ್ನು ವಿಶ್ವಾಸಮತದಲ್ಲಿ ಸೋಲಿಸಿದ್ದೇವೆ. ಬಿಜೆಪಿ ಪಕ್ಷ ರಚನೆ ಮಾಡುವ ಹಾದಿಯಲ್ಲಿದ್ದೇವೆ ಎಂದು ಹೇಳಿದ್ದಾರೆ.

'ನಮ್ಮ ಪಕ್ಷದ 105 ಶಾಸಕರು ಕಲ್ಲಿನಂತೆ ಪಕ್ಷದ ಜೊತೆಗೆ ನಿಂತರು. ಕಳೆದ ಮೂರು ದಿನಗಳಲ್ಲಿ ಬಹಳ ಕ್ಲಿಷ್ಟಕರ ರಾಜಕೀಯ ಪರಿಸ್ಥಿತಿಯನ್ನು ನಾವು ಎದುರಿಸಿದೆವು, ಆದರೆ ಅದನ್ನೆಲ್ಲ ಮೀರಿ ನಾವು ಮೇಲೆದ್ದು ಬಂದೆವು' ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

Yeddyurappa wrote letter to Narendra Modi after defeating coalition government

ನಾವು ಮಾತ್ರವಲ್ಲ, ರಾಜ್ಯದ ಜನ ಸಹ ಕೆಟ್ಟ ಆಡಳಿತದಿಂದ ಬೇಸತ್ತು ಹೋಗಿದ್ದರು, ಅವರು ಈಗ ನೆಮ್ಮದಿಯ ಉಸಿರು ಬಿಡುವಂತೆ ಆಗಿದೆ ಎಂದು ಯಡಿಯೂರಪ್ಪ ಅವರು ಮೋದಿ ಅವರಿಗೆ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೂ ಪತ್ರ ಬರೆದಿರುವ ಯಡಿಯೂರಪ್ಪ ಅವರು, ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ ಅದೇ ಮಾತುಗಳನ್ನು ಉಲ್ಲೇಖಿಸಿ ಅಮಿತ್ ಶಾ ಅವರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಂತೆಯೇ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಪತ್ರ ಮುಖೇನ ಧನ್ಯವಾದ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+