ಕರ್ನಾಟಕ ಚುನಾವಣೆ: 'ಜಂಪಿಂಗ್ ಸ್ಟಾರ್' ಅಭ್ಯರ್ಥಿಗಳಲ್ಲಿ ಗೆದ್ದವರು, ಸೋತವರು
ಕರ್ನಾಟಕ ವಿಧಾನಸಭೆಯ ಚುನಾವಣಾ ಫಲಿತಾಂಶ ಹೊರಬಿದ್ದು ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಎಐಸಿಸಿ ಅಂಗಣದಲ್ಲಿದೆ. ಭಾನುವಾರ ( ಮೇ 14) ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಬಗ್ಗೆ ನಿರ್ಧರಿಸುವ ಜವಾಬ್ದಾರಿಯನ್ನು ನೀಡುವ ಕುರಿತು ಅನುಮೋದನೆ ಪಾಸ್ ಮಾಡಲಾಗಿದೆ.
ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನಾಯಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ನಿಯತ್ತು ಬದಲಿಸುವ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯ. ಈ ಬಾರಿಯ ಚುನಾವಣೆಯಲ್ಲೂ ಅದು ಮುಂದುವರಿದಿತ್ತು. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯಂತಹ ಘಟಾನುಗಟಿ ನಾಯಕರುಗಳೇ ಪಕ್ಷವನ್ನು ತೊರೆದು ಇನ್ನೊಂದು ಪಕ್ಷಕ್ಕೆ ಸೇರಿ ಸ್ಪರ್ಧಿಸಿದ್ದರು.

ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಟಿಕೆಟ್ ಸಿಗುವುದಿಲ್ಲ ಎನ್ನುವುದನ್ನು ಅರಿತ ಮುಖಂಡರು ಬೇರೆ ಪಕ್ಷದಿಂದ ಸ್ಪರ್ಧಿಸಿ ತಮ್ಮ ರಾಜಕೀಯ ಭವಿಷ್ಯವನ್ನು ಒರೆಗೆ ಹಚ್ಚಿದ್ದರು. ಇಂತಹ ನಾಯಕರುಗಳಲ್ಲಿ ಸೋತವರು ಯಾರು, ಗೆದ್ದವರು ಯಾರು ಎನ್ನುವುದನ್ನು ಕೆಳಗೆ ನೀಡಲಾಗಿದೆ:
| ಅಭ್ಯರ್ಥಿಯ ಹೆಸರು | ಮೂಲ ಪಕ್ಷ | ಸ್ಪರ್ಧಿಸಿದ ಕ್ಷೇತ್ರ | ಸ್ಪರ್ಧಿಸಿದ ಪಕ್ಷ | ಫಲಿತಾಂಶ |
| ಜಗದೀಶ್ ಶೆಟ್ಟರ್ | ಬಿಜೆಪಿ | ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ | ಕಾಂಗ್ರೆಸ್ | ಸೋಲು |
| ಲಕ್ಷ್ಮಣ ಸವದಿ | ಬಿಜೆಪಿ | ಅಥಣಿ | ಕಾಂಗ್ರೆಸ್ | ಗೆಲುವು |
| ನಾಗರಾಜ ಛಬ್ಬಿ | ಕಾಂಗ್ರೆಸ್ | ಕಲಘಟಗಿ | ಬಿಜೆಪಿ | ಸೋಲು |
| ಮನೋಹರ ತಹಸೀಲ್ದಾರ | ಕಾಂಗ್ರೆಸ್ | ಹಾನಗಲ್ | ಜೆಡಿಎಸ್ | ಸೋಲು |
