Get Updates
Get notified of breaking news, exclusive insights, and must-see stories!

ಮೌನ ಮುರಿದ ಯಡಿಯೂರಪ್ಪ, 'ಲಿಂಗಾಯತ ಧರ್ಮ' ಚುನಾವಣಾ ಗಿಮಿಕ್

Recommended Video

      ಲಿಂಗಾಯತರ ಬಗೆಗಿನ ಸಿದ್ದು ನಿರ್ಧಾರದ ಬಗ್ಗೆ ಕೊನೆಗೂ ಮೌನ ಮುರಿದು ಮಾತಾಡಿದ ಯಡ್ಡಿ | Oneindia Kannada

      ಬೆಂಗಳೂರು, ಮಾರ್ಚ್ 22: ರಾಜ್ಯ ಸರಕಾರ ವೀರಶೈವ-ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ಕೋರಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು 'ಚುನಾವಣಾ ಗಿಮಿಕ್' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಪ್ರತ್ಯೇಕ ಧರ್ಮದ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಅವರು ಸಿಎಂ ಸಿದ್ದರಾಮಯ್ಯ ಜನರ ಭಾವನಾತ್ಮಕ ವಿಚಾ಻ರಗಳನ್ನು ಇಟ್ಟುಕೊಂಡು ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

      ಈ ಹಿಂದೆ ಯುಪಿಎ ಸರಕಾರವೇ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ನಿರಾಕರಿಸಿರುವಾಗ ಈಗ ಈ ವಿಚಾರವನ್ನು ಕೈಗೆತ್ತಿಕೊಳ್ಳುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

      Yeddyurappa breaks silence, says religious minority tag to Lingayat election gimmick

      "ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಜನರನ್ನು ಒಡೆಯುತ್ತಿದ್ದಾರೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನ ಮಾನ ನೀಡಲು ಹೊರಟಿರುವುದು ಚುನಾವಣಾ ಗಿಮಿಕ್. ಇದು ಜನರನ್ನು ಹಾದಿ ತಪ್ಪಿಸುವ ಯತ್ನ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

      "ಹಲವು ಸಮುದಾಯಗಳು ಬೇರೆ ಬೇರೆ ಬೇಡಿಕೆಗಳನ್ನು ಹೊಂದಿವೆ. ಎಲ್ಲವನ್ನೂ ಪೂರೈಸಲು ಸಾಧ್ಯವಿದೆಯೇ? ನಿಮ್ಮ ಉದ್ದೇಶ ಏನು? ವಿವಿಧ ಜಾತಿಗಳ ನಡುವಿನ ದ್ವೇಷದ ಬೀಜ ಬಿತ್ತುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ? ನಿಮಗೆ ನಿಜವಾಗಿಯೂ ಕಾಳಜಿಯಿದ್ದರೆ, ವೀರಶೈವ ಮಹಾಸಭಾದ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ ಎಂದು ನೀವು ಹೇಳಬಹುದಾಗಿತ್ತು," ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

      "ರಾಜಕೀಯ ಲಾಭಕ್ಕಾಗಿ ತೀರಾ ಕೆಳಮಟ್ಟಕ್ಕೆ ಹೇಗೆ ಹೋಗಬಹುದು ಎನ್ನುವುದಕ್ಕೆ ಸಿದ್ದರಾಮಯ್ಯ ಒಂದು ಉದಾಹರಣೆ," ಎಂದು ಯಡಿಯೂರಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+