ಸಿದ್ದರಾಮಯ್ಯ ಯೋಜನೆಗಳಿಗೆ ಯಡಿಯೂರಪ್ಪ ಕತ್ತರಿ

Recommended Video

      ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಸಿಎಂ..! ಸಿದ್ದು ಫುಲ್ ಗರಂ..?

      ಬೆಂಗಳೂರು, ಆಗಸ್ಟ್ 17: ಸಿದ್ದರಾಮಯ್ಯ ಸರ್ಕಾರ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಕೆಲವು ಯೋಜನೆಗಳಿಗೆ ಪ್ರಸ್ತುತ ಯಡಿಯೂರಪ್ಪ ಅವರ ಸರ್ಕಾರ ಕತ್ತರಿ ಹಾಕುವ ಮುನ್ಸೂಚನೆ ನೀಡಿದ್ದಾರೆ. ಇದಕ್ಕೆ ಕಾಂಗ್ರೆಸ್‌ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

      ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನೀಡಿದ್ದ ಜನಪ್ರಿಯ ಅನ್ನಭಾಗ್ಯ ಯೋಜನೆ, ಶಾದಿ ಭಾಗ್ಯ ಯೋಜನೆ ಹಾಗೂ ಇನ್ನೂ ಕೆಲವು ಯೋಜನೆಗಳಿಗೆ ಕತ್ತರಿ ಬೀಳಲಿದೆ.

      ಯಡಿಯೂರಪ್ಪ ಅವರು ಸಿಎಂ ಆದ ಕೂಡಲೇ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್' ಯೋಜನೆ ಮೂಲಕ ಕೇಂದ್ರವಯ ರೈತರಿಗೆ ನೀಡುತ್ತಿರುವ ವಾರ್ಷಿಕ ಆರು ಸಾವಿರ ಹಣಕ್ಕೆ ರಾಜ್ಯವು ನಾಲ್ಕು ಸಾವಿರ ಹಣ ಸೇರಿಸಿ ರೈತರಿಗೆ ನೀಡುವುದಾಗಿ ಘೊಷಿಸಿದ್ದರು. ಈ ಯೋಜನೆಗೆ ಹೆಚ್ಚುವರಿ 2200 ಕೋಟಿ ಅಗತ್ಯವಿದೆ. ಈ ಯೋಜನೆಗೆ ಹಣ ಹೊಂದಿಸಲು ಹಳೆಯ ಜನಪ್ರಿಯ ಯೋಜನೆಗಳಿಗೆ ಕತ್ತರಿ ಪ್ರಯೋಗದ ಬಗ್ಗೆ ಯಡಿಯೂರಪ್ಪ ನಿಶ್ಚಯಿಸಿದ್ದಾರೆ.

      ಅನ್ನಭಾಗ್ಯ ಯೋಜನೆಯ ಮೂಲಕ ನೀಡಲಾಗುತ್ತಿರುವ ಹೆಚ್ಚುವರಿ 2 ಕೆ.ಜಿ ಅಕ್ಕಿ, ಒಂದು ಕೆ.ಜಿ. ತೊಗರಿ ಬೇಳೆಯನ್ನು ಸ್ಥಗಿತಗೊಳಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಹೆಚ್ಚುವರಿ ನೀಡಲಾಗುತ್ತಿರುವ ಅಕ್ಕಿ, ಬೇಳೆಯನ್ನು ಸ್ಥಗಿತಗೊಳಿಸಿದರೆ 2800 ಕೋಟಿ ಉಳಿತಾಯವಾಗಲಿದೆ.

      ಶಾದಿ ಭಾಗ್ಯೂಕ್ಕೂ ಕತ್ತರಿ?

      ಶಾದಿ ಭಾಗ್ಯೂಕ್ಕೂ ಕತ್ತರಿ?

      ಶಾದಿ ಭಾಗ್ಯಕ್ಕೂ ಕತ್ತರಿ ಹಾಕಲು ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಯೋಜನೆಯು ಸಿದ್ದರಾಮಯ್ಯ ಅವರ ಯೋಜನೆಯಾಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ ಹಣ ನೀಡುವ ಯೋಜನೆ ಇದಾಗಿದೆ. ಎಲ್ಲ ಜಾತಿ, ಧರ್ಮದವರಿಗೂ ಶಾಧಿ ಭಾಗ್ಯ ಜಾರಿಯಾಗಲಿ ಎಂದು ಯಡಿಯೂರಪ್ಪ ಈ ಹಿಂದೆ ಒತ್ತಾಯಿಸಿದ್ದರು.

      ಇಂದಿರಾ ಕ್ಯಾಂಟೀನ್ ಹೆಸರು ಬದಲು?

      ಇಂದಿರಾ ಕ್ಯಾಂಟೀನ್ ಹೆಸರು ಬದಲು?

      ಇಂದಿರಾ ಕ್ಯಾಂಟೀನ್ ನ ಹೆಸರು ಬದಲಾಯಿಸಲು ಸಹ ಈಗಾಗಲೇ ಯಡಿಯೂರಪ್ಪ ಅವರಿಗೆ ಪ್ರಸ್ತಾಪ ಬಂದಿದ್ದು, ಅದರಂತೆ ಇಂದಿರಾ ಕ್ಯಾಂಟೀನ್ ಅನ್ನು 'ಅನ್ನಪೂರ್ಣ ಕ್ಯಾಂಟೀನ್' ಎಂದು ಮರುನಾಮಕರಣ ಮಾಡಲು ಯಡಿಯೂರಪ್ಪ ಅವರು ನಿರ್ಧರಿಸಲಿದ್ದಾರೆ.

      ಕೃಷಿ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಗೆ ಕೊಕ್ಕೆ?

      ಕೃಷಿ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಗೆ ಕೊಕ್ಕೆ?

      ಕೃಷಿ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಲು ಪ್ರಸ್ತಾಪಿಸಲಾಗಿದ್ದು, ಅದಿನ್ನೂ ಯೋಜನೆಯ ಹಂತದಲ್ಲಿದೆ. ಅದನ್ನೂ ನಿಲ್ಲಿಸಿ ಅದರಿಂದ 500 ಕೋಟಿ ರೂಪಾಯಿ ಉಳಿತಾಯ ಮಾಡುವ ಯೋಜನೆಯೂ ಯಡಿಯೂರಪ್ಪ ಅವರಿಗೆ ಇದೆ ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಸಿದ್ದರಾಮಯ್ಯ ಅವರು ನೀಡಿದ್ದ ಭರಪೂರ ಯೋಜನೆಗಳಲ್ಲಿ ಕೆಲವಕ್ಕೆ ಕೊಕ್ಕೆ ಹಾಕಲು ಸಹ ಚರ್ಚೆ ನಡೆದಿದೆ.

      ಹೋರಾಟದ ಎಚ್ಚರಿಕೆ ನೀಡಿದ್ದ ಸಿದ್ದರಾಮಯ್ಯ

      ಹೋರಾಟದ ಎಚ್ಚರಿಕೆ ನೀಡಿದ್ದ ಸಿದ್ದರಾಮಯ್ಯ

      ತಮ್ಮ ಅವಧಿಯ ಯೋಜನೆಗಳಿಗೆ ಕತ್ತರಿ ಹಾಕುವ ಯಡಿಯೂರಪ್ಪ ಅವರ ನಿರ್ಧಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮ್ಮ ಸರ್ಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ಈಗಿನ ಸರ್ಕಾರ ರದ್ದುಪಡಿಸುವ, ನಿರ್ಲಕ್ಷಿಸುವ ದುರಾಲೋಚನೆ ಮಾಡಿದರೆ ರಾಜ್ಯದ ಬಡಜನತೆ ದಂಗೆ ಏಳಬಹುದು,ಎಚ್ಚರ ಇರಲಿ. ಇಂತಹ ಜನವಿರೋಧಿ ನಿಲುವುಗಳನ್ನು ನಾವು ಸಹಿಸಿಕೊಳ್ಳುವವರಲ್ಲ, ಹೋರಾಟದ ಮೂಲಕ ಉತ್ತರ ನೀಡಬೇಕಾಗುತ್ತದೆ' ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+