ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ ಜಿಲ್ಲೆಯ ಕೆರೆ ಅಭಿವೃದ್ಧಿಗೆ ಯಶ್ -ರಾಧಿಕಾರಿಂದ ಚಾಲನೆ

ಯಶೋಮಾರ್ಗ ಸಂಸ್ಥೆ ಮೂಲಕ ಉತ್ತರ ಕರ್ನಾಟಕದ ಈಗಾಗಲೇ ಒಂದು ಹಂತದ ಯೋಜನೆ ಪೂರೈಸಲಾಗಿದೆ. ಕಲಬುರಗಿ, ರಾಯಚೂರು ಜಿಲ್ಲೆಗಳ 50 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

By Mahesh
|
Google Oneindia Kannada News

ನನ್ನ ಕಣ್ಮುಂದೆಯೇ ಲಕ್ಷಾಂತರ ಮಂದಿ ಹಸಿವೆಯಿಂದ ಬಳಲುವುದನ್ನು, ಜೀವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುವುದನ್ನು, ಬಿಸಿಲ ಬೇಗೆಯಲ್ಲಿ ಒಣಗುವುದನ್ನು ನಾನು ನೋಡಿದ್ದೇನೆ. ಅವರ ಕಷ್ಟಗಳನ್ನು ನೀಗಿಸುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ಸಹೃದಯರು ಶ್ರಮಿಸುತ್ತಿದ್ದಾರೆ. ಅದು ಕೇವಲ ಸರ್ಕಾರದ ಕರ್ತವ್ಯ ಅಂತ ಕೈ ಕಟ್ಟಿ ಕೂರುವುದು ಸರಿ ಅಂತ ನನಗೇಕೋ ಅನ್ನಿಸುತ್ತಿಲ್ಲ. ಹೀಗಾಗಿ ನನ್ನ ಕೈಲಾದ್ದನ್ನು ಮಾಡುವುದಕ್ಕೆ ಮುಂದಾಗಿದ್ದೇನೆ- ಯಶ್

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ ಕೆರೆ ಅಭಿವೃದ್ಧಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಂಗಳವಾರ ಚಾಲನೆ ನೀಡಿದರು.[ಯಶೋಮಾರ್ಗದ ಬಗ್ಗೆ ಓದಿ]

Yash and Radhika launch Rejuvenation of Talloor Lake Koppal
ನಾನು ಯಾರನ್ನು ದೂಷಿಸುವುದಿಲ್ಲ. ಕೆರೆ ಅಭಿವೃದ್ಧಿಗೆ ಕೋಟ್ಯಂತರ ರೂ. ಸರ್ಕಾರದಿಂದ ಅನುದಾನ ಬರುತ್ತದೆ. ಆ ಅನುದಾನದ ಹಣ ಏನಾಯ್ತು? ಎಂದು ಪ್ರಶ್ನಿಸುವ ಮನಸ್ಸು ಎಲ್ಲರಿಗೂ ಬರಬೇಕು. ಯಾವುದೇ ಸರ್ಕಾರವನ್ನು ದೂಷಿಸುತ್ತಿಲ್ಲ. ಬದಲಾಗಿ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇನೆ. ಯಾರು ಏನೇ ಅಂದುಕೊಂಡರು ತಲೆಕೆಡಿಸಿಕೊಳ್ಳುವುದಿಲ್ಲ. ಕೆರೆ ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ ಎಂದರು.

ವೃಕ್ಷಾಥೋನ್ ನಲ್ಲಿ ಯಶ್ ರವರು ಭಾಗವಹಿಸಿ ಶಿರಾ,ಚಿತ್ರದುರ್ಗ,ದಾವಣಗೆರೆ, ಹುಬ್ಬಳ್ಳಿ,ಹಾವೇರಿ,ಬೆಳಗಾವಿ, ವಿಜಾಪುರ,ಜೆವರ್ಗಿ, ಬೀದರ್, ಕಲಬುರಗಿ ,ಕೊಪ್ಪಳ,ಗುಲಬರ್ಗಾ, ರಾಯಚೂರಿಗೆ ಬೇಟಿ ನೀಡಿ ಉತ್ತರ ಕರ್ನಾಟಕದ 400ಗ್ರಾಮಗಳಿಗೆ ಕುಡಿಯುವ ನೀರು ವ್ಯವಸ್ಥೆ ಮಾಡುತ್ತಿದ್ದಾರೆೆ. ರಾಜ್ಯಾದ್ಯಂತ ಕೆರೆ ಅಭಿವೃದ್ಧಿ ಮಾಡುವುದು ನನ್ನ ಕನಸು. ಇದಕ್ಕಾಗಿ ತಲ್ಲೂರು ಕೆರೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿದ್ದೇನೆ. ಈ ಕಾರ್ಯವನ್ನು ಆತ್ಮ ಸಂತೋಷಕ್ಕಾಗಿ ಮಾಡುತ್ತಿದ್ದೇನೆ ಎಂದು ನಟ ಯಶ್ ಹೇಳಿದರು.

English summary
Actor Yash and Radhika today launched rejuvenation of Talloor Lake in Koppal district and conservation of water in drought hit places.Yashomarga Foundation is an initiative of Actor Yash Tallur Lake Koppal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X