ಬೆಂಗಳೂರು, ಜುಲೈ 26: ಕರ್ನಾಟಕ ರಾಜಕೀಯ ಅನಿಶ್ಚಿತತೆ ಇನ್ನೂ ಚಾಲ್ತಿಯಲ್ಲಿರುವಾಗಲೇ ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಲು ಸನದ್ಧರಾಗಿದ್ದಾರೆ.
ಯಡಿಯೂರಪ್ಪ ಹಾಗೂ ಸಂಗಡಿಗರು, ಒಂದು ವರ್ಷ ನಾಲ್ಕು ತಿಂಗಳು ನಡೆಸಿದ ಸತತ ತಂತ್ರದ ಫಲವಾಗಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಪತನವಾಗಿದ್ದು, ಕುಮಾರಸ್ವಾಮಿ ಅವರು ತ್ಯಜಿಸಿರುವ ಮುಖ್ಯಮಂತ್ರಿ ಸ್ಥಾನವನ್ನು ಇಂದು ಸಂಜೆ ಯಡಿಯೂರಪ್ಪ ಅವರು ಅಲಂಕರಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರ ಪರಿಸ್ಥಿತಿಗಿಂತಲೂ ಭಿನ್ನವಾದ ಪರಿಸ್ಥಿತಿಯೇನೂ ಯಡಿಯೂರಪ್ಪ ಅವರಿಗೆ ಇಲ್ಲವೆಂಬುದು ಸ್ಪಷ್ಟ.
ಇಂದು ಬೆಳಿಗ್ಗೆಯಷ್ಟೆ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಬಳಿ ಬಹುಮತವಿದೆಯೆಂದು ಪತ್ರ ನೀಡಿದ್ದರು, ಅದರಂತೆ ಸರ್ಕಾರ ರಚನೆಗೆ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದು, ಇಂದು ಸಂಜೆ 6:30 ಕ್ಕೆ ಯಡಿಯೂರಪ್ಪ ಅವರು ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
2018 ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಮೂರು ದಿನಗಳ ನಂತರ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ದರು. ಇಂದೂ ಸಹ ಹೆಚ್ಚು ಬದಲಾದ ಪರಿಸ್ಥಿತಿಗಳು ಯಡಿಯೂರಪ್ಪ ಅವರಿಗೆ ಇಲ್ಲವಾದರೂ ಆಗಿನದ್ದಿಕ್ಕಿಂತಲೂ ಸ್ವಲ್ಪವೇ ವಾಸಿಯಾದ ಪರಿಸ್ಥಿತಿಗಳಿವೆ.
ಎಲ್ಲವೂ ಅತೃಪ್ತ ಶಾಸಕರು ಹಾಗೂ ಸ್ಪೀಕರ್ ರಮೇಶ್ ಕುಮಾರ್ ಅವರು ತೆಗೆದುಕೊಳ್ಳುವ ನಿರ್ಣಯದ ಮೇಲೆ ನಿಂತಿದೆಯೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದು. ಇಂದು ಯಡಿಯೂರಪ್ಪ ಅವರೇನೋ ಸುಲಭವಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಒಂದು ವಾರದೊಳಗೆ ಬಹುಮತ ಸಾಬೀತು ಮಾಡುವುದು ಅವರಿಗೆ ನಿಜವಾದ ಅಗ್ನಿ ಪರೀಕ್ಷೆ ಆಗಲಿದೆ.
Jul 26, 2019, 7:53 pm IST
ರೈತರ ಸಾಲಮನ್ನಾ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅದರ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದರು.
Jul 26, 2019, 7:52 pm IST
ವಿಧಾನಸಭೆ ಅಧಿವೇಶನವನ್ನು 29 ರ ಸೋಮವಾರದಂದು ಅಧಿವೇಶನ ನಡೆಸಿ ಅಂದೇ ಬಹುಮತ ಅಂದೇ ಬಿಲ್‌ಗೆ ಅನುಮೋದನೆ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.
