ನಂದಿ ಬೆಟ್ಟ: ಟಿಪ್ಪು ಡ್ರಾಪ್ ನಿಂದ ಹಾರಿ ಮಹಿಳೆ ಆತ್ಮಹತ್ಯೆ
ಚಿಕ್ಕಬಳ್ಳಾಪುರ, ಮಾರ್ಚ್ 15: ನಂದಿ ಬೆಟ್ಟ, ಜೋಗ್ ಫಾಲ್ಸ್ ಸೇರಿದಂತೆ ಇನ್ನಿತರೆ ಪ್ರವಾಸಿ ತಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಅಧಿಕವಾಗುತ್ತಿದೆ. ಇಂತಹ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆಯೂ ಎದ್ದು ಕಾಣುತ್ತಿದೆ.
ನಂದಿ ಬೆಟ್ಟದಲ್ಲಿರುವ ಟಿಪ್ಪು ಟ್ರಾಪ್‌ನಿಂದ ಹಾರಿ ಮಹಿಳೆಯೊಬ್ಬಳು ಮೃತ ಪಟ್ಟಿರುವ ಘಟನೆ ನಡೆದಿದೆ. ಶ್ವೇತಾ(32) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ, ಕೋಲಾರ ತಾಲೂಕಿನ ಮಾಲೂರು ಮೂಲದವರಾಗಿದ್ದ ಶ್ವೇತ ಬುಧವಾರ ನಂದಿ ಬೆಟ್ಟಕ್ಕೆ ಆಟೋದ ಮೂಲಕ ತೆರಳಿದ್ದರು. ಅಲ್ಲಿಂದ ಟಿಪ್ಪು ಟ್ರಾಪ್ ಗೆ ತೆರಳಿ ಸುಮಾರು 2ಸಾವಿರ ಅಡಿಗಳ ಪ್ರಪಾತಕ್ಕೆ ಬಿದ್ದಿದ್ದಾರೆ.

ದೇಹ ಸಂಪೂರ್ಣವಾಗಿ ಛಿದ್ರವಾಗಿದ್ದು, ಮೃತ ದೇಹವನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟು 38ನೇ ತಿರುವಿನ ಮೂಲಕ ಶವವನ್ನು ಹೊರ ತೆಗೆಯಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ನಂದಿ ಗಿರಿಧಾಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications