ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಹಿಸುವುದಿಲ್ಲ : ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 25 : ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ 'ಅಶಿಸ್ತು' ಯಾವುದೇ ಕಾರಣಕ್ಕೂ ತಲೆದೊರಬಾರದು. ಅಶಿಸ್ತನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ ಮತ್ತು ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.

ಅಚ್ಛೇ ದಿನ್ ಕೇವಲ ಬಾಯಿ ಮಾತಿನಲ್ಲಿ ಮಾತ್ರ - ಸಿದ್ದರಾಮಯ್ಯ

ವಿಧಾನಸೌಧದ ಮುಂಭಾಗ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ 'ಕರ್ನಾಟಕ ದರ್ಶನ ಸೈಕಲ್ ಜಾಥಾ' ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ, ಪೊಲೀಸರು ಆತ್ಮಸ್ಥೈರ್ಯವನ್ನು ಹೊಂದಿರಬೇಕು, ಕ್ರಿಯಾಶೀಲರಾಗಿ, ಸಮಾಜಮುಖಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

Will not tolerate indiscipline in police dept : Siddaramaiah

ಪೊಲೀಸರು ದೈಹಿಕವಾಗಿ ಸದೃಢವಾಗಿರಬೇಕು ಮತ್ತು ಮಾನಸಿಕವಾಗಿ ಸಮರ್ಥರಾಗಿರಬೇಕು. ಹೀಗಿದ್ದಾಗ ಮಾತ್ರ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯ. ಇದು ಕರ್ತವ್ಯದ ಒಂದು ಭಾಗ ಎಂದು ಪೊಲೀಸರು ಭಾವಿಸಬೇಕು. ಪೊಲೀಸರು ಜನಸ್ನೇಹಿಯಾಗಿದ್ದಾರೆ ಎಂಬ ಭಾವನೆ ಜನರಲ್ಲಿ ಬರಬೇಕು ಎಂದು ಅವರು ಕಿವಿಮಾತು ಹೇಳಿದರು.

ಜೈಲು ಅಕ್ರಮ ಬಯಲಿಗೆಳೆದ ಮತ್ತೊಂದು ಸ್ಫೋಟ ಪತ್ರ

ಕೆ.ಎಸ್.ಆರ್.ಪಿ. ಪೊಲೀಸರು ಬಹುತೇಕ ಸಂದರ್ಭದಲ್ಲಿ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸಮಾಜದಲ್ಲಿ ಅನೇಕ ದುಷ್ಟಶಕ್ತಿಗಳು ಇರುತ್ತವೆ. ಸಾಮರಸ್ಯ, ನೆಮ್ಮದಿ ಬಯಸುವ ಜನರಿಗೆ ಆಗಾಗ ತೊಂದರೆ ಉದ್ಭವವಾಗುತ್ತಿರುತ್ತವೆ. ಕಾನೂನು ಸುವ್ಯವ್ಯಸ್ಥೆ ಕಾಪಾಡುವಾಗ ಕೆಲವು ಬಾರಿ ಪೊಲೀಸರು ಕಠಿಣವಾಗಿ ವರ್ತಿಸಬೇಕಾಗುತ್ತದೆ ಎಂದರು.

Will not tolerate indiscipline in police dept : Siddaramaiah

ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದ 59 ಮಂದಿ ಪೊಲೀಸ್ ಕ್ರೀಡಾಪಟುಗಳು ಮತ್ತು ಕೆ.ಎಸ್.ಆರ್.ಪಿ. ಎಡಿಜಿಪಿ ಭಾಸ್ಕರ್ ರಾವ್ ಸೇರಿದಂತೆ ಪೊಲೀಸ್ ಅಧಿಕಾರಿಗಳಾದ ಅಯ್ಯಪ್ಪ ಮತ್ತು ಸಮಂತ್ ಅವರುಗಳನ್ನು ಇದೇ ಸಂದರ್ಭ ಮುಖ್ಯಮಂತ್ರಿಗಳು ಸನ್ಮಾನಿಸಿ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ವಿತರಿಸಿದರು.

Will not tolerate indiscipline in police dept : Siddaramaiah

ಡಿ.ಜಿ.ಐ.ಜಿ.ಪಿ. ರೂಪಕ್‍ಕುಮಾರ್ ದತ್ತ ಅವರು, ಕೆ.ಎಸ್.ಆರ್.ಪಿ. ಸೈಕಲಿಸ್ಟ್ ಕ್ರೀಡಾಪಟುಗಳು ಜುಲೈ 12, 2017ರಂದು ಬೀದರನಿಂದ ಪ್ರಾರಂಭಿಸಿ 14 ದಿನಗಳಕಾಲ 1750 ಕಿ.ಮೀ. ಕ್ರಮಿಸಿ ಮಾಗಡಿ ಮೂಲಕ ವಿಧಾನಸೌಧವನ್ನು ಪ್ರವೇಶಿಸಿದ್ದಾರೆ. ಸಾಮಾಜಿಕ ಐಕ್ಯತೆ, ಪೊಲೀಸ್ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ, ಪರಿಸರ ರಕ್ಷಣೆ, ಕ್ರೀಡಾ ಮನೋಭಾವ, ಸ್ವಚ್ಛತೆ ಇವುಗಳ ಕುರಿತು ಜಾಥಾದುದ್ದಕ್ಕೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ. ಒಟ್ಟು 28 ಜಿಲ್ಲೆಗಳನ್ನು ಕ್ರಮಿಸಿದ್ದಾರೆ ಎಂದು ವಿವರಿಸಿದರು.

Will not tolerate indiscipline in police dept : Siddaramaiah
DIG Roopa transferred to Road safety

ಕ್ರೀಡಾ ಯುವಸಬಲೀಕರಣ ಮತ್ತು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು 5 ಲಕ್ಷ ರೂ.ಗಳ ಚೆಕ್ಕನ್ನು ಕೆ.ಎಸ್.ಆರ್.ಪಿ.ಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷರಾದ ಕೆ. ಗೋವಿಂದರಾಜ್, ಗೃಹಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸುಭಾಶ್‍ಚಂದ್ರ ಅವರುಗಳು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Will not tolerate indiscipline in police department, Karnataka chief minister Siddaramaiah warned the police. He was talking in Vidhana Soudha after receiving and felicitating police personnel who completed bicycle jatha in 28 districts in Karnataka.
Please Wait while comments are loading...