Jul 26, 2019, 7:51 pm IST
ನೇಕಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
Jul 26, 2019, 7:50 pm IST
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆ ಜೊತೆಗೆ ಎರಡು ಸಾವಿರದಂತೆ ಎರಡು ಕಂತು ಕೊಡುವುದಾಗಿ ಯಡಿಯೂರಪ್ಪ ಅವರ ಘೋಷಣೆ- ಯಡಿಯೂರಪ್ಪ
Jul 26, 2019, 7:48 pm IST
ನಮ್ಮ ಸರ್ಕಾರಕ್ಕೂ ಹಿಂದಿನ ಮೈತ್ರಿಸ ಸರ್ಕಾರಕ್ಕೂ ಇದ್ದ ವ್ಯತ್ಯಾಸ ಏನೆಂದು ನಾಲ್ಕೈದು ತಿಂಗಳಲ್ಲಿಯೇ ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಲಿದ್ದೇವೆ- ಯಡಿಯೂರಪ್ಪ
Jul 26, 2019, 7:46 pm IST
ಮುಖ್ಯಮಂತ್ರಿ ಆಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ನಂತರ ಯಡಿಯೂರಪ್ಪ ಅವರು ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
Jul 26, 2019, 7:23 pm IST
ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆ ಬದಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಸಿದ ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ ಎಂದಿದ್ದ ಚಿತ್ರವನ್ನು ಬದಲಾಯಿಸಿ ಯಡಿಯೂರಪ್ಪ ಅವರ ನಗುಮುಖದ ಚಿತ್ರವನ್ನು ಅಪ್‌ಲೋಡ್ ಮಾಡಲಾಗಿದೆ.
ಸರ್ಕಾರದ ಕಾರ್ಯದರ್ಶಿ ಅವರ ಜೊತೆ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಮೊದಲ ಸಂಪುಟ ಸಭೆ ನಡೆಸಲಿದ್ದಾರೆ. ಕೆಲವು ಮುಖ್ಯ ಸೂಚನೆಗಳನ್ನು ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ನೀಡಲಿದ್ದಾರೆ.
Jul 26, 2019, 7:13 pm IST
ವಿಧಾನಸೌಧದ ಮೂರನೇ ಮಹಡಿಗೆ ಬಂದ ಯಡಿಯೂರಪ್ಪ. ವಿರೋಧ ಪಕ್ಷ ನಾಯಕರ ಕಚೇರಿಯಿಂದ, ಮುಖ್ಯಮಂತ್ರಿಗಳ ಕಚೇರಿಗೆ ಯಡಿಯೂರಪ್ಪ ಅವರ ಸ್ಥಾನ ಬದಲಾಗಿದೆ.
Jul 26, 2019, 7:07 pm IST
ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ವಸನ ಸ್ವೀಕರಿಸುತ್ತಿದ್ದಂತೆ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
Jul 26, 2019, 6:38 pm IST
ರಾಷ್ಟ್ರಗೀತೆ ಗಾಯನದೊಂದಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಪರ್ಯಾವಸನಗೊಂಡಿತು. ನೂತನ ಸಿಎಂ ಯಡಿಯೂರಪ್ಪ ಅವರು ರಾಜಭವನದಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಂಪುಟ ಸಭೆ ನಡೆಸಲಿದ್ದಾರೆ.
Jul 26, 2019, 6:37 pm IST
ಆರು ಗಂಟೆ ಮೂವತ್ತು ನಿಮಿಷಕ್ಕೆ ಯಡಿಯೂರಪ್ಪ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಜ್ಯಪಾಲರು ಹೂಗುಚ್ಛ ನೀಡಿ ಹೊಸ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದಿಸಿದರು. ಯಡಿಯೂರಪ್ಪ ಅವರೂ ಸಹ ರಾಜ್ಯಪಾಲರಿಗೆ ಹೂಗುಚ್ಛ ನೀಡಿದರು.
Jul 26, 2019, 6:35 pm IST
ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಮತ್ತು ಗೌಪ್ಯತಾ ವಿಧಿಯನ್ನು ಬೋಧಿಸಿದರು. ಅಂತೆಯೇ ಯಡಿಯೂರಪ್ಪ ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.
Jul 26, 2019, 6:29 pm IST
ರಾಜ್ಯಪಾಲ ವಜುಭಾಯಿ ವಾಲಾ ಅವರು ಗಾಜಿನ ಮನೆಗೆ ಆಗಮಿಸಿದ್ದಾರೆ. ಇನ್ನು ಕೆಲವೇ ನಿಮಿಷಗಳ್ಲಲಿ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Jul 26, 2019, 6:15 pm IST
ಮಾಜಿ ಸಿಎಂ, ಎಸ್.ಎಂ.ಕೃಷ್ಣ ಅವರು ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರು ಸಹ ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು. ಯಡಿಯೂರಪ್ಪ ಅವರಿಗೆ ಎಸ್.ಎಂ.ಕೃಷ್ಣ ಅವರುಗಳು ಒಂದೇ ಸಾಲಿನಲ್ಲಿ ಕೂತಿದ್ದು, ರಾಜ್ಯಪಾಲರ ಆಗಮನಕ್ಕೆ ಕಾಯುತ್ತಿದ್ದಾರೆ.
Jul 26, 2019, 6:05 pm IST
ತುಮಕೂರು ಕಾಂಗ್ರೆಸ್‌ನ ಮುಖಂಡ ಕೆ.ಎನ್.ರಾಜಣ್ಣ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಯಡಿಯೂರಪ್ಪ ಅವರು ರಾಜಣ್ಣ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ್ದು ಗಮನ ಸೆಳೆಯಿತು.
Jul 26, 2019, 5:57 pm IST
ಯಡಿಯೂರಪ್ಪ ಅವರು ರಾಜಭವನಕ್ಕೆ ಬಿಗಿ ಬಂದೋಬಸ್ತ್ ನಡುವೆ ಆಗಮಿಸಿದ್ದಾರೆ. ಹೆಗಲಿಗೆ ಹಸಿರುವ ಶಾಲು ಹೊದ್ದಿಕೊಂಡು, ರಾಜಭವನದ ಮುಂದೆ ನೆರೆದಿರುವ ಅಭಿಮಾನಿಗಳತ್ತ ಕೈಮುಗಿಯುತ್ತಾ ಅವರು ರಾಜಭವನದ ಒಳಗೆ ತೆರಳಿದರು.
Jul 26, 2019, 5:42 pm IST
ಸಂಸದೆ, ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಶೋಭಾ ಕರಂದ್ಲಾಜೆ ಅವರು ರಾಜಭವನಕ್ಕೆ ಆಗಮಿಸಿದ್ದಾರೆ. ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಈಶ್ವರಪ್ಪ, ಇನ್ನೂ ಹಲವು ಪ್ರಮುಖ ಬಿಜೆಪಿ ಮುಖಂಡರು ರಾಜಭವನಕ್ಕೆ ಆಗಮಿಸಿದ್ದಾರೆ.
Jul 26, 2019, 5:24 pm IST
ಪ್ರಮಾಣವಚನ ಕಾರ್ಯಕ್ರಮ ನಡೆಯುವ ರಾಜಭವನದ ಗಾಜಿನ ಮನೆಯಲ್ಲಿ ಈಗಾಗಲೇ ಗಣ್ಯರು ಸೇರಲಾರಂಭಿಸಿದ್ದು, ರೋಷನ್ ಬೇಗ್ ಅವರು ಎಲ್ಲ ಬಿಜೆಪಿ ನಾಯಕರನ್ನು ಕೈ ಕುಲುಕಿ ಮಾತನಾಡಿಸುತ್ತಾ ಚುರುಕಾಗಿ ಓಡಾಡುತ್ತಿರುವುದು ಗಮನ ಸೆಳೆಯುತ್ತಿದೆ.
Jul 26, 2019, 5:22 pm IST
ಚುನಾವಣೆಯಲ್ಲಿ ಪರಸ್ಪರ ಕಚ್ಚಾಡಿಕೊಂಡಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಕಾಂಗ್ರೆಸ್‌ನಿಂದ ಅಮಾನತ್ತಾಗಿರುವ ರೋಷನ್ ಬೇಗ್ ಅವರು ಒಟ್ಟಿಗೆ ಕಾಣಿಸಿಕೊಂಡರು. ರಾಜಭವನದಲ್ಲಿ ಇಬ್ಬರೂ ಕುಶಲೋಪರಿ ವಿಚಾರಿಸಿಕೊಂಡರಲ್ಲದೆ, ಜೊತೆಗೆ ನಿಂತು ಕ್ಯಾಮೆರಾಕ್ಕೆ ಫೋಸು ನೀಡಿದರು.