| ಅನಿಲ್ ಲಾಡ್ | ಕಾಂಗ್ರೆಸ್ | ಬಳ್ಲಾರಿ ನಗರ | ಜೆಡಿಎಸ್ | ಸೋಲು |
| ಆರ್.ಶಂಕರ್ | ಬಿಜೆಪಿ | ರಾಣೆಬೆನ್ನೂರು | ಎನ್ಸಿಪಿ | ಸೋಲು |
| ವಿ.ಎಸ್.ಪಾಟೀಲ | ಬಿಜೆಪಿ | ಯಲ್ಲಾಪುರ | ಕಾಂಗ್ರೆಸ್ | ಸೋಲು |
| ಎನ್.ವೈ.ಗೋಪಾಲಕೃಷ್ಣ | ಬಿಜೆಪಿ | ಮೊಳಕಾಲ್ಮೂರು | ಕಾಂಗ್ರೆಸ್ | ಕಾಂಗ್ರೆಸ್ |
| ಎಸ್.ತಿಪ್ಪೇಸ್ವಾಮಿ | ಕಾಂಗ್ರೆಸ್ | ಮೊಳಕಾಲ್ಮೂರು | ಬಿಜೆಪಿ | ಸೋಲು |
| ಎಚ್.ಡಿ.ತಮ್ಮಯ್ಯ | ಬಿಜೆಪಿ | ಚಿಕ್ಕಮಗಳೂರು | ಕಾಂಗ್ರೆಸ್ | ಗೆಲುವು |
| ಮಧು ಬಂಗಾರಪ್ಪ | ಜೆಡಿಎಸ್ | ಸೊರಬ | ಕಾಂಗ್ರೆಸ್ | ಗೆಲುವು |
| ಯು.ಬಿ.ಬಣಕರ್ | ಬಿಜೆಪಿ | ಹಿರೇಕೆರೂರು | ಕಾಂಗ್ರೆಸ್ | ಗೆಲುವು |
| ಕೃಷ್ಣಾ ನಾಯಕ | ಕಾಂಗ್ರೆಸ್ | ಹೂವಿನಹಡಗಲಿ | ಬಿಜೆಪಿ | ಗೆಲುವು |
| ನೇಮಿರಾಜ ನಾಯಕ್ | ಬಿಜೆಪಿ | ಹಗರಿಬೊಮ್ಮನಹಳ್ಳಿ | ಜೆಡಿಎಸ್ | ಗೆಲುವು |
| ಎಂ.ಪಿ.ಲತಾ | ಕಾಂಗ್ರೆಸ್ | ಹರಪನಹಳ್ಳಿ | ಪಕ್ಷೇತರ | ಗೆಲುವು |
| ಎಚ್. ಆನಂದಪ್ಪ | ಕಾಂಗ್ರೆಸ್ | ಮಾಯಕೊಂಡ | ಜೆಡಿಎಸ್ | ಸೋಲು |
| ಮಾಡಾಳ್ ಮಲ್ಲಿಕಾರ್ಜುನ | ಬಿಜೆಪಿ | ಚನ್ನಗಿರಿ | ಪಕ್ಷೇತರ | ಪಕ್ಷೇತರ |
| ಎಚ್.ಪಿ.ರಾಜೇಶ್ | ಕಾಂಗ್ರೆಸ್ | ಜಗಳೂರು | ಪಕ್ಷೇತರ | ಸೋಲು |
| ಎಂ.ಪಿ.ಕುಮಾರಸ್ವಾಮಿ | ಬಿಜೆಪಿ | ಸಕಲೇಶಪುರ | ಜೆಡಿಎಸ್ | ಸೋಲು |
| ಆಯನೂರು ಮಂಜುನಾಥ | ಬಿಜೆಪಿ | ಶಿವಮೊಗ್ಗ | ಜೆಡಿಎಸ್ | ಸೋಲು |
| ಲೋಕೇಶ ನಾಯಕ | ಕಾಂಗ್ರೆಸ್ | ಕೂಡ್ಲಿಗಿ | ಬಿಜೆಪಿ | ಸೋಲು |
| ಬಿ.ವಿ.ನಾಯಕ | ಕಾಂಗ್ರೆಸ್ | ಮಾನ್ವಿ | ಬಿಜೆಪಿ | ಸೋಲು |
| ಆರ್.ರುದ್ರಯ್ಯ | ಕಾಂಗ್ರೆಸ್ | ಲಿಂಗಸುಗೂರು | ಕೆಆರ್ಪಿಪಿ | ಸೋಲು |
| ಸೋಮನಗೌಡ ಯಾನೆ ಅಪ್ಪುಗೌಡ | ಬಿಜೆಪಿ | ಬಸವನಬಾಗೇವಾಡಿ | ಜೆಡಿಎಸ್ | ಸೋಲು |
| ಅಖಂಡ ಶ್ರೀನಿವಾಸಮೂರ್ತಿ | ಕಾಂಗ್ರೆಸ್ | ಪುಲಿಕೇಶಿನಗರ | ಬಿಎಸ್ಪಿ | ಸೋಲು |












Click it and Unblock the Notifications