'ಅನಂತಕುಮಾರ್ ಭೇಟಿ ಮಾಡಿಲ್ಲ; ಬಿಜೆಪಿ ಸೇರೊಲ್ಲ'

ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಳ್ಳಾರಿ ಗ್ರಾಮಾಂತರ ಸ್ವತಂತ್ರ ಶಾಸಕ ಶ್ರೀರಾಮುಲು ಅವರು ಬಿಜೆಪಿಗೆ ಹಿಂದಿರುಗಲಿದ್ದೇನೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾದ ವಿಷಯ. ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ ಎಂದು ಇಂದು ತಿಳಿಸಿದ್ದಾರೆ.
ಅನಂತಕುಮಾರ್ ಜತೆ ಚರ್ಚೆ ನಡೆಸಿಲ್ಲ. ಅದೆಲ್ಲಾ ಕೇವಲ ವದಂತಿ. ಬಿಎಸ್‌ಆರ್ ಪಕ್ಷಕ್ಕೆ ಏನೂತೊಂದರೆಯಿಲ್ಲ. ಆ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದೂ ರಾಮು ಮಾರ್ಮಿಕವಾಗಿ ನುಡಿದಿದ್ದಾರೆ.
ಬಿಜೆಪಿ ಪಕ್ಷ ಸೇರಲು ಯಾವುದೇ ಷರತ್ತು ಹಾಕಿಲ್ಲ. ಪಕ್ಷಕ್ಕೆ ಸೇರುವುದಿಲ್ಲ ಎಂದ ಮೇಲೆ ಷರತ್ತಿನ ಅಗತ್ಯವೇನು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರಶ್ನೆಯಾಗಿಯೇ ಉತ್ತರಿಸಿದ್ದಾರೆ. ಈ ವದಂತಿಗಳಿಗೆ ಮಾನ್ಯತೆ ನೀಡುವ ಅಗತ್ಯವಿಲ್ಲ ಎಂದೂ ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದಾರೆ.












Click it and Unblock the Notifications