Jul 26, 2019, 5:12 pm IST
ಜುಲೈ ತಿಂಗಳಲ್ಲಿ ಅನುಮೋದನೆಗೊಂಡಿರುವ ಎಲ್ಲ ಹೊಸ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ನಿಯೋಜಿತ ಸಿಎಂ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಅವರು ಎಲ್ಲ ಅಧಿಕಾರಿಗಳಿಗೆ ಜುಲೈ ತಿಂಗಳಲ್ಲಿ ಅನುಮೋದನೆ ನೀಡಿರುವ ಕಾಮಗಾರಿಯನ್ನು ಪ್ರಾರಂಭ ಮಾಡದಂತೆ ಸೂಚನೆ ನೀಡಿದ್ದಾರೆ.
Jul 26, 2019, 5:11 pm IST
ಯಡಿಯೂರಪ್ಪ ಅವರು ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
Jul 26, 2019, 5:05 pm IST
ಕರ್ನಾಟಕ ಬಿಜೆಪಿ ಕಚೇರಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ಅಭಿಮಾನಿಗಳು ಭಾಗವಹಿಸಿದ್ದರು.
Jul 26, 2019, 5:03 pm IST
ರಾಷ್ಟ್ರೀಯ ಬಿಜೆಪಿಯಿಂದ ಬಿ.ಎಲ್.ಸಂತೋಶ್ ಅವರು ಆಗಮಿಸಿದ್ದಾರೆ. ಕೇಂದ್ರದಲ್ಲಿ ಮೋದಿ ಅವರ ಸರ್ಕಾರವಿದ್ದು, ನಾವು-ಅವರೂ ಸಹಭಾಗಿತ್ವದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಹೇಗೆ ಮಾಡಬಹುದೆಂದು ಈ ಹಿಂದೆಯೇ ನಾವು ತಿಳಿಸಿದ್ದೇವೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ, ನಮಗೆ ನಿಮ್ಮೆಲ್ಲರ ಆಶೀರ್ವಾದ ಮಾಡಬೇಕು ಎಂದು ಯಡಿಯೂರಪ್ಪ ಅವರು ಹೇಳಿದರು.
Jul 26, 2019, 5:02 pm IST
ಸಂಜೆ ಪ್ರಮಾಣ ವಚನ ಸ್ವೀಕಾರದ ನಂತರ ಏಳು ಗಂಟೆಗೆ ಸಂಪುಟ ಸಭೆ ಇದೆ, ರಾಜ್ಯದ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಇಂದಿನಿಂದಲೇ ತೆಗೆದುಕೊಳ್ಳುತ್ತೇನೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಎಂದು ಯಡಿಯೂರಪ್ಪ ಹೇಳಿದರು.
Jul 26, 2019, 5:01 pm IST
ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ದ್ವೇಷ ರಾಜಕೀಯ ಮಾಡದೆ, ಒಟ್ಟಾಗಿ ಕೆಲವ ಮಾಡುತ್ತೇವೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
Jul 26, 2019, 5:00 pm IST
ಮಲ್ಲೇಶ್ವರ್ದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಯಡಿಯೂರಪ್ಪ ಅವರು ಮಾತನಾಡುತ್ತಿದ್ದಾರೆ.
5:00 PM, 26 Jul
ಮಲ್ಲೇಶ್ವರ್ದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಯಡಿಯೂರಪ್ಪ ಅವರು ಮಾತನಾಡುತ್ತಿದ್ದಾರೆ.
5:01 PM, 26 Jul
ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ದ್ವೇಷ ರಾಜಕೀಯ ಮಾಡದೆ, ಒಟ್ಟಾಗಿ ಕೆಲವ ಮಾಡುತ್ತೇವೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
5:02 PM, 26 Jul
ಸಂಜೆ ಪ್ರಮಾಣ ವಚನ ಸ್ವೀಕಾರದ ನಂತರ ಏಳು ಗಂಟೆಗೆ ಸಂಪುಟ ಸಭೆ ಇದೆ, ರಾಜ್ಯದ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಇಂದಿನಿಂದಲೇ ತೆಗೆದುಕೊಳ್ಳುತ್ತೇನೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಎಂದು ಯಡಿಯೂರಪ್ಪ ಹೇಳಿದರು.
