ಸಿದ್ದು, ಎಚ್ಡಿಕೆ ಬಿಟ್ಟು ಬಿಎಸ್‌ವೈ ಪರ ಒಲವು ತೋರಿದ ಓದುಗರು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 18 : ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಮುಂದಿನ ಚುನಾವಣೆಯ ನಂತರ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಆರಂಭವಾಗಿದೆ. ಬಿಜೆಪಿ ನಾಯಕರು ಬಿಎಸ್‌ವೈ ಅವರು ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಮೊದಲು ಚುನಾವಣೆ ಗೆಲ್ಲಿ ಎಂದು ತಿರುಗೇಟು ನೀಡಿದ್ದಾರೆ.

ಒನ್ ಇಂಡಿಯಾ ಕನ್ನಡ 'ಇವರಿಬ್ಬರಲ್ಲಿ ಮುಂದಿನ ಮುಖ್ಯಮಂತ್ರಿಯಾಗಲು ಯಾರು ಅರ್ಹರು?' ಎಂಬ ಪ್ರಶ್ನೆ ಕೇಳಿತ್ತು. ನಮ್ಮ ಓದುಗರು ಯಡಿಯೂರಪ್ಪ ಅವರೇ ಮುಂದಿನ ಸಿಎಂ ಎಂದು ಮತ ಹಾಕಿದ್ದಾರೆ. ಮತದಾನ ಮಾಡಿದ ಓದುಗರಿಗೆ ಧನ್ಯವಾದಗಳು.[ನೀವು ಮತ ಹಾಕಿ]

4 ಆಯ್ಕೆಗಳನ್ನು ಓದುಗರಿಗೆ ನೀಡಲಾಗಿತ್ತು. ಇವುಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಂದು ಶೇ 65ರಷ್ಟು ಜನರು ಹೇಳಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ಇವರಿಬ್ಬರೂ ಮುಂದಿನ ಮುಖ್ಯಮಂತ್ರಿಯಲ್ಲ ಎಂದು ಶೇ 16ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. [ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]

ಏಪ್ರಿಲ್ 8ರಂದು ರಾಜ್ಯ ಬಿಜೆಪಿ ಕಚೇರಿ ಮುಂದೆ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರು, 'ಇಂದು ಯುಗಾದಿಯಲ್ಲ, ದೀಪಾವಳಿ. ಯಡಿಯೂರಪ್ಪ ಅವರು, 4ನಾಲ್ಕನೇ ಬಾರಿ ಅಧ್ಯಕ್ಷರಾಗಿ ಬೌಂಡರಿ ಹೊಡೆದಿದ್ದಾರೆ. 2018ರಲ್ಲಿ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ' ಎಂದು ಹೇಳಿದ್ದರು. ಚಿತ್ರಗಳಲ್ಲಿ ನೋಡಿ ಸಮೀಕ್ಷೆ ವಿವರಗಳು...[ಯಡಿಯೂರಪ್ಪ : ಶಿಕಾರಿಪುರ ಜನಸಂಘದಿಂದ ಬಿಜೆಪಿ ಗದ್ದುಗೆ ತನಕ]

ಯಡಿಯೂರಪ್ಪ ಮುಂದಿನ ಸಿಎಂ

ಯಡಿಯೂರಪ್ಪ ಮುಂದಿನ ಸಿಎಂ

ಒನ್ ಇಂಡಿಯಾ ಕನ್ನಡ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆ ಕೇಳಿತ್ತು. ಇದುವರೆಗೂ 3,200 ಮತಗಳು ಬಂದಿದ್ದು, ಯಡಿಯೂರಪ್ಪ ಅವರ ಪರವಾಗಿ ಹೆಚ್ಚು ಮತಗಳು ಬಂದಿವೆ.

ನೀಡಲಾಗಿದ್ದ ಆಯ್ಕೆಗಳು

ನೀಡಲಾಗಿದ್ದ ಆಯ್ಕೆಗಳು

ಇವರಿಬ್ಬರಲ್ಲಿ ಮುಂದಿನ ಮುಖ್ಯಮಂತ್ರಿಯಾಗಲು ಯಾರು ಅರ್ಹರು?
ಯಡಿಯೂರಪ್ಪ
ಸಿದ್ದರಾಮಯ್ಯ
ಇಬ್ಬರು ಅರ್ಹರಲ್ಲ
ಇಬ್ರೂ ಅಲ್ಲ ಎಚ್ಡಿಕೆ

ಯಡಿಯೂರಪ್ಪ ಪಡೆದ ಮತಗಳ ವಿವರ

ಯಡಿಯೂರಪ್ಪ ಪಡೆದ ಮತಗಳ ವಿವರ

ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ 2065 ಮತಗಳು ಬಂದಿವೆ. ಶೇ 65ರಷ್ಟು ಜನರು ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ಮತ ಹಾಕಿದ್ದಾರೆ.

ಸಿದ್ದರಾಮಯ್ಯ ಗಳಿಸಿದ ಮತ 271

ಸಿದ್ದರಾಮಯ್ಯ ಗಳಿಸಿದ ಮತ 271

ಹಾಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು 271 ಮತಗಳನ್ನು ಗಳಿಸಿದ್ದು, ಶೇ 9ರಷ್ಟು ಜನರು ಮಾತ್ರ 2018ರ ಚುನಾವಣೆ ಬಳಿಕವೂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.

ಇಬ್ಬರು ಅರ್ಹರಲ್ಲ ಅಂದ್ರು ಓದುಗರು

ಇಬ್ಬರು ಅರ್ಹರಲ್ಲ ಅಂದ್ರು ಓದುಗರು

ಶೇ 16ರಷ್ಟು ಜನರು ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರೂ ಮುಂದಿನ ಮುಖ್ಯಮಂತ್ರಿಯಾಗಲು ಅರ್ಹರಲ್ಲ ಎಂದು ಮತ ಹಾಕಿದ್ದಾರೆ. ಇಬ್ಬರು ಅರ್ಹರಲ್ಲ ಎಂದು 525 ಮತಗಳು ಚಲಾವಣೆಯಾಗಿದ್ದು, ಹಾಗಾದರೆ ಸಿಎಂ ಯಾರು? ಎಂಬ ಪ್ರಶ್ನೆಗೆ ಚುನಾವಣೆ ಮುಗಿದ ಬಳಿಕ ಉತ್ತರ ದೊರೆಯಲಿದೆ.

ಕುಮಾರಸ್ವಾಮಿ ಅವರು ಸಿಎಂ ಆಗಲಿದ್ದಾರೆ

ಕುಮಾರಸ್ವಾಮಿ ಅವರು ಸಿಎಂ ಆಗಲಿದ್ದಾರೆ

ಶನಿವಾರ ಮೈಸೂರಿನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 2018ರ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದೆ. ನಮ್ಮ 339 ಓದುಗರು ಸಹ ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿ ಎಂದು ಮತ ಹಾಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
B.S.Yeddyurappa better for Karnataka Chief Minister post than Siddaramaiah says poll survey results. Survey conducted by kannada.oneindia.com
Please Wait while comments are loading...