5:03 PM, 26 Jul
ರಾಷ್ಟ್ರೀಯ ಬಿಜೆಪಿಯಿಂದ ಬಿ.ಎಲ್.ಸಂತೋಶ್ ಅವರು ಆಗಮಿಸಿದ್ದಾರೆ. ಕೇಂದ್ರದಲ್ಲಿ ಮೋದಿ ಅವರ ಸರ್ಕಾರವಿದ್ದು, ನಾವು-ಅವರೂ ಸಹಭಾಗಿತ್ವದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಹೇಗೆ ಮಾಡಬಹುದೆಂದು ಈ ಹಿಂದೆಯೇ ನಾವು ತಿಳಿಸಿದ್ದೇವೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ, ನಮಗೆ ನಿಮ್ಮೆಲ್ಲರ ಆಶೀರ್ವಾದ ಮಾಡಬೇಕು ಎಂದು ಯಡಿಯೂರಪ್ಪ ಅವರು ಹೇಳಿದರು.
5:05 PM, 26 Jul
ಕರ್ನಾಟಕ ಬಿಜೆಪಿ ಕಚೇರಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ಅಭಿಮಾನಿಗಳು ಭಾಗವಹಿಸಿದ್ದರು.
5:11 PM, 26 Jul
ಯಡಿಯೂರಪ್ಪ ಅವರು ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
5:12 PM, 26 Jul
ಜುಲೈ ತಿಂಗಳಲ್ಲಿ ಅನುಮೋದನೆಗೊಂಡಿರುವ ಎಲ್ಲ ಹೊಸ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ನಿಯೋಜಿತ ಸಿಎಂ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಅವರು ಎಲ್ಲ ಅಧಿಕಾರಿಗಳಿಗೆ ಜುಲೈ ತಿಂಗಳಲ್ಲಿ ಅನುಮೋದನೆ ನೀಡಿರುವ ಕಾಮಗಾರಿಯನ್ನು ಪ್ರಾರಂಭ ಮಾಡದಂತೆ ಸೂಚನೆ ನೀಡಿದ್ದಾರೆ.
5:22 PM, 26 Jul
ಚುನಾವಣೆಯಲ್ಲಿ ಪರಸ್ಪರ ಕಚ್ಚಾಡಿಕೊಂಡಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಕಾಂಗ್ರೆಸ್‌ನಿಂದ ಅಮಾನತ್ತಾಗಿರುವ ರೋಷನ್ ಬೇಗ್ ಅವರು ಒಟ್ಟಿಗೆ ಕಾಣಿಸಿಕೊಂಡರು. ರಾಜಭವನದಲ್ಲಿ ಇಬ್ಬರೂ ಕುಶಲೋಪರಿ ವಿಚಾರಿಸಿಕೊಂಡರಲ್ಲದೆ, ಜೊತೆಗೆ ನಿಂತು ಕ್ಯಾಮೆರಾಕ್ಕೆ ಫೋಸು ನೀಡಿದರು.
5:24 PM, 26 Jul
ಪ್ರಮಾಣವಚನ ಕಾರ್ಯಕ್ರಮ ನಡೆಯುವ ರಾಜಭವನದ ಗಾಜಿನ ಮನೆಯಲ್ಲಿ ಈಗಾಗಲೇ ಗಣ್ಯರು ಸೇರಲಾರಂಭಿಸಿದ್ದು, ರೋಷನ್ ಬೇಗ್ ಅವರು ಎಲ್ಲ ಬಿಜೆಪಿ ನಾಯಕರನ್ನು ಕೈ ಕುಲುಕಿ ಮಾತನಾಡಿಸುತ್ತಾ ಚುರುಕಾಗಿ ಓಡಾಡುತ್ತಿರುವುದು ಗಮನ ಸೆಳೆಯುತ್ತಿದೆ.
5:42 PM, 26 Jul
ಸಂಸದೆ, ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಶೋಭಾ ಕರಂದ್ಲಾಜೆ ಅವರು ರಾಜಭವನಕ್ಕೆ ಆಗಮಿಸಿದ್ದಾರೆ. ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಈಶ್ವರಪ್ಪ, ಇನ್ನೂ ಹಲವು ಪ್ರಮುಖ ಬಿಜೆಪಿ ಮುಖಂಡರು ರಾಜಭವನಕ್ಕೆ ಆಗಮಿಸಿದ್ದಾರೆ.
5:57 PM, 26 Jul
ಯಡಿಯೂರಪ್ಪ ಅವರು ರಾಜಭವನಕ್ಕೆ ಬಿಗಿ ಬಂದೋಬಸ್ತ್ ನಡುವೆ ಆಗಮಿಸಿದ್ದಾರೆ. ಹೆಗಲಿಗೆ ಹಸಿರುವ ಶಾಲು ಹೊದ್ದಿಕೊಂಡು, ರಾಜಭವನದ ಮುಂದೆ ನೆರೆದಿರುವ ಅಭಿಮಾನಿಗಳತ್ತ ಕೈಮುಗಿಯುತ್ತಾ ಅವರು ರಾಜಭವನದ ಒಳಗೆ ತೆರಳಿದರು.
6:05 PM, 26 Jul
ತುಮಕೂರು ಕಾಂಗ್ರೆಸ್‌ನ ಮುಖಂಡ ಕೆ.ಎನ್.ರಾಜಣ್ಣ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಯಡಿಯೂರಪ್ಪ ಅವರು ರಾಜಣ್ಣ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ್ದು ಗಮನ ಸೆಳೆಯಿತು.
6:15 PM, 26 Jul
ಮಾಜಿ ಸಿಎಂ, ಎಸ್.ಎಂ.ಕೃಷ್ಣ ಅವರು ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರು ಸಹ ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು. ಯಡಿಯೂರಪ್ಪ ಅವರಿಗೆ ಎಸ್.ಎಂ.ಕೃಷ್ಣ ಅವರುಗಳು ಒಂದೇ ಸಾಲಿನಲ್ಲಿ ಕೂತಿದ್ದು, ರಾಜ್ಯಪಾಲರ ಆಗಮನಕ್ಕೆ ಕಾಯುತ್ತಿದ್ದಾರೆ.
6:29 PM, 26 Jul
ರಾಜ್ಯಪಾಲ ವಜುಭಾಯಿ ವಾಲಾ ಅವರು ಗಾಜಿನ ಮನೆಗೆ ಆಗಮಿಸಿದ್ದಾರೆ. ಇನ್ನು ಕೆಲವೇ ನಿಮಿಷಗಳ್ಲಲಿ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
6:35 PM, 26 Jul
ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಮತ್ತು ಗೌಪ್ಯತಾ ವಿಧಿಯನ್ನು ಬೋಧಿಸಿದರು. ಅಂತೆಯೇ ಯಡಿಯೂರಪ್ಪ ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.
6:37 PM, 26 Jul
ಆರು ಗಂಟೆ ಮೂವತ್ತು ನಿಮಿಷಕ್ಕೆ ಯಡಿಯೂರಪ್ಪ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಜ್ಯಪಾಲರು ಹೂಗುಚ್ಛ ನೀಡಿ ಹೊಸ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದಿಸಿದರು. ಯಡಿಯೂರಪ್ಪ ಅವರೂ ಸಹ ರಾಜ್ಯಪಾಲರಿಗೆ ಹೂಗುಚ್ಛ ನೀಡಿದರು.
6:38 PM, 26 Jul
ರಾಷ್ಟ್ರಗೀತೆ ಗಾಯನದೊಂದಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಪರ್ಯಾವಸನಗೊಂಡಿತು. ನೂತನ ಸಿಎಂ ಯಡಿಯೂರಪ್ಪ ಅವರು ರಾಜಭವನದಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಂಪುಟ ಸಭೆ ನಡೆಸಲಿದ್ದಾರೆ.
7:07 PM, 26 Jul
ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ವಸನ ಸ್ವೀಕರಿಸುತ್ತಿದ್ದಂತೆ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
7:13 PM, 26 Jul
ವಿಧಾನಸೌಧದ ಮೂರನೇ ಮಹಡಿಗೆ ಬಂದ ಯಡಿಯೂರಪ್ಪ. ವಿರೋಧ ಪಕ್ಷ ನಾಯಕರ ಕಚೇರಿಯಿಂದ, ಮುಖ್ಯಮಂತ್ರಿಗಳ ಕಚೇರಿಗೆ ಯಡಿಯೂರಪ್ಪ ಅವರ ಸ್ಥಾನ ಬದಲಾಗಿದೆ.
7:14 PM, 26 Jul
ಸರ್ಕಾರದ ಕಾರ್ಯದರ್ಶಿ ಅವರ ಜೊತೆ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಮೊದಲ ಸಂಪುಟ ಸಭೆ ನಡೆಸಲಿದ್ದಾರೆ. ಕೆಲವು ಮುಖ್ಯ ಸೂಚನೆಗಳನ್ನು ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ನೀಡಲಿದ್ದಾರೆ.
7:23 PM, 26 Jul